ತಿರುಮಲೇಶ್ – ಕಾಯಕ ಕಣ್ಮಣಿ ವೀರ 2024 ರಾಜ್ಯ ಪ್ರಶಸ್ತಿಗೆ ಭಾಜನ.
ಎಲೆಮರೆ ಕಾಯಿಯಂತೆ ಇದ್ದುಕೊಂಡು ಹಲವಾರು ವರ್ಷಗಳಿಂದ ಸಾಮಾಜಿಕ ಸೇವೆ, ಚಿತ್ರ, ಕಿರುಚಿತ್ರ, ರಂಗಭೂಮಿ ನಟರಾಗಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇಯಾದ ನಿಸ್ವಾರ್ಥ ಸೇವೆ ಮಾಡಿಕೊಂಡು ಬಂದಿದ್ದಾರೆ. ಇವರ ಈ ಸೇವೆಯನ್ನು ಗುರುತಿಸಿ ಶ್ರೀಮತಿ ತುಳಸಿಬಾಯಿ ಥಾವರ್ಯನಾಯ್ಕ ಎಜುಕೇಷನ್ ಟ್ರಸ್ಟ್ (ರಿ) ಕಾಯಕ ಕಣ್ಮಣಿ ವೀರ 2024 ರ ರಾಜ್ಯ ಪ್ರಶಸ್ತಿಗೆ ಆಯ್ಕೆಮಾಡಿದ್ದಾರೆ. ಈ ಪ್ರಶಸ್ತಿಯನ್ನು ಗಂಗಾವತಿ ಕೊಪ್ಪಳ ಜಿಲ್ಲೆ ಯಲ್ಲಿ ದಿನಾಂಕ : 23.02.2025 ರಂದು ಟ್ರಸ್ಟಿನ 12ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು.