ನಾ ಗೆಳತಿಯಾದೆ
ಮರೆತು ಹೋಗಲಿ ಕಹಿ ನೆನಪುಗಳು ನಿನ್ನ ಕನವರಿಕೆಯಲಿ
ನಿನ್ನೊಂದಿಗೆ ಕಂಡ ಕನಸೆಲ್ಲವೂ ನಿನ್ನ ಕೊಳಲ ರಾಗದಲ್ಲಿ ಕೂಗಿ ಮರೆಯಾಗಲಿ
ಆ ರಾಗ ಕೇಳುತ ನಿನ್ನ ಪೂಜಿಸುವ ಮೀರಾ ನಾನಾಗಲಿ
ರಾಮನ ರೂಪದಲಿ ನೀ ಕಂಡರೆ
ನಿನ್ನ ವರಿಸುವ ಸೀತೆ ನಾನಲ್ಲ
ನಿನಗಾಗಿ ಕಾಯುವ
ಶಬರಿ ನಾನು
ನಾರಾಯಣ ಹೃದಯದಲಿ ನಲಿವ ಲಕ್ಷ್ಮಿ ನಾನಲ್ಲ
ಅವನ ಸಂಕಲ್ಪ ಪೂರ್ತಿ ಗಾಗಿ
ದೇವಕಿಯ ಭ್ರೂಣ
ಬದಲಾಯಿಸಿದ ಯೋಗಮಾಯಿ ನಾ
ಬಲರಾಮನಾಗಿ ಕೃಷ್ಣನ ಕಾಯಲು
ರೇವತಿ ನಾನಾಗಲಾರೆ
ನೀ ನನ್ನ ಗೆಳೆಯಾ ಎನ್ನುವ
ಗೆಳತಿ ನಾನು
ನರಸಿಂಹನ ಅವತಾರದಲ್ಲಿ
ನೀ ಘರ್ಜಿಸಲು
ನಿನ್ನೊಂದಿಗೆ ಆರ್ಭಟಿಸುವ ಭದ್ರಕಾಳಿಯೂ ನಾನಲ್ಲ
ನಿನ್ನ ಶಾಂತಿ ಮಂತ್ರವಾಗುವ ಸ್ನೇಹಿತೆಯೂ ನಾ
ನಿನ್ನ ಪ್ರೇಮಿಸುವ ರುಕ್ಮಿಣಿ ಸತ್ಯಭಾಮೆ ನಾನಲ್ಲ
ಅನಂತದವರೆಗೆ ನಿನ್ನ ಆರಾಧಿಸುವ ಗೆಳತಿ ನಾ ರಾಧೆ
ಗೆಳತಿಯಾದೆ ಗೆಳತಿಯಾದೆ ಗೆಳತಿಯಾದೆ
ಸುಮಾಶಿವಕುಮಾರ್ (ದಾವಣಗೆರೆ )
ಸಹ ಶಿಕ್ಷಕರು