ಸಾಧಿಸುವ ಛಲ ಮತ್ತು ಅದಕ್ಕೆ ಸರಿಯಾದ ಪರಿಶ್ರಮ ಇದ್ದರೆ ಅಂಗವಿಕಲರೂ ಮಹಾನ್ ಸಾಧಕರಾಗಬಹುದು. ಅಂಗವೈಕಲ್ಯ ದೇಹಕ್ಕೇ ಹೊರತು ಮನಸ್ಸಿಗಲ್ಲ ಎಂದು ರಮಣ ಮಹರ್ಷಿ.
ಕೆ.ಆರ್.ಪೇಟೆ:ಸಾಧಿಸುವ ಛಲ ಮತ್ತು ಅದಕ್ಕೆ ಸರಿಯಾದ ಪರಿಶ್ರಮ ಇದ್ದರೆ ಅಂಗವಿಕಲರೂ ಮಹಾನ್ ಸಾಧಕರಾಗಬಹುದು. ಅಂಗವೈಕಲ್ಯ ದೇಹಕ್ಕೇ ಹೊರತು ಮನಸ್ಸಿಗಲ್ಲ ಎಂದು ರಮಣ ಮಹರ್ಷಿ ತಾಲೂಕು ಸಂಯೋಜಕ ಎಚ್.ಎನ್.ಪ್ರತಾಪ್ ತಿಳಿಸಿದರು.
ತಾಲ್ಲೂಕಿನ ಕಿಕ್ಕೇರಿ ಗ್ರಾಮದ ಕುರುಹಿನಶೆಟ್ಟಿ ಸಮುದಾಯ ಭವನದಲ್ಲಿ ಶ್ರೀ ರಮಣ ಮಹರ್ಷಿ ಅಕಾಡೆಮಿ ಫಾರ್ ದಿ ಬೈಂಡ್ ಹಾಗೂ ತಾಲೂಕು ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಅಂಗವಿಕಲ ಮಕ್ಕಳ ಕ್ರೀಡಾಕೂಟ ಮತ್ತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.ಅಂಗವಿಕಲರಿಗೆ ಬೇಕಿರುವುದು ಅನುಕಂಪವಲ್ಲ ಹೀಗಾಗಿ ಅವರನ್ನು ಪ್ರೋತ್ಸಾಹಿಸಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕಿದೆ ಅಂಗವಿಕಲರಿಗೆ ಸವಲತ್ತು ಪ್ರಾಮಾಣಿಕವಾಗಿ ಸಿಗಬೇಕು. ಸಾಧಕ ವ್ಯಕ್ತಿಗಳ ಪರಿಚಯವನ್ನು ಅಂಗವಿಕಲರಿಗೆ ಶಾಲೆಗಳಲ್ಲಿ ತಿಳಿಸಿ ಹುರಿದುಂಬಿಸಿದರೆ, ಮುಂದಿನ ದಿನದಲ್ಲಿ ದೈತ್ಯ ಪ್ರತಿಭೆಗಳಾಗಿ ದೇಶದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಬೆಳಗಲಿದ್ದಾರೆ ಎಂದರು. ವಿಕಲಚೇತನರ ಸಂಘದ ತಾಲೂಕು ಅಧ್ಯಕ್ಷ ಲಿಂಗರಾಜೇಗೌಡ ಮಾತನಾಡಿ, ಉದ್ಯೋಗ, ಶಿಕ್ಷಣದಲ್ಲಿ ಹೆಚ್ಚಿನ ಸವಲತ್ತು ನೀಡುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಲು ಅರಿವು ಮೂಡಿಸುವ ಕೆಲಸ ಆಗಬೇಕಿದೆ. ವಿದ್ಯಾರ್ಥಿಗಳಲ್ಲಿ ಸಾಧನೆ, ಸಹಾಯ ಮಾಡುವಂತಹ ಕೆಲಸದ ಕುರಿತು ಜಾಗೃತಿ ಮೂಡಿಸಲು ಎಲ್ಲರೂ ಮುಂದಾಗಬೇಕೆಂದು ಮನವಿ ಮಾಡಿ,ಅಂಗವಿಕಲ ಮಕ್ಕಳಿಗೆ ವಿವಿಧ ಕ್ರೀಡಾಕೂಟ ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು ಕಾರ್ಯಕ್ರಮದಲ್ಲಿ ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ಸೂರ್ಯನಾರಾಯಣ,ರಮಣ ಮಹರ್ಷಿ ಸ್ವಯಂ ಸೇವಕರಾದ ಭವ್ಯಾ, ಜಲೇಂದ್ರ ವಸಂತ, ನಾಗರತ್ನಾ, ಲಕ್ಷ್ಮೀದೇವಿ, ಎಂ.ಡಿ.ಯೋಗೇಂದ್ರ, ರಾಜಶೇಖರ, ಶಿಕ್ಷಕ ಮಂಜುನಾಥ್, ಸುರೇಶ್, ಭಾರತಿ, ಎಚ್.ಎನ್.ಮಂಜೇಗೌಡ, ಜೇಟುಸಿಂಗ್, ವಾಸು, ಶ್ರೀಕಾಂತ್ ಮತ್ತಿತರರಿದ್ದರು. ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ.