ದಾಖಲೆಯ 500 ಜನಪದ ಕಲಾವಿದರಿ0ದ ಜನಪದ ಕಲಾ ಮೇಳ& ಕುಣಿಗಲ್ ಉತ್ಸವ: “ಜನಪದವೇ ನಮ್ಮ ಸಂಸ್ಕೃತಿ ಜನಪದವೇ ನಮ್ಮ ತಾಯಿ” ಕುಣಿಗಲ್ ಶಾಸಕ ಡಾ. ಎಚ್ ಡಿ ರಂಗನಾಥ್ ಅಭಿಮತ.
ಐತಿಹಾಸಿಕ ತುಮಕೂರು ಜಿಲ್ಲೆಯ ಕುಣಿಗಲ್ ನಾಡಿನೆಲ್ಲ ಡೇ. ಕುಣಿಗಲ್ ಕೆರೆಯ ಜನಪದ ಹಾಡಿಗೆ
ಮತ್ತು ಕುಣಿಗಲ್ ಕುದುರೆಗೆ ಹೆಸರುವಾಸಿಯಾದದ್ದು
ಈ ಖ್ಯಾತಿಯನ್ನು ಮುಂದುವರಿಸುವ ನಿಟ್ಟಿನಲ್ಲಿ
ಕರ್ನಾಟಕ ಸರ್ಕಾರದ ಜಾನಪದ ಜಾತ್ರೆಯ ಪ್ರಧಾನ ನಿರ್ದೇಶಕ ಮಂಡ್ಯದ ಕುಂತೂರ ಕುಮಾರ್ ಅವರ ನೇತೃತ್ವದಲ್ಲಿ
ಮಂಡ್ಯ ಜಿಲ್ಲೆಯ ಚರಿತ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ
ಮೊದಲ ಭಾರಿಗೆ ದಾಖಲೆಯ
500 ಜನಪದ ಕಲಾವಿದರಿ೦ದ ವೈವಿಧ್ಯಮಯ ಜನಪದ ಶೈಲಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣದ ಜನಪದ ಕಲಾ ಮೇಳ ಮತ್ತು ಕುಣಿಗಲ್ ಉತ್ಸವಕ್ಕೆ
ಜನಪ್ರಿಯ ಶಾಸಕ
ಡಾ. ಎಚ್ ಡಿ ರಂಗನಾಥ್ ಅವರು ಜನಪದ ನಗಾರಿ ಬಾರಿಸುವ ಮೂಲಕ ವಿದ್ಯುಕ್ತವಾಗಿ
ಉದ್ಘಾಟಿಸಿ ಮಾತನಾಡುತ್ತಾ
ಮಂಡ್ಯ ಜಿಲ್ಲೆಯ
ಚರಿತ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆಯು ಕುಣಿಗಲ್ ತಾಲೂಕಿನ ಆಲ್ಕೆರೆ ಹೊಸಳ್ಳಿ ಗ್ರಾಮದಲ್ಲಿ ಗುಡ್ಡದ ರಂಗನಾಥ ಸ್ವಾಮಿಯ ದೇವಸ್ಥಾನದ ಆವರಣದಲ್ಲಿ ಜಾನಪದ ಕಲಾ ಮೇಳ ಹಾಗೂ ಕುಣಿಗಲ್ ಉತ್ಸವ ಕಾರ್ಯಕ್ರಮವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಿ ವೈವಿಧ್ಯಮಯ ಜನಪದ ಕಾರ್ಯಕ್ರಮಗಳ ಅನಾವರಣವನ್ನ ಮಾಡಿರುವುದು ಅಭಿನಂದನೀಯ ವೆಂದರು .
