ತಿಳಿಗೇಡಿ.
ತಿಳಿದು ತಿಳಿದು ಕೂಡ
ತಿಳಿನೀರ ಕದಡದಿರು
ತಿಳಿಗೇಡಿ ಮಾನವ.
ತಿಳಿದು ತಿಳಿದು ಸಹ
ತಿಳಿದವರ ಕೆಣಕದಿರು
ತಿಳಿಗೇಡಿ ಮಾನವ.
ತಿಳಿದು ತಿಳಿದು ಮತ್ತೆ
ತಿಳಿಯದಂತೆ ಆಡದಿರು
ತಿಳಿಗೇಡಿ ಮಾನವ.
ತಿಳಿದು ತಿಳಿದು ಎಲ್ಲರಿಗೂ
ತಿಳಿಸದಲೇ ಹೋಗದಿರು
ತಿಳಿಗೇಡಿ ಮಾನವ.
ತಿಳಿದು ತಿಳಿದು ತಪ್ಪು
ತಿಳುವಳಿಕೆ ಮಾಡದಿರು
ತಿಳಿಗೇಡಿ ಮಾನವ.
ತಿಳಿದು ತಿಳಿದು ಈ ಶಿವನ
ತಿಳಿಗೇಡಿ ನೀನೆನ್ನದಿರು
ತಿಳಿಗೇಡಿ ಮಾನವ.
ಶಿವಮೂರ್ತಿ.ಹೆಚ್. ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್,
ಅನುಭವಮಂಟಪ, ದಾವಣಗೆರೆ.
ದೂ.ಸಂ.9591417815.