ಉಸಿರು ಹೃದಯ
ಅರಳಿ ನಗುತಿರುವ ಪುಷ್ಪವನು
ಪತ್ರೆಯೊಂದು ಕೇಳಿತು ಇಂತು
ಗಿಡ ತೊರೆದ ಒಂದೆರಡು ಗಳಿಗೆಯಲಿ
ಏಕೆ ತೊರೆಯುವೆ ನೀನು ಪ್ರಾಣವನು
ಹೂವೆಳಿತು
ಉಸಿರಿನೊಂದಿಗೆ ಹೃದಯವನು ನಿನ್ನ ಬಳಿ ಬಿಟ್ಟು ಬಂದೆನೆಲ್ಲ ಎಂದು
ನಾ ನಿನಗಿಂತ ಸುಂದರವಾಗಿ
ಕಂಡದ್ದೆ ನಿನಗಾಗಿ ಗೆಳೆಯಾ
ನನ್ನ ಸೌಂದರ್ಯದ ಮೋಹದಲ್ಲಿ
ನಿನ್ನ ಮುಟ್ಟದಿರಲಿ ಎಂದು
ನಿನ್ನ ಪ್ರೇಮದ ಪರಿಯಲಿ ದಿನವೂ
ಮೊಗ್ಗಾಗಿ ಹೂವಾಗಿ ನಳನಳಿಸುವೆನು
ನಿನ್ನ ಮೋಹದ ಪರಿಗೆ ನಾ ಮರಣಿಸುವೆನು
ದಿನ ಜನಿಸಿದರು ನಿನ್ನೊಂದಿಗೆ ಅದೇ ಭಾವವೂ
ನನ್ನ ಹೊರೆತಾಗಿಯೂ ನೀ ನಲಿಯುವೆ ನಗುವೇ ಸೃಜಿಸುವೆ
ನಿನ್ನ ಹೊರೆತಾಗಿ ನಾ ಮರಣಿಸುವೆ ಮರಣಿಸುವೆ ಮರಣಿಸುವೆ
ಏಕೆಂದರೆ ಉಸಿರಿನೊಂದಿಗೆ ಹೃದಯ ನಿನ್ನ ಬಳಿ ಬಿಟ್ಟು ಬಂದಿರುವೆ
ಸುಮಾಶಿವಕುಮಾರ್ (ದಾವಣಗೆರೆ )ಸಹಶಿಕ್ಷಕರು