ಸೂರ್ಯದೇವನನ್ನು ಆರಾಧಿಸುವ ರಥಸಪ್ತಮಿ ಇಂದು.

Spread the love

ಸೂರ್ಯದೇವನನ್ನು ಆರಾಧಿಸುವ ರಥಸಪ್ತಮಿ ಇಂದು.

ನಾಗರಿಕತೆಯ ಪ್ರಾರಂಭಿಕ ಕಾಲದಿಂದಲೂ ಸೂರ್ಯ ಅತ್ಯಂತ ಗೌರವಾನ್ವಿತ ಹಾಗೂ ಪ್ರಮುಖ ದೇವರುಗಳಲ್ಲಿ ಒಬ್ಬನಾಗಿದ್ದಾನೆ.ಗ್ರೀಸ್ನ ಅಪೋಲೋ,ರೋಮ್ನ ಸೋಲ್ ಇನ್ವಿಕ್ವಸ್ ಹೀಗೆ ವಿವಿಧ ಹೆಸರುಗಳಿಂದ ಕರಿಯಲ್ಪಡುವ ಸೂರ್ಯನನ್ನು ಭಾರತೀಯರು ವೇದಗಳ ಕಾಲದಿಂದಲೂ ಆರಾಧಿಸುತ್ತಿದ್ದಾರೆ.ಋಗ್ವೇದದ ಹತ್ತನೇ ಮಂಡಲವು ಸೂರ್ಯನಿಗೆ ಸಮಾನಾರ್ಥಕವಾದ ಆದಿತ್ಯರ ಬಗ್ಗೆ ವಿವರಗಳನ್ನು ತಿಳಿಸಿದೆ.ಅಲ್ಲದೆ ಮಹಾಭಾರತದಲ್ಲಿ ಕರ್ಣನ ತಂದೆಯಾಗಿ ಸೂರ್ಯದೇವನ ಪಾತ್ರವಿದೆ.

ಇಂತಹ ಪ್ರತ್ಯಕ್ಷ ದೈವ ವಾದ ಸೂರ್ಯನ ಆರಾಧನೆಗೆ ಮಾಘ ಮಾಸದ ಶುಕ್ಲ ಪಕ್ಷದ ಏಳನೇ ದಿನ ಆಚರಿಸಲಾಗುವ ಪ್ರಮುಖ ಹಿಂದುಗಳ ಹಬ್ಬ ರಥಸಪ್ತಮಿ.ಮಾಘ ಮಾಸದಲ್ಲಿ ಬರುವುದರಿಂದ ಇದನ್ನು ಮಾಘಸಪ್ತಮಿ ಎಂದು ಸಹ ಕರೆಯುತ್ತಾರೆ.ಹೆಸರೇ ಸೂಚಿಸುವಂತೆ ಸಪ್ತ ಎಂದರೆ ಏಳು.ಹಾಗಾಗಿ ಸೂರ್ಯನು ಏಳು ಕುದುರೆಗಳನ್ನು ಹೊಂದಿರುವ ರಥವನ್ನೇರಿದ ಸೂರ್ಯನ ಆರಾಧನೆಯೇ ಇಂದಿನ ವಿಶೇಷತೆ.ಈ ದಿನ ಸೂರ್ಯದೇವನನ್ನು ಪೂಜಿಸುವುದರಿಂದ ವ್ಯಕ್ತಿಯು ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಹೊಂದುತ್ತಾನೆ ಮತ್ತು ಅನಾರೋಗ್ಯ ಸಂಬಂಧಿತ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ ಆರೋಗ್ಯ ವೃದ್ಧಿಸುತ್ತದೆ.ಈ ದಿನ ಸೂರ್ಯ ನ ಜನ್ಮದಿನ ಇಂದು ನಂಬಲಾಗಿದೆ.ಹಾಗಾಗಿ ಇದನ್ನು ‘ಸೂರ್ಯ ಜಯಂತಿ’ ಅಂತಲೂ ಕರೆಯುತ್ತಾರೆ.ಭಾರತದಲ್ಲಿ ಸೂರ್ಯನ ಗೌರವಾರ್ಥವಾಗಿ ನಿರ್ಮಿಸಿದ ಅನೇಕ ದೇವಾಲಯಗಳು ಇವೆ. ಈ ಎಲ್ಲಾ ದೇವಾಲಯಗಳಲ್ಲಿ ರಥಸಪ್ತಮಿಯಂದು ವಿಶೇಷ ಪೂಜಾಕಾರ್ಯಕ್ರಮಗಳು ಆಚರಣೆಗಳು ನಡೆಸಲಾಗುತ್ತದೆ.ಮಹಾರಾಷ್ಟ್ರ ತಮಿಳುನಾಡು ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ರಥಸಪ್ತಮಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ.

