ಕೊರೋನಾ ತಡೆಗಟ್ಟುವ ಜಾಗೃತಿ ಕಾರ್ಯಕ್ರಮಕ್ಕೆ ಎಲ್ಲಾ ಸರಕಾರಿ ನೌಕರರನ್ನು ಬಳಸಿಕೊಳ್ಳಲು ಆಗ್ರಹ.

Spread the love

ಕೊರೋನಾ ತಡೆಗಟ್ಟುವ ಜಾಗೃತಿ ಕಾರ್ಯಕ್ರಮಕ್ಕೆ ಎಲ್ಲಾ ಸರಕಾರಿ ನೌಕರರನ್ನು ಬಳಸಿಕೊಳ್ಳಲು ಆಗ್ರಹ.

ಸಂಗಮೇಶ ಎನ್ ಜವಾದಿಯವರು ಇಂದು ಚಿಟಗುಪ್ಪಾದಲ್ಲಿ ಮಾಹಾಮಾರಿ ಕೊರೋನಾ ರೋಗದ ಹಾವಳಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದಕಾರಣ ಇದನ್ನು ತಡೆಗಟ್ಟಲು ಸರಕಾರದ ಮಟ್ಟದಲ್ಲಿ ಅನೇಕ ಕಾರ್ಯಕ್ರಮಗಳು ಸೂಸುತ್ರವಾಗಿ ನಡೆಯುತ್ತಿವೆ. ಆದರೂ ಸಹ ಇದನ್ನು ತಹಬದಿಗೆ ತರುವ ಪ್ರಯತ್ನ ಕಷ್ಟಕರವಾಗುತ್ತಿದೆಂದು ಹೇಳಬಹುದು. ಈ ಹಿನ್ನೆಲೆಯಲ್ಲಿ ಎಲ್ಲರೂ ಕೊರೋನಾ vaccine ತೆಗೆದುಕೊಳ್ಳುವುದು ಅತಿ ಅವಶ್ಯಕತೆ ಇದೆ. ಆದರೆ ಕೆಲ ಅವಿವೇಕಿಗಳು ಇದರ ಬಗ್ಗೆ ಜನರಲ್ಲಿ ಅಪನಂಬಿಕೆ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಇವರ ಕುರಿತು ನಾವೆಲ್ಲರೂ ಎಚ್ಚರಿಕೆಯಿಂದ ಇರುವುದು ಒಳಿತು. ಜೊತೆಗೆ ಇತ್ತೀಚಿನ ದಿನಗಳಲ್ಲಿ ಆಶಾ ಕಾರ್ಯಕರ್ತರ ಹಾಗೂ ವೈದ್ಯ ಸಿಬ್ಬಂದಿಗಳ ಮೇಲೆ ಕೆಲಸದ ಒತ್ತಡ ಹೆಚ್ಚಾಗಿ ಹೇರುವದನ್ನು ಕಾಣುತ್ತಿದ್ದೇವೆ.ಇದು ಎಲ್ಲೋ ಕಡೆ ಇವರಿಗೆ ಮಾನಸಿಕ ಕಿರಿಕಿರಿ ಉಂಟು ಮಾಡುತ್ತಿದೆ ಎಂಬ ಭಾವನೆ ಮೂಡುತ್ತದೆ. ಈ ದಿಸೆಯಲ್ಲಿ ಸರಕಾರ ಇವರ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಇವರಿಗೆ ಸೂಸುತ್ರವಾಗಿ ಕೆಲಸ ಮಾಡಲು ಅನುವು ಮಾಡಿಕೊಡುವುದು ಒಳ್ಳೆಯದು ಎಂಬ ನಂಬಿಕೆ ನಮ್ಮದಾಗಿದೆ. ಯಾಕೆಂದರೆ ಸಾವಿರಾರು ಸರಕಾರಿ ನೌಕರರು ಸಹ ನಮ್ಮಲ್ಲಿ ಇದ್ದಾರೆ.ಇವರ ಉಪಯೋಗ ತೆಗೆದುಕೊಳ್ಳಬಹುದಾಗಿದೆ. ಉದಾಹರಣೆಗೆ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಕಂದಾಯ ಇಲಾಖೆ,ತಾಲೂಕು ಪಂಚಾಯತ,ಕೃಷಿ ಇಲಾಖೆ, ಸಹಕಾರ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ವಿವಿಧ ಬಗೆಯ ಸಿಬ್ಬಂದಿಗಳು ನಮ್ಮ ಸರಕಾರದ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರುಗಳನ್ನು ಈ  ಕಾರ್ಯಕ್ಕೆ ಯಾಕೇ ಬಳಸಿಕೊಳ್ಳಬಾರದು ಎಂಬ ಚಿಂತನೆ ನಮ್ಮದು. ದಯವಿಟ್ಟು ಇವರನ್ನು  ಬಳಸಿಕೊಳ್ಳುವ ನಿಟ್ಟಿನಲ್ಲಿ ಸರಕಾರ ಗಂಭೀರವಾದ ಚಿಂತನೆ ಮಾಡುವುದು ಬಹಳ ಮುಖ್ಯವಾಗಿದೆ. ಈ ನೆಲೆಯಲ್ಲಿ ಬಳಸಿಕೊಂಡು ಕೊರೋನಾ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಕೈಜೋಡಿಸಿಕೊಳ್ಳುವುದು ಒಳ್ಳೆಯದು ಹಾಗೂ vaccine ತೆಗೆದುಕೊಳ್ಳುವಂತೆ ಜನರಿಗೆ ಪ್ರೇರೇಪಿಸುವ ಕೆಲಸ ಮಾಡುವಂತೆ ಇವರಿಗೆ ಸೂಚನೆ ನೀಡುವುದರ ಜೊತೆಗೆ vaccine registration ಮಾಡಲು ಒಬ್ಬ ಸರಕಾರಿ ನೌಕರರಿಗೆ ದಿನಕ್ಕೆ 30 – 40 ಜನರ ನೋಂದಣಿ ಮಾಡುವಂತೆ ಇವರಗೆ ತಿಳಿಸುವುದು ಸಹ ಅವಶ್ಯಕತೆ ಇದೆ. ಹೀಗಾದಾಗ ಮಾತ್ರ ಕೊರೋನಾ ಜಾಗೃತಿ ಅಭಿಯಾನ ಸೂಸುತ್ರವಾಗಿ ಸಾಗುವುದರಲ್ಲಿ ಸಂಶಯವಿರುವುದಿಲ್ಲ. ಆದ್ದರಿಂದ ಕೂಡಲೇ ಸರಕಾರದ ಸಂಬಂಧ ಪಟ್ಟ ಅಧಿಕಾರಿಗಳು ಇವರನ್ನು ಬಳಸಿಕೊಂಡು ಕೊರೋನಾ ತಡೆಗಟ್ಟುವ ಕೆಲಸ ಆದಷ್ಟು ಬೇಗ ಮಾಡಲೆಂದು ಆಶಿಸುತ್ತೇನೆ.  ಸಂಗಮೇಶ ಎನ್ ಜವಾದಿ, ಕೊಡಂಬಲ. ಸಮಾಜಿಕ ಕಾರ್ಯಕರ್ತ.

ವರದಿ – ಸಂಗಮೇಶ ಎನ್ ಜವಾದಿ, ಕೊಡಂಬಲ.

Leave a Reply

Your email address will not be published. Required fields are marked *