ವಿಜಯನಗರ ಕೂಡ್ಲಿಗಿ: ಕರ್ನಾಟಕ ರಾಜ್ಯ ಶಿಳ್ಳೆಕ್ಯಾತರ, ಅಲೆಮಾರಿ ಅಭಿವೃದ್ಧಿ (ಪ.ಜಾ)ಸಂಘದ ಪ್ರಸಕ್ತ ವರ್ಷದ ವಾರ್ಷಿಕ ಮಹಾಸಭೆಯನ್ನು. ಜನವರಿ19ರಂದು ಹರಿಹರ ತಾಲೂಕು, ಕವಲೆತ್ತು ಗ್ರಾಮದಲ್ಲಿ ಜರುಗಿಸುತ್ತಿರುವುದಾಗಿ, ಸಂಘದ ವಿಜಯನಗರ ಜಿಲ್ಲಾ ಮಹಿಳಾಧ್ಯಕ್ಷರಾದ. ಕೂಡ್ಲಿಗಿಯ ಗೌರಮ್ಮ ಮಹಂತೇಶ ಸಿಂಧೆಯವರು, ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕವಲೆತ್ತು ಗ್ರಾಮದ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಹತ್ತಿರವಿರುವ, ಶ್ರೀ ದುರ್ಗಾದೇವಿ ಕಲ್ಯಾಣ ಮಂಟಪದಲ್ಲಿ ಸಭೆ ಜರುಗಲಿದೆ ಎಂದು ಅವರು ತಿಳಿಸಿದ್ದಾರೆ. ಮಹಿಳಾ ಮುಖಂಡರಾದ. ಸಭೆಯಲ್ಲಿ ಮಹತ್ತರವಾದ ವಿಷಯಗಳ ಕುರಿತು, ಸುದೀರ್ಘ ಚರ್ಚೆಗಳು ನಡೆಯಲಿವೆ, ಸಭೆಯಲ್ಲಿ ಸಂಘದ ರಾಜ್ಯದ ಎಲ್ಲಾ ಹಾಲಿ ಮತ್ತು ಮಾಜಿ ಪದಾಧಿಕಾರಿಗಳು, ಎಲ್ಲಾ ಜಿಲ್ಲೆಗಳ ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳು, ತಾಲೂಕು ಘಟಕಗಳ ಪದಾಧಿಕಾರಿಗಳು. ಸಮಜಾಜದ ರಾಜಕೀಯ ಮುಖಂಡರು, ವಿವಿದ ಜನಪ್ರತಿ ನಿಧಿಗಳು, ಪ್ರಮುಖ ಮಹಿಳೆ ಮುಖಂಡರು. ಪ್ರಜ್ಞಾವಂತ ಯುವಕರು, ವಿವಿದ ಇಲಾಖೆಗಳಲ್ಲಿ ಕರ್ಥವ್ಯ ನಿರ್ವಹಿಸುತ್ತಿರುವ, ಶಿಳ್ಳೇಖ್ಯಾತ ಸಮಾಜದ ಸರ್ಕಾರಿ ನೌಕರರು ಹಿರಿಯರು ಭಾಗವಹಿಸಲಿದ್ದಾರೆ. ಕಾರಣ ನಾಡಿನಾಧ್ಯಂತ ವಾಸವಿರುವ ಸಮಾಜದ ಪ್ರಜ್ಞಾವಂತ ಯುವಕರು, ಹಿರಿಯರು ಗಣ್ಯಮಾನ್ಯರು. ಸದರಿ ಸಭೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡು, ಸಭೆಗೆ ಸೂಕ್ತ ಸಲಹೆ ಸೂಚನೆ ಅಭಿಪ್ರಾಯಗಳನ್ನು ನೀಡಬೇಕಾಗಿದೆ ಎಂದು ಅವರು. ನಾಡಿನಲ್ಲಿರುವ ಶಿಳ್ಳೆಕ್ಯಾತರ ಸಮಾಜದ, ಸಮಸ್ತ ಜನತೆಯಲ್ಲಿ, ಈ ಮೂಲಕ ಕೋರಿದ್ದಾರೆ. ಮತ್ತು ಸರ್ವರೂ ಸಮಾಜದ ಶ್ರೇಯೋಭಿವೃದ್ಧಿಗಾಗಿ, ತನು ಮನ ಧನ ಅರ್ಪಿಸಬೇಕೆಂದು ಅವರು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ, ಶ್ರೀ ಮತಿ ಶೈಲಾ ಸೀತಾರಾಮ ಪಾಚಂಗೆ. ಹಾಗೂ ರಾಜ್ಯ ಕಾರ್ಯದರ್ಶಿ ಮುತ್ತಣ್ಣ ಗಂಗೂರ ಉಪಸ್ಥಿತರಿದ್ದರು.
✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