ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ “ಶಿಕ್ಷಣ ಜೊತೆ ಸಂಸ್ಕಾರ ” ಅಭಿಯಾನ ಯಶಸ್ವಿ.
ಸಿಂಧನೂರು- ನಗರದ ಗಂಗಾವತಿ ರಸ್ತೆಯಲ್ಲಿರುವ ಪಾಟೀಲ್ ಮಹಿಳಾ ಮಹಾವಿದ್ಯಾಲಯದ ವತಿಯಿಂದ ಐದನೇ ದಿನದ ರಾಷ್ಟ್ರೀಯ ಸೇವಾ ಯೋಜನೆಯ ಅಡಿಯಲ್ಲಿ “ಶಿಕ್ಷಣ ಜೊತೆ ಸಂಸ್ಕಾರ ” ಅಭಿಯಾನವನ್ನು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಪಾಟೀಲ್ ಮಹಿಳಾ ಮಹಾವಿದ್ಯಾಲಯದ ಗುರು ವೃಂದ ಹಾಗೂ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಆಶ್ರಮದಲ್ಲಿನ ಎಲ್ಲಾ ಹಿರಿಯ ವೃದ್ಧರ ಹಾಗೂ ವಯಸ್ಕರ ಬುದ್ಧಿಮಾಂದ್ಯರ ಸೇವೆ ಮಾಡುವ ಮೂಲಕ ಪ್ರೀತಿಯನ್ನು ಧಾರೆಯೆರೆದರು. ಈ ಕಾರ್ಯಕ್ರಮದಲ್ಲಿ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯ ಸ್ವಾಮಿ ಹಿರೇಮಠ ಅವರು ಇಂದಿನ ಈ ವಿಶೇಷ ಎನ್.ಎಸ್.ಎಸ್. ಶಿಬಿರದಲ್ಲಿ ಪಾಲ್ಗೊಂಡಿರುವ ಎಲ್ಲಾ ವಿದ್ಯಾರ್ಥಿನಿಯರು ಶಿಕ್ಷಣದ ಜೊತೆ ಸಂಸ್ಕಾರವನ್ನು ಮೈಗೂಡಿಸಿಕೊಂಡು ಹೆತ್ತವರನ್ನು ಸಮಾಜದಲ್ಲಿನ ಹಿರಿಯ ನಾಗರಿಕರನ್ನು ಗೌರವಿಸಿದಾಗ ಮಾತ್ರ ನಿಮ್ಮ ಶಿಕ್ಷಣಕ್ಕ ಅರ್ಥ ಸಿಗುತ್ತದೆ. ನಿಮ್ಮ ಹೆತ್ತವರು ನಿಮ್ಮ ಬಗ್ಗೆ ಅದೆಷ್ಟೋ ಕನಸುಗಳನ್ನು ಕಟ್ಟಿಕೊಂಡು ನಿಮಗೆ ಶಿಕ್ಷಣ ಕೊಡಿಸುತ್ತಾರೆ. ಆದರೆ ಈಗಿನ ಕಾಲಘಟ್ಟದಲ್ಲಿ ಅದೆಷ್ಟು ವಿದ್ಯಾರ್ಥಿಗಳು ಹೆತ್ತವರ ಕನಸುಗಳಿಗೆ ಮಸಿ ಬಳಿಯುವ ಕಾರ್ಯಗಳನ್ನು ಮಾಡುತ್ತಿದ್ದಾರೆ. ವೃದ್ಧಾಶ್ರಮಗಳು ಸಮಾಜಕ್ಕೆ ಮಾರಕ ಸಂದೇಶವನ್ನು ಕೊಡುತ್ತದೆ. ನಮ್ಮಂತಹ ವೃದ್ಧಾಶ್ರಮಗಳು ಬೆಳೆದಂತೆ ಕಾಪಾಡಬೇಕಾದರೆ ತಾವೆಲ್ಲರೂ ಕೂಡ ತಮ್ಮ ಹೆತ್ತವರನ್ನು ಕೊನೆಯ ದಿನಗಳಲ್ಲಿ ಕೈ ಬಿಡಬಾರದು. ಕಾರುಣ್ಯಾಶ್ರಮಕ್ಕೆ ಪಾಟೀಲ್ ಶಿಕ್ಷಣ ಸಂಸ್ಥೆಯಿಂದ ಬಹುದೊಡ್ಡ ಮಟ್ಟದ ಸಹಾಯ ಸಹಕಾರ ದೊರೆತಿದೆ. ವಿಶೇಷವಾಗಿ ಮಹಿಳಾ ಮಹಾವಿದ್ಯಾಲಯದ ಎಲ್ಲಾ ವಿದ್ಯಾರ್ಥಿನಿಯರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ. ಹೆಣ್ಣು ಒಂದು ಮನೆಯಲ್ಲಿ ಹುಟ್ಟಿ ಇನ್ನೊಂದು ಮನೆಯನ್ನು ಬೆಳಗುವಂತಹ ನಂದಾದೀಪ ಅಲ್ಲಿಯೂ ಕೂಡ ಅವಿದ್ಯಾವಂತ ಅತ್ತೆ ಮಾವಂದಿರಿದ್ದರೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಎಂದು ವಿದ್ಯಾರ್ಥಿಗಳಲ್ಲಿ ಉಪನ್ಯಾಸ ನೀಡಿದರು. ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ನ ಕಾರ್ಯದರ್ಶಿಗಳು ಕಾರುಣ್ಯ ಆಶ್ರಮದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಅಶೋಕ ನಲ್ಲ ಮಾತನಾಡಿ ಇಂದಿನ ವಿದ್ಯಾರ್ಥಿಗಳು ನಮ್ಮ ಆಶ್ರಮದಲ್ಲಿ ಹಿರಿಯ ತಂದೆ ತಾಯಿಗಳನ್ನು ನೋಡಿಕೊಂಡ ರೀತಿ ನೋಡಿದರೆ ನೀವೆಲ್ಲರೂ ಕೂಡ ನಮ್ಮ ಭಾರತೀಯ ಕರುಣಾಮಯಿಸಲು ಸಂಸ್ಕೃತಿಯನ್ನು ಉಳಿಸುತ್ತೀರಿ ಎನ್ನುವ ಭರವಸೆ ನನಗಿದೆ. ನಮ್ಮ ಭಾರತೀಯ ಶಿಕ್ಷಣವು ಭಾರತ ದೇಶದ ಘನತೆ ಗೌರವವನ್ನು ಎತ್ತಿ ಹಿಡಿಯುವಂತಹ ಶಿಕ್ಷಣವಾಗಬೇಕೆನ್ನುವುದೇ ನಮ್ಮ ಕಾರುಣ್ಯ ಕುಟುಂಬದ ಮೂಲ ಉದ್ದೇಶವಾಗಿದೆ ಎಂದು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸೂಗೂರಯ್ಯ ಸಾಲಿಮಠ ನ್ಯಾಕ್ ಸಂಯೋಜಕರು ಪಾಟೀಲ್ ಮಹಿಳಾ ಮಹಾವಿದ್ಯಾಲಯ. ಉಪನ್ಯಾಸಕರಾದ ಕುಮಾರಿ ಸಂಧ್ಯಾರಾಣಿ. ಬಸವರಾಜ ಕೋರವಾರ. ಚೊಲೇಂದ್ರ ಭೂಪಲ್. ಮಲ್ಲಿಕಾರ್ಜುನ.ಚೈತ್ರ. ಆರೋನೋಲ್ಡ್ ಸ್ಟಿಫನ್. ಹಾಗೂ ಶ್ರೀ ಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಬೇಗಂ ಹವಾಲ್ದಾರ್ ಅಧ್ಯಕ್ಷರು ಮಹಿಳಾ ಕಾಂಗ್ರೆಸ್ ಘಟಕ ಮಸ್ಕಿ ವಿಧಾನಸಭಾ ಕ್ಷೇತ್ರ. ಹಾಗೂ ಆಶ್ರಮದ ಸಿಬ್ಬಂದಿಗಳಾದ ಸಿದ್ದಯ್ಯ ಸ್ವಾಮಿ ಮರಿಯಪ್ಪ ಹಾಗೂ ಪಾಟೀಲ್ ಮಹಿಳಾ ಮಹಾ ವಿದ್ಯಾಲಯದ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಹೆತ್ತವರನ್ನು ಸಮಾಜದಲ್ಲಿನ ಹಿರಿಯ ನಾಗರಿಕರನ್ನು ಗೌರವಿಸಿದಾಗ ಮಾತ್ರ ನಿಮ್ಮ ಶಿಕ್ಷಣಕ್ಕೆ ಅರ್ಥ — ಡಾ. ಚನ್ನಬಸಯ್ಯ ಸ್ವಾಮಿ ಹಿರೇಮಠ ಕಾರುಣ್ಯಾಶ್ರಮದಲ್ಲಿ ಸಿಂಧನೂರಿನ ಪಾಟೀಲ್ ಮಹಿಳಾ ಮಹಾ ವಿದ್ಯಾಲಯದಿಂದ ಸೇವಾ ತರಬೇತಿ ಕಾರ್ಯಗಾರ.