ಅಯ್ಯಗಳ ಮಲ್ಲಾಪುರ:  ಮದ್ಯ ಅಕ್ರಮ ತಡೆಯುವಂತೆ ಕ್ರಮಕ್ಕೆ ಒತ್ತಾಯ,

Spread the love

ಅಯ್ಯಗಳ ಮಲ್ಲಾಪುರ:  ಮದ್ಯ ಅಕ್ರಮ ತಡೆಯುವಂತೆ ಕ್ರಮಕ್ಕೆ ಒತ್ತಾಯ,

ರಾಜ್ಯ ಅಭಕಾರಿ ಆಯುಕ್ತರಿಗೆ ದೂರು- ವಿಜಯನಗರ ಜಿಲ್ಲೆ ಕೂಡ್ಲಿಗಿ:ತಾಲೂಕಿನ ಅಯ್ಯಗಳ  ಮಲ್ಲಾಪುರದಲ್ಲಿ, ಹಲವು ವರ್ಷಗಳಿಂದಲೂ ಮದ್ಯ ಅಕ್ರಮ ಮಾರಾಟ ತಡೆಯುವಂತೆ. ಗ್ರ‍ಾಮದ  ಪ್ರಜ್ಞಾವಂತ ಯುವಕರು ಹೋರಾಟಗಾರ ಪ್ರವೀಣ ನೇತೃತ್ವದಲ್ಲಿ, ಬೆಂಗಳೂರಿನಲ್ಲಿರುವ ರಾಜ್ಯಅಭಕಾರಿ ಇಲಾಖಾ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಗ್ರಾಮದ ಹೋರಾಟಗಾರರ  ಹಾಗೂ ಗ್ರಾಮಸ್ಥರ ಪರವಾಗಿ, ಗ್ರಾಮದ ಯುವ ಮುಖಂಡ ಹಾಗೂ ಹೋರಾಟಗಾರರಾದ ಪ್ರವೀಣಕುಮಾರವರು. ಜ18ರಂದು, ಬೆಂಗಳೂರಿನಲ್ಲಿರುವ ರಾಜ್ಯ ಅಭಕಾರಿ ಇಲಾಖಾ ಆಯುಕ್ತರ ಕಚೇರಿಗೆ ಖುದ್ದಾಗಿ ಭೇಟಿ ನೀಡಿದ್ದು. ಅವರು ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಿ, ಗ್ರಾಮದಲ್ಲಿ ಮದ್ಯ ಅಕ್ರಮ ಜರುಗುತ್ತಿರುವ ಬಗ್ಗೆ ದೂರು ಸಲ್ಲಿಸಿದ್ದಾರೆ. ಕೂಡ್ಲಿಗಿಯಲ್ಲಿರುವ ಇಲಾಖಾಧಿಕಾರಿ  ಮನಸ್ಸು ಮಾಡುತ್ತಿಲ್ಲವೇಕೆ.!?-ಹಲವು ದಶಕಗಳಿಂದ ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟ ಹಾಗೂ ಸಾಗಾಟ ಎಗ್ಗಿಲ್ಲದೇ ಜರುಗುತ್ತಿದ್ದು, ಈವರೆಗೂ ಅವರನ್ನು ಮಾಲು ಸಮೇತ ಹಿಡಿಯುವಲ್ಲಿ ಮನಸ್ಸು ಮಾಡುತ್ತಿಲ್ಲ ಏಕೆ.!? ಎಂಬ ಪ್ರೆಶ್ನೆ ಗ್ರಾಮದ ಪ್ರಜ್ಞಾವಂತರಲ್ಲಿ ಕಾಡುತ್ತಿದೆಯಂತೆ.  