ಜನವಸತಿ ಪ್ರದೇಶದಲ್ಲಿ ಕಾರ್ಖಾನೆಗಳು ಸ್ಥಾಪನೆ ಮಾಡುವುದು ನಿಯಮಗಳ ಉಲ್ಲಂಘನೆ.
ಕೊಪ್ಪಳ : ತಾಲೂಕಿನ ಗಿಣಿಗೇರಿ ಭಾಗದಲ್ಲಿ ಅನೇಕ ಕಾರ್ಖಾನೆಗಳು ನಿಯಮ ಉಲ್ಲಂಘಿಸಿ ಜನವಸತಿ ಪ್ರದೇಶಗಳಲ್ಲಿ ಸ್ಥಾಪನೆಯಾಗಿವೆ ಎಂದು ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್,ಎ,ಗಫಾರ್ ಆಕ್ರೋಶ ವ್ಯಕ್ತಪಡಿಸಿದರು,
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯಿಂದ ಗ್ರಾಮೀಣ ಹಾಗೂ ನಗರದ ಬೀದಿಗಳಲ್ಲಿ ಎಮ್,ಎಸ್,ಪಿ,ಎಲ್,ಕಾರ್ಖಾನೆ ವಿಸ್ತರಣೆ ಹಾಗೂ ಅಣುಸ್ಥಾವರ ಸ್ಥಾಪನೆ ವಿರುದ್ಧ ಜನ ಜಾಗೃತಿ ಬೀದಿ ಕಾರ್ಯಕ್ರಮದಲ್ಲಿ ಮುಂದುವರೆದು ಮಾತನಾಡಿ ಜನವಸತಿ ಪ್ರದೇಶಗಳಿಂದ ಸಾಕಷ್ಟು ದೂರ ಇರಬೇಕೆಂಬ ನಿಯಮ ಇದೆ,ಜನರಿಗೆ ಅದರಿಂದ ಯಾವುದೇ ರೀತಿಯ ಕೆಟ್ಟ ದುಷ್ಪರಿಣಾಮಗಳನ್ನು ಆಗಬಾರದು ಎಂಬ ಕಾಯ್ದೆ ಇದ್ದರೂ ಸಹ ಕಾಯ್ದೆ ನಿಯಮಗಳನ್ನು ಎಲ್ಲವೂ ಉಲ್ಲಂಘನೆ ಮಾಡಿದ್ದಾರೆ, ಚುನಾಯಿತ ಪ್ರತಿನಿಧಿಗಳು ಅದರ ಲಾಭ ಉಡಾಯಿಸಿ ಕಾರ್ಖಾನೆಗಳು ಸ್ಥಾಪನೆ ಮಾಡಿದ್ದರಿಂದ ಸುಮಾರು 30ಕ್ಕೂ ಹೆಚ್ಚು ಹಳ್ಳಿಗಳ ಮತ್ತು ನಗರದ ಜನರಿಗೆ ಆರೋಗ್ಯದ ಸಮಸ್ಯೆಯಾಗುತ್ತಿದೆ, ಆ ಹಳ್ಳಿಗಳ ಮನೆಗಳಲ್ಲಿ ಕಾರ್ಖಾನೆಗಳ ಬೂದಿ ಬೀಳುತ್ತಿದೆ, ಉಸಿರಾಡುವುದು ಸಮಸ್ಯೆಯಾಗಿದೆ, ಪ್ರಬಲವಾಗಿ ಬೆಳೆದಿರುವ ಕಾರ್ಖಾನೆಗಳಿಂದ ಸ್ಥಳೀಯ ಜನರಿಗೆ ಯಾವುದೇ ಲಾಭವಾಗುತ್ತಿಲ್ಲ, ಕಾರ್ಖಾನೆಗಳು ಈ ಭಾಗದಲ್ಲಿಯ ಜನರಿಗೆ ಉದ್ಯೋಗ ಕೊಡುತ್ತೇವೆ ಎಂದು ಬಂದು, ಸಣ್ಣ ಪುಟ್ಟ ಹುದ್ದೆಗಳಲ್ಲಿ ಕೆಲಸ ಕೊಟ್ಟು, ಉನ್ನತ ಹುದ್ದೆಗಳಲ್ಲಿ ಬೇರೆ ರಾಜ್ಯದವರಿಗೆ ಉದ್ಯೋಗ ಕೊಡುತ್ತಿದ್ದಾರೆ, ಹೊಲ ಕೊಟ್ಟವರು ಯಾವುದೇ ಲಾಭವಿಲ್ಲದೆ ಬೀದಿಪಾಲಾಗಿದ್ದಾರೆ, ಹಳಿಗಳಷ್ಟೇ ಅಲ್ಲ ಎಮ್,ಎಸ್,ಪಿ,ಎಲ್ ಕಾರ್ಖಾನೆ ಜಿಲ್ಲಾಧಿಕಾರಿಗಳ ಕಛೇರಿ ವರೆಗೂ ವಿಸ್ತರಣೆಯಾಗುತ್ತಾ ಬಂದಿದೆ, ನಗರದ ಸಮೀಪದ ಬಡಾವಣೆಗಳಲ್ಲಿಯ ಮನೆಗಳವರೆಗೂ ಬೂದಿ ಬರುತ್ತಿದೆ,ಹಲವಾರು ರೋಗಗಳು ಉಲ್ಬಣಗೊಳ್ಳುತ್ತಿದೆ, ಕಾರ್ಖಾನೆ ವಿಸ್ತರಣೆಯಾದರೆ ಗಿಣಿಗೇರಿ ಭಾಗದ ಹಳ್ಳಿಗಳು ಹಾಗೂ ಕೊಪ್ಪಳ ನಗರವನ್ನು ಸರ್ಕಾರ ದೂರದಲ್ಲಿ ಸ್ಥಳಾಂತರಿಸಬೇಕಾಗುತ್ತದೆ ಎಂದು ಎಚ್ಚರಿಸಿ, ಹೊಲಗಳಲ್ಲಿ ಬೆಳೆಯುವಂತ ಬೆಳೆಗಳ ಮೇಲೆ ಬೂದಿ ಬಿದ್ದು ಆಹಾರವು ಸಹ ಕಲುಷಿತಗೊಳ್ಳುತ್ತಿದೆ,ಇಂಥ ಆಹಾರ ತಿನ್ನುವ ಪರಿಸ್ಥಿತಿ ಬಂದಿದೆ,ನಮಗೆ ಆರೋಗ್ಯಕರ ಬದುಕು ಬೇಕಾಗಿದೆ, ಬರುವ ಪೀಳಿಗೆಗೆ ಯಾವುದೇ ತೊಂದರೆ ಆಗಬಾರದು ಎಂದರೆ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಲು ಮುಂದಾಗಬೇಕು, ಅಣುಸ್ಥಾವರ ಸ್ಥಾಪಿಸಲು ಹೊರಟಿರುವುದು ಸರಿಯಲ್ಲ ಇದು ನಮ್ಮ ಜಿಲ್ಲೆಯಲ್ಲಿ ಸ್ಥಾಪಿಸಬಾರದು ಎಂದು ಎಚ್ಚರಿಕೆ ನೀಡಿ,ಫೆಬ್ರವರಿ 22ರಂದು ಸಾಹಿತ್ಯ ಭವನದಲ್ಲಿ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳ ಕುರಿತು ಕಾರ್ಯಕ್ರಮವಿದೆ, ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ,ಈ ಹೋರಾಟ ನಮ್ಮ ಬೇಡಿಕೆ ಈಡೇರಿಸುವವರೆಗೂ ನಿರಂತರವಾಗಿ ನಡೆಯುತ್ತದೆ ಎಂದು ನುಡಿದರು.
