ಯಾರು?
ದಿಗಂತದಾಚೆ ಎಲ್ಲೋ ಅಡಗಿರುವ
ಭಗವಂತನ ನಿಜ ಸ್ವರೂಪವ ಬಲ್ಲವರಾರು?
ಆಗಮ ಶಾಸ್ತ್ರಗಳೊಳಗಿರುವ ಸಂದೇಶವ
ಜಗದ ಜನರಿಗೆ ಅರ್ಥಮಾಡಿಸುವವರಾರು?.
ಮಂದಿರ ಮಸೀದಿ ಚರ್ಚ್ ಬಸದಿಗಳ ಕಟ್ಟಿ
ಕಂದಾಚಾರ ಕಟ್ಟುಪಾಡುಗಳ ಬಾಗಿಲು ಹಾಕಿ
ದೇವರು ಭಕ್ತರ ನಡುವೆ ಪೂಜಾರಿಯನಿಟ್ಟು
ಭಕ್ತಿಯ ವ್ಯಾಪಾರವ ಮಾಡಿದವರಾರು?
ದಯವಿಲ್ಲದ ಧರ್ಮವನು ಮರೆಮಾಚಿ
ಭಯವಿಲ್ಲದ ಧರ್ಮವ ಕಟ್ಟಿದವರಾರು?
ಜಾತಿ ಕುಲ ಗೋತ್ರಗಳ ಮಣ್ಣನೆರಚಿ
ಮತಿ ಭ್ರಮಣೆಗೆ ಒಳಪಡಿಸಿದವರಾರು?
ಆಸ್ತಿಕರ ನಂಬಿಕೆಯ ಬಂಡವಾಳ ಮಾಡಿಕೊಂಡು
ಆಸ್ತಿ ಅಂತಸ್ತಿನ ಮಹಲುಗಳ ಕಟ್ಟಿದವರಾರು?
ಯಾರವರೆಂಬುವ ಪ್ರಶ್ನೆಗೆ ಉತ್ತರವ
ಸರಿಯಾಗಿ ಹೇಳುವವರು ಯಾರು?.
ಶಿವಮೂರ್ತಿ.ಹೆಚ್. ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್
ಅನುಭವಮಂಟಪ, ದಾವಣಗೆರೆ.
ದೂ.ಸಂ. 9591417815.
ಧನ್ಯವಾದಗಳು ಸರ್