ವಾಂಸಳಿ ಸೇವಾಲಾಲ್ ಬಂಜಾರ ಹಾಡು ಅದ್ದೂರಿ ಚಿತ್ರೀಕರಣ.
ಶ್ರೀ ಗೋಪಾಲ ಬಿ ನಾಯಕ್ ರಚಿಸಿ ಹಾಡಿರುವ ಶ್ರೀ ಸಂತ ಸೇವಾಲಾಲ್ ಮಹಾರಾಜರ ಭಕ್ತಿ ಗೀತೆಯ ಚಿತ್ರೀಕರಣ ಶ್ರೀ ಸಂತ ಸೇವಾಲಾಲ್ ಮಹಾರಾಜರ ಜನ್ಮಸ್ಥಳ ಭಾಯಾಗಡ್ ಸೂರಗೊಂಡನಕೊಪ್ಪದಲ್ಲಿ ಭಾನುವಾರ ಚಿತ್ರೀಕರಣ ಪ್ರಾರಂಭವಾಯಿತು. ಶ್ರೀ ಗೀರಿಶ ಡಿ ಆರ್ ಶಿವಮೊಗ್ಗ ಅಧ್ಯಕ್ಷರು ಬಂಜಾರ ವಿಧ್ಯಾರ್ಥಿ ಸಂಘ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು. ಶ್ರೀ ಮಂಜು ನಾಯ್ಕ್ ಉಪಸ್ಥಿತರಿದ್ದರು. ಈ ಗೀತೆಯ ನಿರ್ದೇಶ ಮತ್ತು ನೃತ್ಯ ಸಂಯೋಜನೆಯನ್ನು ರೀಷಿತ್ ಸಾಮ್ರಾಟ್ ಮಾಡಿದ್ದಾರೆ. ರವಿ ಅವರ ಛಾಯಾಗ್ರಹಣವಿದೆ. ಅಶ್ವಿನಿ ಆರ್ ರಾಠೋಡ್ ಅವರ ನಿರ್ಮಾಣವಿದೆ. ರಾಮು ಎನ್ ರಾಠೋಡ, ಸ್ಪೂರ್ತಿ, ಕೀರ್ತಿ, ಚಂದನ, ನಾಗಮ್ಮ, ರೇವತಿ, ಸೌಂದರ್ಯ, ಅಶ್ವಿನಿ, ಧನುಶ್ರೀ ಕಲಾವಿದರು ಈ ಗೀತೆಯಲ್ಲಿ ಅಭಿನಯಿಸಿದ್ದಾರೆ.