ಅವರು ಮಾತನಾಡುತ್ತಾ ಜಾನಪದ ಕಲೆ ಎಲ್ಲಾ ಕಲೆಗಳ ತಾಯಿಬೇರು ಜನಪದ ಅಂದ್ರೆ ನಮ್ ತಾಯಿ
ಜನಪದ ಅಂದ್ರೆ ನಮ್ಮ ಸಂಸ್ಕೃತಿ, ಜಾನಪದ ಸಂಸ್ಕೃತಿ ಒಳಗೆ ಆಧ್ಯಾತ್ಮಿಕ ಅಡಗಿದೆ ಚರಿತ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆ ಈ ನಮ್ಮ ಗುಡ್ಡದ ರಂಗನಾಥ ಸ್ವಾಮಿಯ ಸನ್ನಿಧಿಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ
ಸುಮಾರು 500ಕ್ಕೂ ಹೆಚ್ಚು ಜನಪದ ಕಲಾವಿದರನ್ನು ಕರೆಸಿ ಜನಪದ ಕಲಾ ಮೇಳ ಹಾಗೂ ಕುಣಿಗಲ್ ಉತ್ಸವದಂತಹ ಜಾನಪದ ಸಂಸ್ಕೃತಿ ಪರಂಪರೆಯನ್ನು ನಿರ್ಮಿಸುವ ಈ ಕಾರ್ಯಕ್ರಮ ಆಯೋಜಿಸಿದ ಆಯೋಜಕರು ಅಭಿನಂದನೆಗೆ ಅರ್ಹರು ಎಂದು ಕುಂತೂರ್ ಕುಮಾರ್ ತoಡವನ್ನ ಅಭಿನಂದಿಸಿದರು
ನಾಡಿನ ವೈವಿಧ್ಯಮಯ ಜನಪದ ಕಲತಂಡಗಳನ್ನು ಕರೆಸಿ ಇಂತಹ ಗ್ರಾಮೀಣ ಸೊಗಡಿನ ಬೃಹತ್ ವೇದಿಕೆ ಮೇಲೆ ಪ್ರದರ್ಶನ ಮಾಡುತ್ತಿರುವುದು ನನಗೆ ಬಹಳ ಖುಷಿ ತಂದಿದೆ ನಾನು ಕಲಾ ಮೇಳ ಅಂದ್ರೆ ಯಾವುದೋ ಐದಾರು ತಂಡಗಳನ್ನು ಕರೆಸಿ ಮಾಡ್ತಾರೆ ಅಂತ ಅಂದುಕೊಂಡಿದ್ದು ನನಗೆ ಈ ಕಾರ್ಯಕ್ರಮವನ್ನು ನೋಡಿ ಆಶ್ಚರ್ಯನಾದೆ
ಈ ಕಾರ್ಯಕ್ರಮವು ನನಗೆ ಬಹಳ ಆನಂದವನ್ನು ಕೊಟ್ಟೆದೆ ಹಾಗಾಗಿ ಕುಂತೂರ್ ಕುಮಾರ್ ಅವರಿಗೆ ಹಾಗೂ ಈ ಸಂಸ್ಥೆಯವರಿಗೆ ಧನ್ಯವಾದಗಳು ಎಂದರು.
ಜಾನಪದ ಕಲೆಯನ್ನು ಉಳಿಸಿ ಬೆಳೆಸುವಲ್ಲಿ
ಕುಂತೂರು ಕುಮಾರ್ ನಂತಹದರು ಜನಪದ ಸಂಘಟಕರಿಗೆ
ಸದಾ ಬೆಂಬಲಿಸುತ್ತೇನೆ
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾಡಿನ ಎಲ್ಲಾ ಜನಪದರೂ ಜನಪದ ಕಲಾವಿದರು ನೀವೆಲ್ಲರೂ ಕೂಡ ಈ ಒಂದು ಗುಡ್ಡದ ರಂಗನಾಥ ಸ್ವಾಮಿಯ ಆಶೀರ್ವಾದ ನಿಮ್ಮೆಲ್ಲರ ಮೇಲೆ ಇರಲಿ ಆಯಸ್ಸು ಆರೋಗ್ಯವನ್ನು ಕೊಟ್ಟು ಕಾಪಾಡಲಿ ಎಂದು ಶುಭ ಹಾರೈಸಿದರು.