ಮದ್ಯ ಅಕ್ತಮ ಮಾರಾಟ ಹಗಲಿರುಳೂ ಎಡಬಿಡದೇ ಜರುಗುತ್ತಿದೆ, ಮದ್ಯ ಸಾಗಾಣಿಕೆಯೂ ಹಾಡು ಹಗಲೇ  ಜರುಗುತ್ತಿದೆ ಎಂದು  ಹೋರಾಟಗಾರ ಅದಿಕಾರಿಗಳಲ್ಲಿ ದೂರಿದ್ದಾರೆ. ಅವರು ಗ್ರಾಮದಲ್ಲಿ ಜರುಗುತ್ತಿರುವ ಮದ್ಯ  ಮಾರಾಟದಿಂದ  ಆಗುತ್ತಿರುವ ದುಷ್ಪರಿಣಾಮಗಳು, ಹಾಗೂ ಅಪರಾಧಗಳು ಜರುಗುತ್ತಿರುವ ಬಗ್ಗೆ ವಿವರಿಸಿದ್ದಾರೆ. ಸಂಬಂಧಿಸಿದಂತೆ ಕೂಡ್ಲಿಗಿಯ ಅಭಕಾರಿ ಅಧಿಕಾರಿಗಳಿಗೆ ತಾವು ನೀಡಿರುವ ದೂರಿಗೆ, ಸರಿಯಾದ ಸ್ಪಂಧನೆ ದೊರಕುತ್ತಿಲ್ಲ ಪರಿಣಾಮ ಅಕ್ರಮ ದಂಧೆ ಸಕ್ರಮವಾಗಿ ಜರುಗುತ್ತಿದೆ ಎಂದು ಹೋರಾಟಗಾರರು  ವಿವರಿಸಿದ್ದಾರೆ. ಅಭಕಾರಿ ಇಲಾಖೆಯ ಕೂಡ್ಲಿಗಿ ಕಚೇರಿಯ ಕೆಲ ಸಿಬ್ಬಂದಿ, ಗ್ರಾಮದಲ್ಲಿ ಜರುಗುತ್ತಿರುವ ಮದ್ಯ ಅಕ್ರಮ ಚಟುವಟಿಕೆಗೆ ಕುಮ್ಮಕ್ಕು ನೀಡುತ್ತಿರುವುದಾಗಿ ಅವರು ದೂರಿನಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ. ಮದ್ಯ ಅಕ್ರಮ ಮಾರಾಟ ಹಾಗೂ ಸಾಗಾಟ ಸಕ್ರಮ ವಾಗಿ ಜರುಗುತ್ತಿದೆ, ಪರಿಮಣಾಮ ಯುವಕರು ರೈತರು ಕಾರ್ಮಿಕರು ಮದ್ಯ ವ್ಯಸನಕ್ಕೀಡಾಗುತ್ತಿದ್ದಾರೆ. ಕೌಟುಂಬಿಕ ಕಲಹಗಳು ಹೆಚ್ಚಾಗಿ ಜರುಗುತ್ತಿವೆ, ಬೀದಿ ಕಲಹಗಳು ಗುಂಪುಘರ್ಷಣೆಗಳು ಅಧಿಕವಾಗಿವೆ. ಇದರಿಂದಾಗಿ ಗ್ರಾಮದಲ್ಲಿ ನೆಮ್ಮದಿ ಮಾಯವಾಗಿದ್ದು, ಉಜ್ವಲ ಭವಿಷ್ಯ ಕಾಣಬೇಕಾಗಿರುವ ಯುವಕರು ಮದ್ಯ ವ್ಯಸನಕ್ಕೀಡಾಗಿ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಬಹುತೇಕ ಕಾರ್ಮಿಕರು ರೈತರು ಬಡ ದಲಿತ ವರ್ಗದವರು, ಸುಲಭವಾಗಿ ಕೈಗೆಟುಕುತ್ತಿರುವ ಮದ್ಯವನ್ನು ಹಗಲಿರುಳೆನ್ನದೇ ಸೇವಿಸುತ್ತಿದ್ದಾರೆ. ಹಾಗಾಗಿ ಅವರು ಆರ್ಥಿಕ ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ, ಬಂಡವಾಳ ಶಾಹಿಗಳು ಮಾತ್ರ ಆರ್ಥಿಕವಾಗಿ ಭಲಿಷ್ಠರಾಗುತ್ತಿದ್ದಾರೆ. ಗ್ರಾಮದಲ್ಲಿರುವ ಮುಖಂಡನೆಂಬ ಸೋಗಿ ನಲ್ಲಿರುವ ಮೂರ್ಖರ   ಕುಮ್ಮಕ್ಕಿನಿಂದಾಗಿ, ಮದ್ಯ ಅಕ್ರಮ ಮಾರಾಟಗಾರರಿಗೆ ಬಕೇಟ್ ಹಿಡಿಯೋ  ಬೆರಳೆಣಿಕೆಯ ಭಂಡ ಬಡಾಯಿಕೋರರ   ಸಹಕಾರದಿಂದಾಗಿ. ಗ್ರ‍ಾಮದಲ್ಲಿ ಮದ್ಯ ಅಕ್ರಮ ಮಾರಾಟ, ಹಾಗೂ ಸಾಗಾಟ ಕಳೆದ ಎರೆಡು ದಶಕಗಳಿಂದ ಎಗ್ಗಿಲ್ಲದೇ ಜರುಗುತ್ತಿದೆ ಎಂದು ಪ್ರಜ್ಞಾವಂತ ಯುವಕರು ದೂರಿದ್ದಾರೆ. ಸಂಬಂಧಿಸಿದಂತೆ ಕೂಡ್ಲಿಗಿ ಅಭಕಾರಿ ಇಲಾಖಾಧಿಕಾರಿಗಳಿಗೆ ಹಾಗೂ , ಪೊಲೀಸ್ ಇಲಾಖಾಧಿಕಾರಿಗಳಿಗೆ ದೂರು ನೀಡಲಾಗಿದೆ. ಅವರಿಂದ ಮದ್ಯ ಅಕ್ರಮ ಮಾರಾಟ ತಡೆಯಲಾಗಿಲ್ಲ, ಮದ್ಯ ಅಕ್ರಮ ಸಾಗಾಣಿಕೆ ತಡೆಯಲಾಗಿಲ್ಲ ಎಂದು ಗ್ರಾಮದ ಹೋರಾಟಗಾರರು ತಿಳಿಸಿದ್ದಾರೆ. ತಾವು ಸಾಕಷ್ಟು ಬಾರಿ ಸ್ಥಳೀಯ ಅಭಕಾರಿ ಅಧಿಕಾರಿಗೆ ನಿಖರ ಮಾಹಿತಿ ನೀಡಿದ್ದು, ಯಾವ ಇಲಾಖೆಯವರೂ ಸಹ ಮದ್ಯ ಅಕ್ರಮಕೋರರನ್ನು ಹಿಡಿಯಲಾಗಿಲ್ಲ. ಬೆಳ್ಳಂಬೆಳಿಗ್ಗೆ ಬೇಕ್ ಗಳಲ್ಲಿ ಗ್ರಾಮಕ್ಕೆ ಮದ್ಯ ವನ್ನು ರಾಜಾ ರೋಷವಾಗಿ ತಂದು, ಗ್ರಾಮದಲ್ಲಿನ ಮಾರಾಟಗಾರರಿಗೆ ತಲುಪಿಸಲಾಗುತ್ತಿದೆ. ಆದ್ರೂ ಅಭಕಾರಿಯವರಿಗೆ ಹಾಗೂ ಪೊಲೀಸ್ ರಿಗೆ ಮದ್ಯ ಸಾಗಿಸುವವರನ್ನು, ಮದ್ಯ ಸಮೇತ ಹಿಡಿಯಲಾಗುತ್ತಿಲ್ಲ ಇಲಾಖೆಯವರು ಅಷ್ಟೊಂದು ಅಶಕ್ತರಾಗಿದ್ದಾರೆ. ಈ ಕಾರಣಕ್ಕಾಗಿ ತಾವು ಸಂಬಂಧಿಸಿದ ರಾಜ್ಯ ಉನ್ನತಾಧಿಕಾರಿಗಳಲ್ಲಿ ತೆರಳಿ, ಲಿಖಿತ ದೂರು ನೀಡಿ ಸ್ಥತಿ ಗತಿಗಳನ್ನು ಇಲಾಖೆಯ ಆಯುಕ್ತರಿಗೆ ಮನವರಿಕೆ ಮಾಡಿಕೊಟ್ಟಿರುವುಾಗಿ ಅವರು ತಿಳಿಸಿದ್ದಾರೆ. ಮದ್ಯ ಅಕ್ರಮ ತಡೆಯಬೇಕಿರುವ ಪೊಲೀಸರು ಹಾಗೂ ಅಭಕಾರಿ ಇಲಾಖೆಯವರು,  ಕೂಡ್ಲಿಗಿ ಯಲ್ಲಿ ಇದ್ದರೂ ಪ್ರಯೋಜವಾಗಿಲ್ಲ ಎಂದು. ಹೋರಾಟಗಾರರು ಅಭಕಾರಿ ಇಲಾಖೆಯ ಉನ್ನತಾಧಿಕಾರಿಗಳ ಬಳಿ, ತಮ್ಮ ಬೇಸರ ವ್ಯಕ್ತಪಡಿಸಿ ಅಲವತ್ತುಕೊಂಡಿದ್ದಾರೆ.   20 ವರ್ಷಗಳಿಂದ ಮಾರಾಕತ್ತೀನಿ ಯಾರೇನು ಮಾಡಾಕಾಗ್ಲಿಲ್ಲ..,ಮದ್ಯ ಅಕ್ರಮ ಮಾರಾಟಗಾರ ಕೊಮಾರಿಯ ಅಬ್ಬರ_ ಇಲಾಖೆಗಳು ಗಪ್ ಚುಪ್.!? -ಗ್ರಾಮದ ಕೆಲವರ ಮೊಬೈಲ್ ನಲ್ಲಿ, ಅಕ್ರಮ ಕೋರ ಕೊಮಾರಿ ಎಂಬವವನು. ಬೊಬ್ಬೆ ಹೊಡೆದಿದ್ದಾನೆ ಆ ಆಡಿಯೋ ಕ್ಲಿಪ್ ,ಗ್ರಾಮದ ಬಹುತೇಕರ ಮೊಬೈಲ್ ನಲ್ಲಿ ದೊರಕುತ್ತಿದೆ. ಅದರಲ್ಲಿ ತನ್ನ ಸ್ನೇಹಿತನೊಂದಿಗೆ ಮಾತನಾಡಿದ್ದು, ತಾನು ಮದ್ಯ ಅಕ್ರಮವಾಗಿ ಕಳೆದ ಇಪ್ಪತ್ತು ವರ್ಷಗಳಿಂದಲೂ ಮಾರಾಟ ಮಾಡುತ್ತಿದ್ದು. ನಂದು ಯಾವಾನೂ ಏನೂ ಕಿತ್ತಗಣಾಕಾಗಿಲ್ಲ.., ಯಾವಾನೂ ಏನೂ ಮಾಡಾಕಾಗಲ್ಲ ಎಂದೆಲ್ಲಾ ಬೊಬ್ಬೆ ಹೊಡೆದಿದ್ದಾನೆ. ಇದರಂತೆಯೇ ಇನ್ನೊಬ್ಬ ಮದ್ಯ ಅಕ್ರಮ ಕೋರ ಏಕಾಂತಪ್ಪನೂ ಕೂಡ ಮಾತನಾಡಿದ್ದಾನಂತೆ, ಅಂದರೆ ಮದ್ಯ ಅಕ್ರಮ ಮಾರಾಟ ಹಾಗೂ ಸಾಗಾಟದ ಹಿಂದೆ ಎಂಥ ಮೂರ್ಖ ಸಮಾಜ ದ್ರೋಹಿಗಳಿರಬಹುದು.!? ಎಂಬ ಪ್ರೇಶ್ನೆ ಎಂಥವರಲ್ಲಿಯೂ ಮೂಡದಿರದು. ಮದ್ಯ ಅಕ್ರಮ ಮಾರಾಟ ಹಾಗೂ ಸಾಗಾಟದ ವೀಡಿಯೋಗಳು, ಗ್ರಾಮ ಮಾತ್ರವಲ್ಲ ಅಸಂಖ್ಯಾತ ಮೊಬೈಲ್ ಗಳಲ್ಲಿ ಹರಿದಾಡಿ ಸಾಕಷ್ಟು ವೈರಲ್ ಆಗಿದೆ. ಮಾಧ್ಯಮಗಳಲ್ಲಿ ಸಾಕ್ಷಿ ಪುರಾವೆ ಸಮೇತ ವರಿದಿ ಮಾಡಿ ಖಂಡಿಸಲಾಗಿದೆ,  ಆದ್ರೆ ಸಂಬಂಧಿಸಿದ ಇಲಾಖೆಗಳಿಂದ ಗಣನೀಯ ಬೆಳವಣೆಗೆ ನಡೆದಿಲ್ಲ.. ಏಕೆ.!? ಎಂಬ ಪ್ರೆಶ್ನೆ ಪ್ರಜ್ಞಾವಂತರಲ್ಲಿ ಕಾಡುತ್ತಿದೆಯಂತೆ.   ವಿದ್ಯಾ ಮಂದಿರ – ಮದ್ಯ ಆರಾಧಕರ ಮಂದಿರ.!?- ಸರ್ಕಾರವು ಯಾವುದೆೇ ಧಾರ್ಮಿಕ ಕೇಂದ್ರಗಳಲ್ಲಿ ಹಾಗೂ ದೇವಸ್ಥಾನಗಳ ಬಳಿ, ಶಾಲೆ ಕಾಲೇಜ್ ಹಾಸ್ಟೆಲ್ ಗಳು, ಆಸ್ಪತ್ರೆ ಸೇರಿದಂತೆ. ಯಾವುದೇ ಸರ್ಕಾರಿ ಸೌಮ್ಯದ ಸ್ಥಳಗಳು ಹಾಗೂ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ. ಮದ್ಯ ಧೂಮಪಾನ ಸೇವನೆ ಮತ್ತು ಬಳಕೆ ನಿಷೇಧಿಸಿದ್ದು, ಮಾರಾಟ ಸಾಗಟ ಹಾಗೂ ಬಳಕೆಯನ್ನು. ಕಾನೂನು ಭಾಹೀರ ಎಂದು ಘೋಷಿಸಿದ್ದು, ಸಂಪೂರ್ಣವಾಗಿ ನಿಷೇಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಆದ್ರೆ ಈ ಗ್ರಾಮದಲ್ಲಿ ನಿಷೇಧವೇ ನಿಷಿದ್ಧವಾಗಿದೆ, ಇಲ್ಲಿಯ ಅಲಿಖಿತ ಕಾನೂನು ಬೇರೆಯದ್ದೇ ಅದೇ ಇಲ್ಲಿ ನಡೆಯೋದು.  ಗ್ರಾಮದ ವಿದ್ಯಾ ದೇಗುಲ ಸರ್ಕಾರಿ ಶಾಲಾವರಣ, ಪ್ರತಿ ದಿನದ ಸಂಜೆ ಹೊತ್ತಲಿನಿಂದ ರಾತ್ರಿ ಹೊತ್ತಲ್ಲಿ. ಮತ್ತು ಸರ್ಕಾರಿ ರಜಾ ದಿನಗಳಲ್ಲಿ , ಮದ್ಯ ಪ್ರೀಯರಿಗೆ ಪಬ್ ಆಗಿದೆಯಂತೆ ಮದ್ಯಾ ಆರಾಧಕರ ದೇಗುಲವಾಗಿ ಬದಲಾಗುತ್ತದೆ..!? ಎಂದು ಹೋರಾಟಗಾರರು ದೂರಿದ್ದಾರೆ. ಕಾರಣ  ಶಾಲೆಗೆ ಹತ್ತಿರದ  ಮನೆಯೊಂದರಲ್ಲಿರುವ,  ಏಕಾಂತಪ್ಪ ನೇ ಮೂಲಕ ಕಾರಣ ಎಂದು ದೂರಲಾಗಿದೆ. ಶಾಲೆಯಿಂದ ಕೂಗಳತೆ ದೂರಲ್ಲಿಯೇ ಇರೋ ಮನೆಯಂಗಡಿಯಲ್ಲಿ, ಹಗಲು ರಾತ್ರಿ ಮದ್ಯ ಅಕ್ರಮ ಮಾರಾಟ ಮಾಡಲಾಗುತ್ತಿದೆ. ಈ ಸ್ಥಳಕ್ಕೆ ಹೊಂದಿಕೊಂಡಂತೆ ಒಂದು ಬದಿಯಲ್ಲಿ ಶಾಲೆ, ಹಾಗೂ ಇನ್ನೊಂದು ಬದಿಯಲ್ಲಿ ದೇವಸ್ಥಾನವಿದೆ ಆದರೂ ಯಾವ ಇಲಾಖೆಯವರೂ  ಚಕಾರ ಎತ್ತಿಲ್ಲ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮದ್ಯ ಪ್ರೀಯರು ಮದ್ಯವನ್ನು ಅಕ್ರಮ ಕೋರರ ಬಳಿ ಖರೀದಿಸಿ, ನೇರವಾಗಿ ಶಾಲೆಯ ಆವರಣದಲ್ಲಿ ಹಾಗೂ ದೇವಸ್ಥಾನದ ಬದಿಯಲ್ಲಿಯೇ ಮದ್ಯ ಸೇವಿಸುತ್ತಾರೆ. ಮದ್ಯ ಸೇವಿಸಿದ ನಂತರ ಅವರು ಮದ್ಯದ ಬಾಟಲ್ ಗಳನ್ನು ಹಾಗೂ ಪೌಚ್ ಗಳನ್ನು, ಹಾಗೂ ಸ್ನ್ಯಾಕ್ಸ್ ಗೆ ತಂದ ಆಹಾರ ಸಾಮಾಗ್ರಿ ಗಳನ್ನು ತಂದಿದ್ದ ಪ್ಲಾಸ್ಟಿಕ್‌ ತ್ಯಾಜ್ ಗಳನ್ನು. ಸಿಗರೇಟ್ ಗುಟ್ಕಾ ಪಾಕೇಟ್  ಜೊತೆಗೆ ತಂದಿದ್ದ ಇತರೆ ಸಾಮಾಗ್ರಿಗಳ ತ್ಯಾಜ್ಯಗಳನ್ನು , ಶಾಲಾವರಣದಲ್ಲಿಯೇ ಎಸೆಯಲಾಗುತ್ತಿದೆ. ಮದ್ಯ ಸೇವಿಸಿ ಅಮಲಿನಲ್ಲಿರುವ ಕೆಲವರು , ಶಾಲಾವರಣದಲ್ಲಿಯೇ ಮಲ ಮೂತ್ರ ವಿಸರ್ಜನೆಗಳನ್ನು  ಮಾಡುತ್ತಿದ್ದಾರೆ. ಇದನ್ನು ಶಾಲಾ ಮಕ್ಕಳು ಹಾಗೂ ಶಾಲಾ ಸಿಬ್ಬಂದಿಗಳು ಸ್ವಚ್ಚಗೊಳಸಬೇಕಿದೆ, ಇದೆಲ್ಲದರಿಂದಾಗಿ ಶಾಲಾವರಣದ ವಾತಾವರಣ ಕೆಡುತ್ತಿದೆ ಎಂದು ವಿದ್ಯಾರ್ಥಿಗಳ ಪೋಷಕರು ಹೋರಾಟಗಾರರು ದೂರಿದ್ದಾರೆ. ಇದೆಲ್ಲದಕ್ಕೂ ಸಾಕ್ಷ್ಯಾಧಾರಗಳು ಸಾಕಷ್ಟು ಹೇಳಿಕೆಗಳು ದೂರು ಇದ್ದರೂ ಕೂಡ, ಸಂಬಂಧಿಸಿದ ಇಲಾಖೆಗಳು ಮದ್ಯ ಅಕ್ರಮ ಮಾರಾಟ ಸಾಗಾಟವನ್ನು ತಹಬದಿಗೆ ತರುವಲ್ಲಿ ಮುಂದಾಗದಿರುವುದು ಶೋಚನೀಯ ಸಂಗತಿಯಾಗಿದೆ. ಗ್ರಾಮದ  ಪ್ರಜ್ಞಾವಂತರಲ್ಲಿ ಹೋರಾಟಗಾರರಲ್ಲಿ, ಇಲಾಖೆಗಳ ಕಾರ್ಯವೈಕರಿಯ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟು ಹಾಕುತ್ತಿದೆಯಂತೆ. ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *