ಬೆಂಗಳೂರು ವಿವಿ: ಚಲಪತಿ ಕೆ. ಅವರಿಗೆ ಪಿಎಚ್.ಡಿ ಪ್ರದಾನ.
ಬೆಂಗಳೂರು: ಫೆ.12: ಬೆಂಗಳೂರು ವಿಶ್ವವಿದ್ಯಾಲಯದ ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್”ನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿರುವ ಚಲಪತಿ ಕೆ. ಅವರಿಗೆ ಪಿಎಚ್.ಡಿ ಪ್ರದಾನ ಮಾಡಲಾಗಿದೆ. ಬೆಂಗಳೂರು ವಿವಿಯ “ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್”ನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಂಶೋಧನಾ ವಿದ್ಯಾರ್ಥಿ ಚಲಪತಿ ಕೆ. ಅವರು ಯುವಿಸಿಇ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಡಾ. ಇನಾಯತುಲ್ಲಾ ಎಂ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ಕ್ವಾಂಟೇಟಿವ್ ಅಂಡ್ ಕ್ವಾಲಿಟಿಯೇಟಿವ್ ಅನಾಲಿಸಿಸ್ ಆಫ್ ಸೀಸೊನಾಲ್ ಅಂಡ್ ಸ್ಪೆಷಿಯಲ್ ವೇರಿಯೇಷನ್ಸ್ ಇನ್ ಸರ್ಫೇಸ್ ಅಂಡ್ ಗ್ರೌಂಡ್ ವಾಟರ್ ಅಟ್ ರಿವರ್ ಬೇಸಿನ್ ಸ್ಕೇಲ್” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.