ಕೊಪ್ಪಳ ಜಿಲ್ಲಾ ಬಚಾವೋ ಆಂದೋಲ ಸಮಿತಿ.
ಫೆಬ್ರವರಿ 17 ರಿಂದ 21 ರ ವರೆಗೆ ಕೊಪ್ಪಳ ನಗರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಜಾಗೃತಿ ಆಂದೋಲನ. ಫೆಬ್ರವರಿ 22-2025 ರಂದು ವಿಚಾರ ಸಂಕಿರಣ. MSPL ಬಲ್ಡೋಟಾ ಇತರೆ 50 ಕ್ಕೂ ಹೆಚ್ಚಿನ ಕಾರ್ಖಾನೆಗಳ ಬೂದಿ, ಧೂಳು, ಹೊಗೆ ಪರಿಸರ ಮಾಲಿನ್ಯದಿಂದ ಕೊಪ್ಪಳ ನಗರ ಹಾಗೂ ಸುತ್ತಲಿನ ಗ್ರಾಮಗಳ ಜನರು ಹಲವು ರೋಗಕ್ಕೆ ತುತ್ತಾಗಿ ತೊಂದರೆ ಅನುಭವಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಎರಡು ದಿನಗಳಿಂದ ಬೆಂಗಳೂರಿನಲ್ಲಿ ನಡೆದಿರುವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ, MSPL ಬಲ್ಡೋಟಾ ಕಂಪನಿಯು 54 ಸಾವಿರ ಕೋಟಿ ವೆಚ್ಚದಲ್ಲಿ ಕಾರ್ಖಾನೆ ವಿಸ್ತರಿಸಲು ಘೋಷಿಸಿದೆ. ಕಾರ್ಖಾನೆ ವಿಸ್ತರ್ಣೆಯಾದರೆ 5 ರಷ್ಟು ತ್ಯಾಜ್ಯ ಧೂಳು ಹೆಚ್ಚಾಗುತ್ತದೆ. ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಪರಿಸರ ತಜ್ಞರು ಭಾಗವಹಿಸುವರು*. ಅಪಾಯಕಾರಿಯಾದ ಮಾನವ ವಿನಾಶದ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ನಡೆದಿರುವ ಸಿದ್ದತೆ ಕುರಿತು ಚರ್ಚಿಸಲಾಯಿತು. ಈ ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಮತ್ತು ಜಿಲ್ಲೆಯ ಸಂಸದರಿಗೆ, ಶಾಸಕರಿಗೆ ಮಂತ್ರಿಗಳಿಗೆ ಒತ್ತಾಯಿಸುವುದು. ರಾಜ್ಯದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸಂಸದರು ಪಾರ್ಲಿಮೆಂಟಿನಲ್ಲಿ ಧ್ವನಿ ಎತ್ತಲು ಒತ್ತಾಯಿಸುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಿಟ್ಟ ನಿರ್ಧಾರ ತಗೆದುಕೊಳ್ಳದಿದ್ದರೆ,ಕೊಪ್ಪಳ ಜಿಲ್ಲೆಯ ಪ್ರಗತಿಪರರ, ಮತ್ತು ಪರಿಸರವಾದಿಗಳ ಮತ್ತು ಪ್ರಜ್ಞಾವಂತರ ಭಾರಿ ಪ್ರತಿರೋದ ಎದುರಿಸಬೇಕಾಗುತ್ತದೆ. 9 ಜನರ ಸಂಚಾಲಕ ಸಮಿತಿ ರಚನೆ ಮಾಡಲಾಯಿತು. ಹಿರಿಯ ಸಾಹಿತಿಗಳಾದ ಅಲ್ಲಮ ಪ್ರಭು ಬೆಟ್ಟದೂರ ಮಹಾಂತೆಶ ಕೊತ್ತಬಾಳ, ಡಿ.ಹೆಚ್.ಪೂಜಾರ, ಹನುಮಂತಪ್ಪ ಹೊಳೆಯಾಚೆ. ಬಸವರಾಜ ಶೀಲವಂತರ, ರತ್ನಾಕರ ಕುಕನೂರ, ಕಾಶ್ಮಿ ಸರ್ದಾರ, ಮಂಜುನಾಥ ಗೊಂಡಬಾಳ, ಶರಣು ಗಡ್ಡಿ, ಶ್ರೀ ಮತಿ ಜ್ಯೊತಿ ಗೊಂಡಬಾಳ, ಕೆ.ಬಿ.ಗೋನಾಳ, ಕಾಶಪ್ಪ ಚಲುವಾದಿ, ರಘು ಚಾಕರಿ, ಶ್ರೀವಾಸ ನಾಗೇಶನ ಹಳ್ಳಿ, ರುದ್ರಪ್ಪ ಭಂಡಾರಿ, ಹನುಮಂತಪ್ಪ ಹಾಲವರ್ತಿ, ಜಡಿಸ್ವಾಮಿ ಹಾಲವರ್ತಿ, ರಾಮಣ್ಣ ಚೌಡಕಿ, ಮುದಕಪ್ಪ ನರೆಗಲ್,ಮೂಖಪ್ಪ ಬಸಾಪುರ, ಶಿವಪ್ಪ ಹಡಪದ್ ಇತರರು ಭಾಗವಹಿದ್ದರು, (ಕೊಪ್ಪಳ ಜಿಲ್ಲಾ ಬಚಾವ್ ಆಂದೋಲನ ಸಮಿತಿ)