ಟಿಯುಸಿಐ ಸಂಚಾಲಕ ಕೆ.ಬಿ.ಗೋನಾಳ ಮಾತನಾಡಿ ಬಲ್ಡೋಟಾ ಮಾಲಿಕತ್ವದ ಮಿನರಲ್ಸ್ ಸೇಲ್ಸ್ ಪ್ರೈವೇಟ್ ಲಿಮಿಟೆಡ್ (ಎಮ್,ಎಸ್,ಪಿ,ಎಲ್) 54 ಸಾವಿರ ಕೋಟಿ ಹೂಡಿಕೆಯ 1.50 ಎಂಟಿಪಿ ಉಕ್ಕಿನ ಉತ್ಪದನಾ ವಿಸ್ತರಣಾ ಘಟಕವನ್ನು ಬಲ್ಡೋಟಾ ಸ್ಟೀಲ್ಸ್ ಪ್ರೈವೇಟ್ ಲಿಮಿಟೆಡ್ ಎಂದು ಹೆಸರು ಬದಲಿಸಿಕೊಂಡು,ಸ್ಥಳೀಯ ಜನರ ಗಮನ ಬೇರೆಡೆ ಸೆಳೆಯುವ ಹುನ್ನಾರ ಹೊಂದಿರುವ ಕಂಪನಿ ಹಾಗೂ ಅನುಮತಿ ನೀಡಿದ ಸರ್ಕಾರದ ಕ್ರಮವನ್ನು ಖಂಡಿಸಿ,ಈಗಿರುವ ಘಟಕವನ್ನು ಸಂಪೂರ್ಣವಾಗಿ ಮುಚ್ಚಿದರೆ ಮಾತ್ರವೇ ಕೊಪ್ಪಳ ನಗರದ ಜನರು ಆರೋಗ್ಯಕರ ಗಾಳಿಯನ್ನು ಉಸಿರಾಡಬಹುದು. ಸದ್ಯದಲ್ಲಿರುವ ಘಟಕವನ್ನು ಮುಚ್ಚುವ ತೀರ್ಮಾನ ಕೈಗೊಳ್ಳಬೇಕಾದ ಅಗತ್ಯವಿದ್ದಾಗಲೂ ವಿಸ್ತರಣೆಗೆ ಮುಂದಾದ ಬಲ್ಡೋಟಾ ಕಂಪನಿಗೆ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ರತ್ನಗಂಬಳಿ ಹಾಕಿ ಸ್ವಾಗತಿಸಿರುವ ಸರ್ಕಾರದ ನಡೆ ಸಂಶಯಗಳಿಗೆ ಎಡೆಮಾಡಿದೆ.ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣದ 3 ಕೋಟಿ ಜನರ ಜೀವನಾಡಿಯಾದ ತುಂಗಭದ್ರಾ ನದಿ ನೀರು ಅರ್ಧದಷ್ಟು ಕೊಪ್ಪಳದ 50 ಬೃಹತ್ ಕಾರ್ಖಾನೆಗಳು ಇದಕ್ಕೂ ಹೆಚ್ಚಿನ ಬಳ್ಳಾರಿ, ವಿಜಯನಗರದ ಬೃಹತ್ ಕಾರ್ಖಾನೆಗಳು ಬಳಸಿಕೊಳ್ಳುತ್ತಿವೆ. ಈ ಮೂರು ಜಿಲ್ಲೆಗಳಲ್ಲಿ ಕೇವಲ 30 ಸಾವಿರ ಉದ್ಯೋಗ ಸೃಷ್ಟಿಸಿ 3 ಕೋಟಿ ಜನರ ಗ್ರಾಮೀಣದ ಎರಡು ಬೆಳೆಯ ನೀರಾವರಿ ಕೃಷಿ, ನಗರಗಳ ಕುಡಿಯುವ ನೀರಿನ ಹಕ್ಕು ಕಸಿದುಕೊಂಡಿವೆ. ರೈತರು ಮತ್ತು ನಗರಗಳ ಜನರು ನೀರಿಗಾಗಿ ಪರಿತಪಿಸುವ ಸ್ಥಿತಿ ಪ್ರತಿ ವರ್ಷ ಎದುರಾದಾಗ ಪ್ರಕೃತಿಯಲ್ಲಿ ಸಾಕಷ್ಟು ಮಳೆಯಾಗಿಲ್ಲ ಎನ್ನುವ ಸಬೂಬು ಹೇಳಿ ವಂಚಿಸಲಾಗುತ್ತಿದೆ. ಉದ್ಯೋಗ ಸೃಷ್ಟಿ ಎನ್ನುವ ಹುಸಿ ಭರವಸೆ ಸುಳ್ಳೆಂದು ಗೊತ್ತಾಗಿದೆ. ಭೂ ಬಾಧಿತ ಕುಟುಂಬಗಳಿಗೆ ಶೇ.5 ರಷ್ಟು ಉದ್ಯೋಗ ಕೊಟ್ಟಿಲ್ಲ.ಸ್ಥಳೀಯ ಆರ್ಥಿಕ ಅಭಿವೃದ್ಧಿ ಎನ್ನುವ ಮಾತು 20 ವರ್ಷಗಳಿಂದ ಸುಳ್ಳಾಗಿದೆ. ಕೊಪ್ಪಳ ನಗರ ಸಂಪೂರ್ಣ ಕಾರ್ಖಾನೆ ಧೂಳು ಹಾಗೂ ಹೊಗೆ ಆವರಿಸಿ ಅನಾರೋಗ್ಯದ ದುಷ್ಪರಿಣಾಮ ಪ್ರತಿಯೊಬ್ಬರೂ ಎದುರಿಸಿ ಬದುಕುವಂತಾಗಿದೆ. ಗ್ರಾಮೀಣ ಜನರ ಅಕ್ರಮ ಭೂಸ್ವಾಧೀನ ಹಾಗೂ ಪರಿಸರದ ಮೇಲಿನ ಭವಿಷ್ಯದ ಮಾಲಿನ್ಯ ಕುರಿತು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಕಳೆದ 2005 ರಿಂದ ಹೋರಾಡುತ್ತಾ ಬರುತ್ತಿದೆ.
