ಜ.24ಕ್ಕೆ “ಶಿವಯೋಗಿ ಶ್ರೀಸಿದ್ದರಾಮೇಶ್ವರ” ಚಿತ್ರ ಬಿಡುಗಡೆ.

Spread the love

.24ಕ್ಕೆಶಿವಯೋಗಿ ಶ್ರೀಸಿದ್ದರಾಮೇಶ್ವರಚಿತ್ರ ಬಿಡುಗಡೆ.

ಹುಬ್ಬಳ್ಳಿ : ಓಂಕಾರ ಮೂವೀಸ್ ಬೆಂಗಳೂರ ಅವರ  ಶ್ರೀಮತಿ ಸುಜಾತ ರಾಜ್ ಕುಮಾರ್ ಅರ್ಪಿಸುವ

ಪುರುಷೋತ್ತಮ್ ಓಂಕಾರ್ ಸ್ವಾಮಿಯವರ ದಕ್ಷ ನಿರ್ದೇಶನದಲ್ಲಿ ಮೂಡಿಬಂದಿರುವಂತಹ

“ಶಿವಯೋಗಿ ಶ್ರೀ ಸಿದ್ದರಾಮೇಶ್ವರ” ಚಿತ್ರದ ಪತ್ರಿಕಾಗೋಷ್ಟಿ ಹುಬ್ಬಳ್ಳಿಯ ಪತ್ರಿಕಾ ಭವನದಲ್ಲಿ  ಜರುಗಿತು.

ಈ ಚಿತ್ರದಲ್ಲಿ ನಾಯಕ ನಟರಾಗಿ ಉತ್ತರ ಕರ್ನಾಟಕದ ಬೈಲಹೊಂಗಲ ತಾಲೂಕಿನ ಯುವ ಪ್ರತಿಭೆಯಾದ ರಾವಣ ಕತ್ತಿಯವರು ಸಿದ್ದರಾಮೇಶ್ವರನಾಗಿ ಅಭಿನಯಿಸಿದ್ದಾರೆ. ಮೊದಲ ಬಾರಿಗೆ

ಒಂದು ಪೌರಾಣಿಕ ಕಥೆಯನ್ನು ಈಗಿನ ಕಾಲದ ತಾಂತ್ರಿಕತೆಯೊಂದಿಗೆ ಸಿದ್ಧಪಡಿಸಲಾಗಿದ್ದು

ಸಿದ್ದರಾಮೇಶ್ವರ ಪವಾಡಗಳೊಂದಿಗೆ ಮನರಂಜನೆಯನ್ನು  ಹೊಂದಿದೆ.

ಈಗಿನ ಕಾಲದ ಜನರಿಗೆ ಶರಣರ ಸಂಗತಿಗಳನ್ನು ಮನರಂಜನಾತ್ಮಕವಾಗಿ ಮುಟ್ಟಿಸಲು

ಎನ್.ಎಸ್ ರಾಜಕುಮಾರ್ ಅವರು ಚಿತ್ರಕ್ಕೆ ಬಂಡವಾಳವನ್ನು ಹೂಡಿಕೆ ಮಾಡಿದ್ದು ಹಾಗೂ ಸಹ ನಿರ್ಮಾಪಕರಾಗಿ.ಜೆ.ಕೆ. ಸುನಿಲ್ ಕುಮಾರ್  ಕೈಜೋಡಿಸಿದ್ದಾರೆ.

ಈ ಚಿತ್ರದಲ್ಲಿ ಎರಡು ಹಾಡುಗಳು ಹಾಗೂ 4 ವಚನಗಳಿದ್ದು  ಚಿತ್ರಕ್ಕೆ ಸಂಗೀತ ಸಂಯೋಜನೆ  ರಾಜ್ ಭಾಸ್ಕರ್ ಮಾಡಿದ್ದಾರೆ . ಛಾಯಾಗ್ರಹಣ ಗೌರಿ ವೆಂಕಟೇಶ್,

ಚಿತ್ರದ ಎಡಿಟಿಂಗ್ ಕಲರ್ ಕರೆಕ್ಷನ್ ಹಾಗೂ ಗ್ರಾಫಿಕ್ಸ್ ಕೆಲಸವನ್ನು ಆರ್.ಅನಿಲ್ ಕುಮಾರ್ , ಪತ್ರಿಕಾಸಂಪರ್ಕ ಡಾ. ಪ್ರಭು ಗಂಜಿಹಾಳ,  ಡಾ.ವೀರೇಶ್ ಹಂಡಗಿ ಅವರದಿದೆ.

ಮುಖ್ಯತಾರಾಗಣದಲ್ಲಿ ರಾವಣ ಕತ್ತಿ. ಗಣೇಶ್ ರಾವ್ ಕೇಸರ ಕರ್, ನಾಗೇಂದ್ರ ಅರಸು.ಬಸವರಾಜ್ ರಕ್ಷಾಗೌಡ,ಅನ್ನಪೂರ್ಣ, ಪ್ರಮೀಳಾ ಸುಬ್ರಹ್ಮಣ್ಯ,ಬಾಲಕ ಸಿದ್ದರಾಮನಾಗಿ ಮಾ.ಸಮರ್ಥ,ಬಸವರಾಜ ಹಾಗೂ ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರವು ಇದೆ ಜ.24 ರಂದು ರಾಜ್ಯಾದ್ಯಂತ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.ಪತ್ರಿಕಾ ಮಾಧ್ಯಮ ಹಾಗೂ ಪ್ರೇಕ್ಷಕ ಪ್ರಭುಗಳು ಚಲನಚಿತ್ರ ವೀಕ್ಷಿಸಿ ಪ್ರೋತ್ಸಾಹ ನೀಡಬೇಕೆಂದು  ನಿರ್ದೇಶಕ ಪುರುಷೋತ್ತಮ ಓಂಕಾರಸ್ವಾಮಿ ಹೇಳಿದರು.

** -ಡಾ.ಪ್ರಭು ಗಂಜಿಹಾಳ

Leave a Reply

Your email address will not be published. Required fields are marked *