ನಮ್ಮ ತಂದೆಯವರು ಈ ದೇವಸ್ಥಾನವನ್ನ ಕಟ್ಟಲಿಕ್ಕೆ ಬಹಳ ಶ್ರಮವನ್ನ ಪಟ್ಟಿದ್ದಾರೆ ಅವರು ಕೂಡ ವೈದ್ಯ ವೃತ್ತಿಯನ್ನ ಮಾಡಿ ಇಡೀ ನಮ್ಮ ಕುಟುಂಬವನ್ನ ವೈದ್ಯರನ್ನಾಗಿ ಮಾಡಿದ್ದಾರೆ.
ಹಾಗಾಗಿ ಇಲ್ಲಿ ಸೇರಿರತಕ್ಕಂಥ ಎಲ್ಲ ಕಲಾತಂಡಕೆ ನನ್ನದೊಂದು ನಮಸ್ಕಾರ
ಇಂತಹ ಅದ್ಭುತವಾದಂತಹ ಕಾರ್ಯಕ್ರಮ ಹೀಗೆ ಮುಂದುವರೆಯಲಿ ಇಂದು ಶುಭ ಹಾರೈಸಿದರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಬಾನಂದೂರು ಕೆಂಪಯ್ಯ ಅವರು ಮಾತನಾಡಿ ಗ್ರಾಮೀಣ ಪ್ರದೇಶದ ಕಲೆಗಳು ನಶಿಸಿಹೋಗ್ತಿವೆ ಈ ಕಲೆಗಳನ್ನ ಉಳಿಸುವುದರ ಮುಖಾಂತರ ನಾವು ಮುಂದಿನ ತಲೆಮಾರಿಗೆ ಈ ಗ್ರಾಮೀಣ ಜನಪದ ಕಲೆಯನ್ನು ತೆಗೆದುಕೊಂಡು ಹೋಗುವ ಅನಿವಾರ್ಯತೆ ನಮ್ಮ ನಿಮ್ಮಲ್ಲಿದೆ ಎಂದರು ಜಾನಪದ ಸಂಸ್ಕೃತಿ ಉಳುದ್ರೆ ನಮ್ಮ ಭಾರತೀಯ ಸಂಸ್ಕೃತಿ ಉಳಿಯುತ್ತೆ ಹಾಗಾಗಿ ಜಾನಪದ ಕಲಾವಿದರು ಜಾನಪದ ಗಾಯಕರು ಹೆಚ್ಚೆಚ್ಚು ವೈವಿಧ್ಯಮಯ ಗ್ರಾಮೀಣ ಸೊಗಡಿನ ಕಲೆಗಳನ್ನು ಕಲೀಬೇಕು ಜನಪದ ಕಲೆಯನ್ನು ಉಳಿಸಬೇಕು ಅದಕ್ಕೆ ಯಾವತ್ತೂ ಕೂಡ ನಾನು ನಿಮ್ಮ ಜೊತೆಗಿರ್ತೀನಿ ಎಂದು ಮಾತನಾಡಿದರು.
ಇದೇ ಸಂದರ್ಭದಲ್ಲಿ ಡಾ. ಅಪ್ಪಗೆರೆ ತಿಮ್ಮರಾಜು ಅವರು ಮಾತನಾಡಿ ಪ್ರತಿ ಜಿಲ್ಲೆಗಳಲ್ಲೂ ಕೂಡ ಈ ತರದ ಕಲಾ ಮೇಳಗಳು ನಡಿಬೇಕು ಜನರು ತಮ್ಮ ತನವನ್ನು ಬಿಟ್ಟು ಮೊಬೈಲ್ಗಳ ಮೊರೆ ಹೋಗಿದ್ದಾರೆ ಸಂಬಂಧಗಳ ಅರಿವುನ್ನ ಕಳ್ಕೊಳ್ತಿದ್ದಾರೆ ಅಪ್ಪ-ಅಮ್ಮ ಅಣ್ಣ ತಂಗಿ ಚಿಕ್ಕಪ್ಪ ದೊಡ್ಡಪ್ಪ ಎಂಬ ಸಂಬಂಧಗಳೇ ಕಾಣೆಯಾಗುತ್ತಿವೆ ಯಾರೇ ಬರಲಿ ಯಾರೇ ಹೋಗ್ಲಿ ಮೊಬೈಲ್ಗಳಲ್ಲಿ ಮರೆ ಹೋಗಿ ಈಗಿನ ಪೀಳಿಗೆ ಅಡ್ಡ ದಾರಿ ಹಿಡಿಯುತ್ತಿದ್ದಾರೆ ಅವರೆಲ್ಲರೂ ಕೂಡ ಜಾನಪದ ಹತ್ರ ಮುಖ ಮಾಡಬೇಕು ಜಾನಪದ ಕಲೆಗಳ ಬಗ್ಗೆ ಆಸಕ್ತಿ ವಹಿಸಬೇಕು ಜಾನಪದ ಕಲೆಯನ್ನು ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ತಿಳಿಸುವುದರ ಮುಖಾಂತರ ಅವರ ಸರಿದಾರಿಗೆ ತರುವಂತ ಕೆಲಸ ಆಗಬೇಕು
ಹಬ್ಬ ಹರಿ ದಿನಗಳಲ್ಲಿ ನಮ್ಮ ಜನಪದರು ಮಾಡಿದಂತಹ ಈ ಕಲೆಗಳನ್ನು ಇಂದಿಗೂ ಮನರಂಜನಾ ಕಲೆಗಳಾಗಿ ಬಳಕೆಯಲ್ಲಿವೆ ಕಲೆ ಬೆಳೆದರೆ ಕಲಾವಿದ ಬೆಳೆಯುತ್ತಾನೆ, ಕಲಾವಿದ ಬೆಳೆದರೆ ಆರ್ಥಿಕವಾಗಿ ಬಲಿಷ್ಠ ಆಗ್ತಾರೆ ಮಂಡ್ಯ ಜಿಲ್ಲೆಯ ಚರಿತ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆಯ ಕಾರ್ಯದರ್ಶಿಗಳಾದಂತಹ ಕುಂತೂರ್ ಕುಮಾರ್ ಅವರಿಗೆ ಅಭಿನಂದನೆಗಳು ಅವರ ತಂಡಕ್ಕೆ ಒಳ್ಳೆಯದಾಗಲಿ ಎಂದರು
ಪ್ರಸ್ತುತ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದಂತ ಶ್ರೀ ಗೊಲ್ಲಳ್ಳಿ ಶಿವಪ್ರಸಾದ್ ಅವರು ಮಾತನಾಡುತ್ತಾ ಜಾನಪದ ನಮ್ಮೆಲ್ಲರಿಗೂ ಕೂಡ ತಾಯಿ ಇದ್ದಾಗೆ ಆ ತಾಯಿಯನ್ನು ನಾವು ಎಷ್ಟು ಜೋಪಾನ ಮಾಡ್ತೀವೋ ಅಷ್ಟು ನಮಗೆ ಶ್ರೇಯಸ್ ಸಿಗುತ್ತೆ ಈ ತರದ ಸಂಸ್ಥೆಗಳು ಯಾವತ್ತೂ ಇಟ್ಕೋಬೇಕು ಒಳ್ಳೊಳ್ಳೆ ಕಾರ್ಯಕ್ರಮಗಳನ್ನ ಮಾಡಬೇಕು ಜನಪದ ಉಳಿಸಿ ಬೆಳೆಸುವಲ್ಲಿ ಕುಮಾರನಂತಹ ತಮಟೆ ಕಲಾವಿದರು ಆಸಕ್ತಿವಹಿಸಿ ಇಂತಹ ಅದ್ಭುತ ಕಾರ್ಯಕ್ರಮವನ್ನು ಈ ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸಿರುವುದು ಅಭಿನಂದನೆಯ ವೆಂದರು
ಈ ಕಾರ್ಯಕ್ರಮದಲ್ಲಿ
ಕೆ ಎನ್ ನಾಗೇಶ್ ರವರ ಜನಪದ ಗಾಯನ.
