ಕಾರುಣ್ಯ ನೆಲೆ ವೃದ್ಧಾಶ್ರಮದ ಸೇವೆ ಅಮೋಘ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ.
ಸಿಂಧನೂರು — ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮಕ್ಕೆ ಭೇಟಿ ನೀಡಿ ಆಶ್ರಮದ ಎಲ್ಲಾ ಕೋಣೆಗಳನ್ನು ವೀಕ್ಷಿಸಿ ಎಲ್ಲಾ ವೃದ್ಧರ ಹಾಗೂ ವಯಸ್ಕರ ಬುದ್ಧಿಮಾಂದ್ಯರ ಯೋಗಕ್ಷೇಮವನ್ನು ವಿಚಾರಿಸಿ ಆಶ್ರಮದ ನಿರ್ವಹಣೆಯ ಮಾಹಿತಿಯನ್ನು ತೆಗೆದುಕೊಂಡು ಆಶ್ರಮದ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಆಶ್ರಮದ ವತಿಯಿಂದ ಸಚಿವರಾದ ಸತೀಶ ಜಾರಕಿಹೊಳಿ ಅವರನ್ನು ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು. ಮತ್ತು ಆಶ್ರಮಕ್ಕೆ ಸ್ವಂತ ನಿವೇಶನ ನೀಡುವ ಕುರಿತು ಆಶ್ರಮದ ಕಾನೂನು ