ರಾಯಚೂರು ನಗರದ ಗದ್ವಾಲ್ ರಸ್ತೆಯಲ್ಲಿರುವ ಜಲಾಲ್ ನಗರದಲ್ಲಿ ಗಂಡ ಮತ್ತು ಮಕ್ಕಳನ್ನು ಕಳೆದುಕೊಂಡ ತಾಯಮ್ಮ ಗಂಡ ದಿ.ರಾಮಣ್ಣ ಎನ್ನುವ ಈ ತಾಯಿಯನ್ನು ಸ್ಥಳೀಯರುಗಳು ಹಾಗೂ ಮಾರ್ಕೆಟ್ ಯಾರ್ಡ್ ಪೋಲಿಸ್ ಠಾಣೆಯ ಅಧಿಕಾರಿಗಳ ಸಮಕ್ಷಮದಲ್ಲಿ ಸಿಂಧನೂರಿನ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಆಶ್ರಯ ಕಲ್ಪಿಸಲಾಯಿತು. ಈ ಸಮಯದಲ್ಲಿ ಮಾರ್ಕೆಟ್ ಯಾರ್ಡ್ ಪಿ.ಎಸ್.ಐ.ಗಳಾದ ಅಮಿತಾ ರಾಮ್ ಮಾತನಾಡಿ ಈಕೆಯೂ ಸುಮಾರು ವರ್ಷಗಳಿಂದ ಜಲಾಲ್ ನಗರದಲ್ಲಿ ಸಾರ್ವಜನಿಕರಲ್ಲಿ ಸಹಾಯ ಕೇಳುತ್ತಾ ಹಸಿವು ನೀಗಿಸಿಕೊಳ್ಳುತ್ತಿದ್ದಳು. ಅಲ್ಲಿನ ಸ್ಥಳೀಯರು ಕೆಲವು ದಿನಗಳ ಹಿಂದೆ ಸಿಂಧನೂರಿನ ಕಾರುಣ್ಯ ಆಶ್ರಮಕ್ಕೆ ಮಾಹಿತಿ ನೀಡಿದ್ದರು. ಇಂತಹ ನೆಲೆ ಇಲ್ಲದ ಮಹಿಳೆಯರನ್ನು ರಕ್ಷಣೆ ಮಾಡುತ್ತಿರುವ ಕಾರುಣ್ಯಾಶ್ರಮದ ಸೇವೆ ಅಮೋಘವಾಗಿದೆ. ನಾನು ಸುಮಾರು ವರ್ಷಗಳಿಂದ ಈ ಆಶ್ರಮದ ಬಗ್ಗೆ ತಿಳಿದುಕೊಂಡಿದ್ದೇನೆ ಸತ್ಯ ಪ್ರಾಮಾಣಿಕ ಸೇವೆಯನ್ನು ಒದಗಿಸುತ್ತಿರುವ ಸಿಂಧನೂರಿನ ಕಾರುಣ್ಯ ಆಶ್ರಮವು ನಾಡಿನ ಜನರಿಲ್ಲದೆ ಬೇರೆ ಬೇರೆ ರಾಜ್ಯದ ಜನತೆಯ ಪ್ರೀತಿಗೆ ಪಾತ್ರವಾಗಿದೆ. ಮಾನವೀಯ ಮೌಲ್ಯಗಳು ಸಮಾಜದಲ್ಲಿ ಬಿತ್ತುತ್ತಿರುವ ಕಾರುಣ್ಯಾಶ್ರಮದ ಸೇವೆ ಶ್ಲಾಘನೀಯ. ಇಂತಹ ಕಾರ್ಯಕ್ಕೆ ಪ್ರತಿಯೊಬ್ಬರೂ ಕೂಡ ಸಹಾಯ ಸಹಕಾರ ನೀಡಿದಾಗ ಮಾತ್ರ ನಮ್ಮ ಸಂಸ್ಕೃತಿ ಸಂಪ್ರದಾಯ ಉಳಿಯಲು ಸಾಧ್ಯ.ಈ ಆಶ್ರಮಕ್ಕೆ ನನ್ನ ವತಿಯಿಂದ ವೈಯಕ್ತಿಕವಾಗಿ ನಿರಂತರ ಸಹಾಯ ಸಹಕಾರ ದೊರೆಯುತ್ತದೆ ಎಂದು ಮಾತನಾಡಿದರು. ಈ ಸಮಯದಲ್ಲಿ ಪೊಲೀಸ ಅಧಿಕಾರಿಗಳಾದ ಶಿವಮೂರ್ತಿ ಧುಮತಿ. ಎಚ್. ಸಿ.ಅನುಸೂಯ ಎಚ್.ಸಿ. ರಾಜು. ಎಸ್.ಹಳ್ಳಿ. ಎಚ್. ಸಿ. ಚಂದ್ರಶೇಖರ ನಾಯಕ ಎಚ್. ಸಿ. ದೇವರಾಜ ಎಚ್. ಜಿ. ಹಾಗೂ ಸ್ಥಳೀಯರುಗಳಾದ ವೆಂಕಟೇಶ. ಮುನಿಯಪ್ಪ. ನರಸಮ್ಮ. ಮತ್ತು ಆಶ್ರಮದ ಕಾರ್ಯಾಧ್ಯಕ್ಷರಾದ ಡಾ.ಚನ್ನಬಸಯ್ಯ ಸ್ವಾಮಿ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸಿದ್ದಯ್ಯ ಸ್ವಾಮಿ ಹಾಗೂ ಅನೇಕರು ಉಪಸ್ಥಿತರಿದ್ದರು.