ರಥಸಪ್ತಮಿ ಎಂದು ಸೂರ್ಯೋದಯಕ್ಕೆ ಮುನ್ನ ಎದ್ದು ಪವಿತ್ರ ಸ್ನಾನ ಮಾಡಿಸೂರ್ಯದೇವನನ್ನು ಆರಾಧಿಸುವುದರಿಂದ ಮನುಷ್ಯ ಎಲ್ಲಾ ಕಾಯಿಲೆಗಳಿಂದ ಮುಕ್ತಿ ಹೊಂದುತ್ತಾನೆ ಮತ್ತು ಉತ್ತಮ ಆರೋಗ್ಯವನ್ನು ಹೊಂದುತ್ತಾನೆ ಎಂದು ಇದನ್ನು ಆರೋಗ್ಯ ಸಪ್ತಮಿ ಅಂತಲೂ ಕರೆಯುತ್ತಾರೆ. ತಮಿಳುನಾಡಿನಲ್ಲಿ ಎರಕ್ಕು ಎಲೆಗಳನ್ನು ಬಳಸಿ ಈ ದಿನ ಪವಿತ್ರ ಸ್ನಾನ ಮಾಡುತ್ತಾರೆ.ಈ ದಿನ ‘ಗಾಯಿತ್ರಿ ಮಂತ್ರ’, ‘ಸೂರ್ಯ ಸಹಸ್ರನಾಮ’, ‘ಆದಿತ್ಯ ಹೃದಯಂ’ ಹಾಗೂ ‘ಸೂರ್ಯ ಅಷ್ಟಕಮ್’ ಪಠಿಸುವುದು ಅತ್ಯಂತ ಮಂಗಳಕರವೆಂದು ನಂಬಲಾಗಿದೆ.

ರಥಸಪ್ತಮಿಯಂದು ಸೂರ್ಯ ತನ್ನ ರಥದಲ್ಲಿ ಉತ್ತರ ಗೋಳಾರ್ಧದ ಕಡೆಗೆ ಚಲಿಸುವುದನ್ನು ಸಹ ಸೂಚಿಸುತ್ತದೆ ಈ ದಿನವೂ ಬೇಸಿಗೆ ಆಗಮನವನ್ನು ಸೂಚಿಸುತ್ತದೆ. ಹಾಗೂ ದಕ್ಷಿಣ ರಾಜ್ಯಗಳಾದ್ಯಂತ ಕೊಯ್ಲು ಋತುವಿನ ಆರಂಭವನ್ನು ಸೂಚಿಸುತ್ತದೆ.ಹೀಗಾಗಿ ಭಾರತೀಯ ರೈತರಿಗೆ ಇದು ಹೊಸ ವರ್ಷದ ಭರವಸೆ ಆರಂಭವನ್ನು ಸಂಕೇತಿಸುತ್ತದೆ.

ಇನ್ನು ಕರ್ನಾಟಕದಲ್ಲಿನ ಐಹೊಳೆಯಲ್ಲಿ ನಿರ್ಮಿಸಲಾದ ಹೆಚ್ಚಿನ ದೇವಾಲಯಗಳು ಸೂರ್ಯನಿಗೆ ಸಮರ್ಪಿತವಾಗಿವೆ.ಬಾದಾಮಿಯ ಮಾಲಗಿತ್ತಿ ಶಿವಾಲಯ ಆದಿತ್ಯ ದೇವನಿಗೆ ನಿರ್ಮಿಸಲಾಗಿದೆ.ಪಟ್ಟದಕಲ್ಲಿನ ವಿರೂಪಾಕ್ಷ ದೇವಸ್ಥಾನದಲ್ಲಿ ಸೂರ್ಯ ತನ್ನ ಪತ್ನಿಯರಾದ ಉಷಾ ಮತ್ತು ಪ್ರತ್ಯುಷ ಅವರೊಂದಿಗೆ ಬಾಣಗಳನ್ನು ಹೊಡೆಯುವ ರಥದಲ್ಲಿ ನಿಂತಿರುವುದನ್ನು ಕಾಣಬಹುದು.ತಲಕಾಡಿನ ಗಂಗಾರು ಸೂರ್ಯಾದಲ್ಲಿ ಪೋಷಿಸಿದರು.ಶ್ರೀರಂಗಪಟ್ಟಣದಲ್ಲಿನ ವಸ್ತು ಸಂಗ್ರಹಾಲಯದಲ್ಲಿರುವ ದೊಡ್ಡ ಶಿಲ್ಪವು ಸಮಬಂಧದಲ್ಲಿ ಸೂರ್ಯನನ್ನು ಎರಡು ಕೈಗಳಲ್ಲಿ ಕಮಲದೊಂದಿಗೆ ಚಿತ್ರಿಸುತ್ತದೆ ಅವನು ದಂಡ ಮತ್ತು ಪಿಂಗಳರನ್ನು ತನ್ನ ದ್ವಾರ ಪಾಲಕರನ್ನಾಗಿ ಹೊಂದಿದ್ದಾನೆ.ಇದು ಆ ಕಾಲದ ಅತಿ ದೊಡ್ಡ ಸೂರ್ಯಶಿಲ್ಪಗಳಲ್ಲಿ ಒಂದಾಗಿದೆ.