ಈಗಲಾದರೂ ಜನರು ಜಾಗೃತರಾಗಿ ಹೋರಾಡಿ ಕಂಪನಿಗಳನ್ನು ಜಿಲ್ಲೆಯಿಂದ ಹೊರಗೆ ಹಾಕದಿದ್ದರೆ, ಕೊಪ್ಪಳ ನಗರ ಮತ್ತು ತಾಲೂಕಿನ ಕಾರ್ಖಾನೆ ಧೂಳು ಬಾಧಿತ ಗ್ರಾಮೀಣ ಜನರು ಎಚ್ಚೆತ್ತುಕೊಂಡು ಹೋರಾಟ ಮಾಡದಿದ್ದರೆ ಮುಂದಿನ ಪೀಳಿಗೆಗೆ ಭವಿಷ್ಯ ಮಂಕಾಗುತ್ತದೆ.ಆದ್ದರಿಂದ ಉಗ್ರ ಹೋರಾಟಕ್ಕೆ ಕೊಪ್ಪಳ ನಗರದ ಹಾಗೂ ಧೂಳು ಬಾಧಿತ ಗ್ರಾಮೀಣ ಜನರು ಮುಂದಾಗಬೇಕೆಂದು ಹೇಳಿದರು.
ಮೂರನೆ ದಿನದಲ್ಲಿ ಮುಂದುವರೆದಿರುವ ಜಾಗೃತಿ ಆಂದೋಲನ. ನಿನ್ನೆ ದಿನ ಕೊಪ್ಪಳ ನಗರ, ಹಾಲವರ್ತಿ, ಬೆಳವಿನ ಹಾಳ,ಬೇವಿನ ಹಳ್ಳಿ, ಹುಲಿಗಿ, ಹೊಸ ಕನಕಪುರ,ಹಳೆಯ ಕನಕಪುರದಲ್ಲಿ ಆಂದೋಲನ ಜರುಗಿತು. ಇಂದು ಕಾಸನಕಂಡಿ, ಚಿಕ್ಕ ಬಗನಾಳ, ಕುಣಿಕೇರಿ, ಕುಣಿಕೇರಿ ಲಾಚನಕೇರಿ ಮುಂತಾದ ಗ್ರಾಮಗಳಲ್ಲಿ ಕಾರ್ಯಕ್ರಮ ಜರುಗಿತು.ಕರ್ನಾಟಕ ರೈತ ಸಂಘದ ರಾಜ್ಯ ಆಧ್ಯಕ್ಷ ಡಿ.ಹೆಚ್.ಪೂಜಾರ, ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಬಸವರಾಜ್ ಶೀಲವಂತರ್, ಎಐಯುಟಿಯುಸಿ ಮುಖಂಡ ಎಶರಣು ಗಡ್ಡಿ, ಕೆ.ಆರ್.ಎಸ್ ನ ಜಿಲ್ಲಾ ಕಾರ್ಯದರ್ಶಿ ಬಸವರಾಜ ಪೂಜಾರ ನರೆಗಲ, ಕರ್ನಾಟಕ ಮಾದಿಗ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಮುದಕಪ್ಪ ಹೊಸಮನಿ ನರೆಗಲ್, ರಾಘು ಚಾಕರಿ,ಸುಂಕೇಶ, ಕರ್ನಾಟಕ ವಿದ್ಯಾರ್ಥಿ ಸಂಘ (kvs) ದುರುಗೇಶ ಬರಗೂರ, ಯಮನೂರ,ಮಾರುತಿ, ವಿದ್ಯಾರ್ಥಿನಿ ಯಮುನಾ ಮುಂತಾದವರು ಭಾಗವಹಿಸಿದ್ದರು.