ಸಂತ ವಾಣಿ ಸುಧಾಕರ್ ಅವರ ಜನಪದ ಹಾಡುಗಾರಿಕೆ
ಧಾರವಾಡದ ಪ್ರಕಾಶ್ ಮಲ್ಲಿಗೆವಾಡ ಅವರ ಜನಪದ ನೃತ್ಯಗಳು
ಡಾ ಸಬ್ಬನಹಳ್ಳಿ ರಾಜು ಅವರ ಕಾರ್ಯಕ್ರಮ ನಿರೂಪಣೆ ಮತ್ತು ಆಯೋಜನೆ ನೆರೆದಿದ್ದ ಸಾವಿರಾರು ಪ್ರೇಕ್ಷಕರನ್ನ ರಂಜಿಸಿದವು
ಕಾರ್ಯಕ್ರಮದಲ್ಲಿ
ಅಂತರಾಷ್ಟ್ರೀಯ ತಮಟೆ ಕಲಾವಿದ ಹೊಸಕೋಟೆ ನಾಗರಾಜ್
ಅಂತರಾಷ್ಟ್ರೀಯ ಮಟ್ಟದ ಜನಪದ ಗಾಯಕರು ನಾಡಿನ ಜಿಲ್ಲೆಯಿಂದ ಆಗಮಿಸಿದ ಜನಪದ ಕಲಾವಿದರು
ಜನಪ್ರತಿನಿಧಿಗಳು
ಊರಿನ ಗಣ್ಯರು ಗ್ರಾಮಸ್ಥರು ಭಾಗವಹಿಸಿದ್ದರು
ಚರಿತ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆಯ ಕಾರ್ಯದರ್ಶಿಗಳಾದ ಕುಂತೂರ್ ಕುಮಾರ
ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನ ಸ್ವಾಗತಿಸಿದರು
ಕಾರ್ಯಕ್ರಮವನ್ನು ಡಾ. ಸಬ್ಬನಹಳ್ಳಿ ರಾಜು ಅವರು ನಿರೂಪಿಸಿದರು.
ಇದೇ ಸಂದರ್ಭದಲ್ಲಿ
ವೇದಿಕೆಯಲ್ಲಿ ವೈಭವದ ಜನಪದ ಕಲಾತಂಡಗಳಿಂದ ಜಾನಪದ ಕಲಾ ಮೇಳಗಳ ಪ್ರದರ್ಶನ ನೆರೆದಿದ್ದ ಜನಮನವನ್ನು ರ೦ಚಿಸಿತು.
ಡಾ ಅಪ್ಪಗೆರೆ ತಿಮ್ಮರಾಜು ಅವರ ಜನಪದ ಗಾಯನದ ಸೊಬಗು
ಕೆ ಎನ್ ನಾಗೇಶ್ ರವರ ಜನಪದ ಹಾಡುಗಾರಿಕೆ.
ಸಬ್ಬನಹಳ್ಳಿ ರಾಜು ಅವರ ಮುಂದಾಳತ್ವ
ಪ್ರಕಾಶ್ ಮಲ್ಲಿಗೆವಾಡ ಅವರ ಜಾನಪದ ನೃತ್ಯ ವೈಭವ
ಅಂತರಾಷ್ಟ್ರೀಯ ಮಟ್ಟದ ತಮಟೆ ಕಲಾವಿದ ಎಚ್ ಸಿ ನಿಂಗರಾಜು ತಂಡದ ತಮಟೆವಾದನ ನರೆದಿದ್ದ ಸಾವಿರಾರು ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡು ಕುಣಿಯುವಂತೆ ಮಾಡಿ ಜನಮನ್ನಣೆ ಗಳಿಸಿತು
ಇನ್ನುಳಿದ ವೈವಿಧ್ಯಮಯ ಜನಪದ ಕಲಾತಂಡಗಳ ಮಿಶ್ರಣದ ಜಾನಪದ
ಕಲಾ ಮೇಳದ ಸೊಬಗು ನರೆದಿದ್ದ ಸಹಸ್ರಾರು ಪೇಕ್ಷಕರ ಮನಸ್ಸನ್ನು ಸೂರೆಗೊಂಡವು.