ದಕ್ಷಿಣ ಕರ್ನಾಟಕದ ಪ್ರಯಾಗ್ ರಾಜ್ ಟಿ ನರಸೀಪುರದಲ್ಲಿ ಕುಂಭಮೇಳ….

Spread the love

ದಕ್ಷಿಣ ಕರ್ನಾಟಕದ ಪ್ರಯಾಗ್ ರಾಜ್ ಟಿ ನರಸೀಪುರದಲ್ಲಿ ಕುಂಭಮೇಳ….

ಗಂಗೆ ಚ ಯಮುನೆ ಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲಸ್ಮಿನ್ ಸನ್ನಿಧಿಮ್ ಕುರು…..ಈ ರೀತಿಯಾಗಿಪವಿತ್ರ ನದಿಗಳ ಹೆಸರುಗಳನ್ನು ಸ್ಮರಿಸುತ್ತಾ ನಿತ್ಯ ದೇವರಿಗೆ ಅಭಿಷೇಕಗಳನ್ನು ಸಲ್ಲಿಸುವ ಹಿಂದುಗಳ ಪರಂಪರೆಯಲ್ಲಿ ಪವಿತ್ರ ನದಿಗಳ ಸ್ಥಾನಕ್ಕೆ ಅತ್ಯಂತ ಮಹತ್ವವಿದೆ.ಸದ್ಯಕ್ಕೆ ಮನುಕುಲದ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮ 144 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವುದೇ.ಅದೆಷ್ಟೋ ಜನ ಪ್ರಯಾಗ್ ರಾಜ್ ಗೆ ಹೋಗಲು ಸಾಧ್ಯವಾಗದೆ ಬೇಸರಗೊಂಡಿದ್ದಾರೆ.ಅಂಥವರಿಗೊಂದು ಸುವರ್ಣ ಅವಕಾಶ ನಮ್ಮ ಕರ್ನಾಟಕದಲ್ಲಿಯೇ ಇದೀಗ ದೊರಕಿದೆ.

ಕಾವೇರಿ ಕಬಿನಿ ಹಾಗೂ ಗುಪ್ತಗಾಮಿನಿಯಾದ ಸ್ಪಟಿಕ ನದಿಗಳ ಸಂಗಮ ಸ್ಥಳವಾದ ಟೀ ನರಸೀಪುರದಲ್ಲಿ ಫೆಬ್ರವರಿ ಹತ್ತರಿಂದ ಹನ್ನೆರಡರವರೆಗೆ ಕುಂಭಮೇಳ ನಡೆಯಲಿದೆ.ಫೆಬ್ರವರಿ 10 ರಂದು ಸಂಕಲ್ಪ ಗಣಪತಿ ಹೋಮ ಅಗಸ್ತ್ಯ ದೇವಾಲಯದಲ್ಲಿ ರುದ್ರಭಿಷೇಕ ಸಂಜೆ ಧಾರ್ಮಿಕ ಕಾರ್ಯಕ್ರಮವಿರುತ್ತದೆ. ಫೆ11 ರಂದು ನವಗ್ರಹ ಹೋಮ ಸುದರ್ಶನ ಹೋಮ ಮಹಾಮಂಡಲೇಶ್ವರರ ಸಂಗಮ ಕ್ಷೇತ್ರ ಪ್ರವೇಶ ಹಾಗೂ ಉತ್ತರಪ್ರದೇಶದ ವಾರಣಾಸಿ ರೀತಿಯಲ್ಲಿ ದೀಪಾರತಿ ನಡೆಯಲಿದೆ. ಫೆ12 ರಂದು ಚಂಡಿಕಾ ಹೋಮ ಪೂರ್ಣಹುತಿ ತ್ರಿವೇಣಿ ಸಂಗಮದಲ್ಲಿ ಸಪ್ತ ಪವಿತ್ರ ನದಿಗಳಿಂದ ತಂದ ತೀರ್ಥವನ್ನು ಸಂಯೋಜನೆ ಮಾಡಲಾಗುತ್ತದೆ ಪುಣ್ಯ ಸ್ನಾನ ಧರ್ಮಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವಿರುತ್ತದೆ.

