ಕಾರುಣ್ಯ ನೆಲೆ ವೃದ್ಧಾಶ್ರಮದಲ್ಲಿ ಬಸನಗೌಡ ಬಾದರ್ಲಿ ಅವರ 42ನೇ ವರ್ಷದ ಜನ್ಮದಿನ ಸಮಾರಂಭವು  ಅರ್ಥಪೂರ್ಣವಾಗಿ ನೆರವೇರಿತು.

Spread the love

ಕಾರುಣ್ಯ ನೆಲೆ ವೃದ್ಧಾಶ್ರಮದಲ್ಲಿ ಬಸನಗೌಡ ಬಾದರ್ಲಿ ಅವರ 42ನೇ ವರ್ಷದ ಜನ್ಮದಿನ ಸಮಾರಂಭವು  ಅರ್ಥಪೂರ್ಣವಾಗಿ ನೆರವೇರಿತು.

ಸಿಂಧನೂರು — ಬಸನಗೌಡ ಬಾದರ್ಲಿ ಅಭಿಮಾನಿ ಬಳಗ. ಬ್ಲಾಕ್ ಕಾಂಗ್ರೆಸ್ ಸಿಂಧನೂರು. ಯುವ ಕಾಂಗ್ರೆಸ್ ಸಮಿತಿ ಸಿಂಧನೂರು ಹಾಗೂ ವಿ- ಒನ್ ರೆಸ್ಟೋರೆಂಟ್ ಗಂಗಾವತಿ ರಸ್ತೆ ಸಿಂಧನೂರು ಇವರುಗಳ ಸಹಯೋಗದಲ್ಲಿ ಖಾಜಾ ಸಾಬ್ ರೌಡಕುಂದಾ. ಭಾಷಾ ಸಾಬ್ ಬಳಗಾನೂರು. ವೆಂಕಟರೆಡ್ಡಿ ಇವರುಗಳ ನೇತೃತ್ವದಲ್ಲಿ ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಕರ್ನಾಟಕ ಸರ್ಕಾರದ ವಿಧಾನ ಪರಿಷತ್ ಶಾಸಕರಾದ ಬಸನಗೌಡ ಬಾದರ್ಲಿ ಅವರ 42ನೇ ವರ್ಷದ ಜನ್ಮದಿನ ಸಮಾರಂಭ ಕಾರ್ಯಕ್ರಮವು ಆಶ್ರಮದಲ್ಲಿ ಅನ್ನಸಂತರ್ಪಣೆ ಹಾಗೂ ಬ್ರೆಡ್ ಬಿಸ್ಕಿಟ್ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಸಿಂಧನೂರು ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಯೂಸುಫ್ ಎತ್ಮಾರಿ. ಸಿಂಧನೂರು ತಾಲೂಕ ಗ್ರಾಮೀಣ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಹನುಮಂತ ಕರ್ನಿ. ಸಿಂಧನೂರು ನಗರ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶಹಬಾಜ್. ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ಯಾಮೀದ್ ಗುಂಜಳ್ಳಿ ಇವರುಗಳನ್ನು ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಿ ಶುಭ ಹಾರೈಸಲಾಯಿತು. ಈ ಕಾರ್ಯಕ್ರಮದಲ್ಲಿ ಸಿಂಧನೂರು ತಾಲೂಕ ಗ್ರಾಮೀಣ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಹನುಮಂತ ಕರ್ನಿ ಮಾತನಾಡಿ ಸಿಂಧನೂರಿನ ಸರ್ವಾಂಗಿಣ ಅಭಿವೃದ್ಧಿಯೇ ನಮ್ಮ ಬಸನಗೌಡ ಬಾದಲಿ ಅವರ ಕನಸು ಅವರ ಸರಳ ಸಜ್ಜನಿಕೆಯ ರಾಜಕಾರಣ ನಮ್ಮೆಲ್ಲರಿಗೆ ಸ್ಪೂರ್ತಿಯಾಗಿದೆ. ಅವರು ನಮ್ಮೆಲ್ಲರ ಮಾರ್ಗದರ್ಶಕರಾಗಿ ಸಿಂಧನೂರಿನ ಪ್ರತಿಯೊಂದು ಮನೆ ಮನದಲ್ಲಿ ಉಳಿದುಕೊಂಡಿದ್ದಾರೆ. ಸಿಂಧನೂರಿನ ಸರ್ವ ಸಮಾಜದ ಮನೆಮನೆಯ ಮಗ ನಮ್ಮ ಬಸನಗೌಡ ಬಾದರ್ಲಿ ಸತ್ಯ ಪ್ರಾಮಾಣಿಕ ರಾಜಕಾರಣದ ಬಸನಗೌಡ ಬಾದರ್ಲಿ ಅವರಿಗೆ ಕಾರುಣ್ಯ ಆಶ್ರಮದ ಎಲ್ಲಾ ಹಿರಿಯರ ಮತ್ತು ತಾಲೂಕಿನ ಎಲ್ಲಾ ರೈತ ಬಾಂಧವರ ಶುಭಾಶೀರ್ವಾದ ಇರಲಿ ಎಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ. ಕಾರುಣ್ಯ ಆಶ್ರಮಕ್ಕೆ ಸ್ವಂತ ಜಾಗ ಕೊಡಿಸುವಲ್ಲಿ ನೂತನವಾಗಿ ಆಯ್ಕೆಯಾಗಿರುವ ನಾವೆಲ್ಲರೂ ಕೂಡ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಮಾತನಾಡಿದರು. ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಸಿಂಧನೂರು ತಾಲೂಕ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶಿವಕುಮಾರ ಜವಳಿ ಮಾತನಾಡಿ ಇಂದು ನಮ್ಮ ನಾಯಕರಾದ ಬಸನಗೌಡ ಬಾದರ್ಲಿ ಅವರ ಜನ್ಮದಿನ ಸಮಾರಂಭ ಕಾರ್ಯಕ್ರಮವನ್ನು ಕಾರುಣ್ಯ ಆಶ್ರಮದಲ್ಲಿ ಆಚರಿಸುತ್ತಿರುವುದು ವಿಶೇಷವಾಗಿದೆ. ನೊಂದವರ ಬಾಳಿಗೆ ಬೆಳಕಾಗಿ ಬಡಜನರ ಕಷ್ಟ ಸುಖಗಳಲ್ಲಿ ನಿರಂತರ ಭಾಗಿಯಾಗಿ ಇಡೀ ನಮ್ಮ ನಾಡಿನ ರಾಜಕಾರಣದಲ್ಲಿ ತಮ್ಮದೇ ಆದಂತಹ ಸಂಚಲನ ಮೂಡಿಸಿರುವ ಬಸನಗೌಡ ಬಾದರ್ಲಿ ಅವರಿಗೆ ತಮ್ಮೆಲ್ಲರ ಹಾಗೂ ನಾಡಿನ ಹರ ಗುರು ಚರ ಮೂರ್ತಿಗಳ ಆಶೀರ್ವಾದವಿರಲಿ. ನಿತ್ಯ ದಾಸೋಹಿ ಮೂರ್ತಿಯಾಗಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ನಮ್ಮ ಬಸನಗೌಡ ಬಾದರ್ಲಿ ನಮ್ಮೆಲ್ಲರ ಹೆಮ್ಮೆ ಮುಂದಿನ ದಿನಮಾನಗಳಲ್ಲಿ ಸರ್ಕಾರದ ಸೌಲಭ್ಯಗಳನ್ನು ಕಾರುಣ್ಯ ಆಶ್ರಮಕ್ಕೆ ಒದಗಿಸುವ ನಿಟ್ಟಿನಲ್ಲಿ ನಮ್ಮ ನಾಯಕರು ಪ್ರಾಮಾಣಿಕವಾದ ಕರ್ತವ್ಯ ನಿರ್ವಹಿಸುತ್ತಾರೆ ಎಂದು  ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಯೂಸುಫ್ ಎತ್ಮಾರಿ ಅಧ್ಯಕ್ಷರು ಯುವ ಕಾಂಗ್ರೆಸ್ ಸಮಿತಿ ಸಿಂಧನೂರು. ಹನುಮಂತ ಕರ್ನಿ ಅಧ್ಯಕ್ಷರು ಗ್ರಾಮೀಣ ಯುವ ಕಾಂಗ್ರೆಸ್ ಸಮಿತಿ. ಶಾಬಾಜ್ ಅಧ್ಯಕ್ಷರು ಸಿಂಧನೂರು ನಗರ ಯುವ ಕಾಂಗ್ರೆಸ್ ಸಮಿತಿ. ಶ್ಯಾಮಿದ್ ಗುಂಜಳ್ಳಿ ಅಧ್ಯಕ್ಷರು ಯುವ ಕಾಂಗ್ರೆಸ್ ಸಮಿತಿ ಮಸ್ಕಿ ವಿಧಾನಸಭಾ ಕ್ಷೇತ್ರ. ಖಾಜಾ ಸಾಬ್ ರೌಡಕುಂದ. ವೆಂಕಟರೆಡ್ಡಿ. ಭಾಷಾ ಸಾಬ್ ಬಳಗಾನೂರು. ವೆಂಕಟೇಶ ನಾಯಕ ರಾಗಲಪರ್ವಿ. ವೆಂಕನಗೌಡ ಗಿಣಿವಾರ. ಹಂಪಮ್ಮ ವಲಕಮದಿನ್ನಿ ಅಧ್ಯಕ್ಷರು ಸಿಂಧನೂರು ತಾಲೂಕ ಗ್ರಾಮೀಣ ಮಹಿಳಾ ಘಟಕ. ಅಮರೇಶ ಗಿರಿಜಾಲಿ. ಅನ್ನಪೂರ್ಣಮ್ಮ ಹಿರೇಮಠ. ವೀರೇಶ ಉಪ್ಪಲದೊಡ್ಡಿ.. ರಮೇಶ ಬಪ್ಪೂರು. ಫಕೀರಯ್ಯ ರಾಮತ್ನಾಳ. ಪ್ರಶಾಂತ ರೆಡ್ಡಿ. ತಿಮ್ಮಣ್ಣ ನಾಯಕ. ಆಲಂಬಾಷಾ ಬೂದಿವಾಳ. ಮತ್ತು ಆಶ್ರಮದ ಸಿಬ್ಬಂದಿಗಳಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ. ಅಶೋಕ ನಲ್ಲ. ಸಿದ್ದಯ್ಯ ಸ್ವಾಮಿ. ಮರಿಯಪ್ಪ ಶರಣಮ್ಮ  ಹಾಗೂ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು

Leave a Reply

Your email address will not be published. Required fields are marked *