ಮಂಗಳೂರಿನ ಮರಳಿಯಲ್ಲಿ 1,200 ವರ್ಷಗಳಷ್ಟು ಹಳೆಯ ಇತಿಹಾಸ ಪ್ರಸಿದ್ಧ ಸೂರ್ಯ ದೇವಸ್ಥಾನವಿದೆ.ಪ್ರತಿ ವರ್ಷರಥಸಪ್ತಮಿಯಂದು ಸೂರ್ಯ ನಡು ನೆತ್ತಿಗೆ ಬಂದಾಗ ಶ್ರೀ ಸೂರ್ಯನಾರಾಯಣ ದೇವರಿಗೆ ಪೂಜೆ ನಡೆದು ಬಳಿಕ ಬಲಿ ಉತ್ಸವ ನಂತರ ರಥಾರೂಢರಾಗಿ ರಥೋತ್ಸವ ಸಂಜೆ ಮತ್ತೆ ರಥೋತ್ಸವ ರಾತ್ರಿ ದೊಡ್ಡ ರಂಗ ಪೂಜಾರಿ ಸೇವೆಗಳು ಹಾಗೂ ಮರುದಿನ ಪ್ರಾತಃಕಾಲ ಅರುಣೋದಯಕ್ಕೆ ಪುನಃ ರಥಾರೋಹಣವಾಗಿ ರಥ ಎಳೆಯುವ ಪದ್ಧತಿ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ಭಾರತದಲ್ಲಿ ಕೊನಾರ್ಕ ಸೂರ್ಯ ದೇವಾಲಯ ಒಡಿಸ್ಸಾ,ಮೊಧೇರಾ ಸೂರ್ಯ ದೇವಾಲಯ ಗುಜರಾತ್,ಮಾರ್ತಾಂಡ್ ಸೂರ್ಯ ದೇವಾಲಯ ಕಾಶ್ಮೀರ,ಗ್ವಾಲಿಯರ್ ಸೂರ್ಯ ದೇವಾಲಯ ಮಧ್ಯಪ್ರದೇಶ,ಬಾಲಾಜಿ ಸೂರ್ಯ ದೇವಾಲಯ ವನ ಮಧ್ಯಪ್ರದೇಶ,ಜಾರ್ಖಂಡನ ರಾಂಚಿಯಲ್ಲಿ,ಸೂರ್ಯ ಪಹಾರ್ ದೇವಾಲಯ ಅಸ್ಸಾಂ, ಸೂರ್ಯನಾರಾಯಣ ದೇವಾಲಯ ಬೆಂಗಳೂರು, ದಕ್ಷಿಣಾರ್ಕ ಸೂರ್ಯ ದೇವಾಲಯ ಬಿಹಾರ್, ಸೂರ್ಯನಾರ್ ದೇವಾಲಯ ತಮಿಳುನಾಡು ಹಾಗೂ ಇನ್ನಿತರ ಕಡೆಗಳಲ್ಲಿ ಸೂರ್ಯ ದೇವಾಲಯಗಳನ್ನು ಕಾಣಬಹುದಾಗಿದೆ.

ನಂದಾ ಸಂಗಮೇಶ ಹುರಕಡ್ಲಿ ಹುಬ್ಬಳ್ಳಿ.

Leave a Reply

Your email address will not be published. Required fields are marked *