ಉತ್ತರ ಭಾರತದ ಪ್ರಯಾಗ್,ನಾಸಿಕ್ ಹರಿದ್ವಾರ ಉಜ್ಜಯಿನಿಗಳಂತ ಸ್ಥಳಗಳಲ್ಲಿ ಅನಾದಿಕಾಲದಿಂದಲೂ ಕುಂಭಮೇಳ ನಡೆಯುತ್ತಾ ಬಂದಿದೆ.ಇಲ್ಲಿ ಕೋಟ್ಯಾಂತರ ಜನರು ಶ್ರದ್ಧಾ ಭಕ್ತಿಗಳಿಂದ ಭಾಗವಹಿಸಿ ಪುಣ್ಯ ಸ್ನಾನ ಮಾಡಿ ಪ್ರಾರ್ಥಿಸುತ್ತಾರೆ.ಪುಣ್ಯಾರ್ಜನೆಯ ಈ ಸೌಭಾಗ್ಯದಿಂದ ದಕ್ಷಿಣ ಭಾರತದವರು ವಂಚಿತರಾಗುತ್ತಿದ್ದನ್ನು ಮನಗಂಡ ಪೂಜ್ಯ ಪೀಠಾಧಿಪತಿಗಳಾದ ಸುತ್ತೂರು ಶ್ರೀ ಕ್ಷೇತ್ರ ವೀರ ಸಿಂಹಾಸನ ಮಹಾ ಸಂಸ್ಥಾನದ ಪರಮ ಪೂಜ್ಯ ಜಗದ್ಗುರುಗಳು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳು ಬೆಂಗಳೂರು ಶ್ರೀ ಕೈಲಾಸ ಆಶ್ರಮದ ಪರಮಪೂಜ್ಯ ಜಗದ್ಗುರುಗಳು ಶ್ರೀ ತಿರುಚ್ಚಿ ಮಹಾಸ್ವಾಮಿಗಳು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರುಗಳು ಡಾ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳು ಮೈಸೂರಿನ ಶ್ರೀ ಅವಧೂತ ದತ್ತಪೀಠದ ಪರಮ ಪೂಜ್ಯ ಜಗದ್ಗುರುಗಳು ಶ್ರೀ ಗಣಪತಿ ಸಚ್ಚಿದಾನಂದ ಮಹಾಸ್ವಾಮಿಗಳು ಮತ್ತು ಸದ್ಗುರು ಶ್ರೀ ಓಂಕಾರಶ್ರಮ ಮಹಾ ಸಂಸ್ಥಾನದ ಶ್ರೀ ಶಿವಪುರಿ ಮಹಾಸ್ವಾಮಿಗಳು ಇವರೆಲ್ಲರ ನೆರವಿನಿಂದತ್ರಿವೇಣಿ ಸಂಗಮ ಕ್ಷೇತ್ರ ಟಿ ನರಸೀಪುರದಲ್ಲಿ ಕುಂಭಮೇಳವನ್ನು ಆಚರಿಸುವ ನಿರ್ಧಾರ ಕೈಗೊಂಡು 1989ರಲ್ಲಿ ಪ್ರಾರಂಭಿಸಲಾಯಿತು.ಪ್ರತಿ ಮೂರು ವರ್ಷಗಳಿಗೊಮ್ಮೆ ಈ ಕುಂಭಮೇಳ ನಡೆಯುತ್ತದೆ.ಕೋವಿಡ್ ಕಾಣದಿಂದಾಗಿ ಈ ಹಿಂದಿನ ಕುಂಭಮೇಳ ನಡೆಯದೆ ಇದೀಗ 6 ವರ್ಷಗಳ ನಂತರ ಕುಂಭಮೇಳ ನಡೆಯುತ್ತಲಿದೆ.

ಈ ಸ್ಥಳದಲ್ಲಿ ಪುಣ್ಯಸ್ನಾನ ಮಾಡಿದರೆ ಕಾಶಿಗಿಂತ ಸಾಸಿವೆ ಯಷ್ಟು ಅಧಿಕ ಪುಣ್ಯ ಫಲ ದೊರೆಯುತ್ತದೆ ಎಂದು ಗುಂಜ ನರಸಿಂಹಸ್ವಾಮಿ ಹೇಳಿರುವರಂತೆ.ಈ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಪಂಚ ಶಿವಲಿಂಗಗಳಾದ ಅಗಸ್ತ್ಯ ಮುನಿಗಳು,ಮಾರ್ಕಂಡೇಶ್ವರ,ಸೋಮೇಶ್ವರ,ಹನುಮಂತೇಶ್ವರ,ಅರ್ಧನಾರೀಶ್ವರ ದೇವಾಲಯಗಳ ದರ್ಶನ ಪಡೆದು ಭಕ್ತಿಯಿಂದ ಬೇಡಿದರೆ ಸಕಲ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆಯಿದೆ.  ಶ್ರೀಮತಿ ನಂದ ಸಂಗಮೇಶ ಹುರಕಡ್ಲಿ.   ಹುಬ್ಬಳ್ಳಿ.

Leave a Reply

Your email address will not be published. Required fields are marked *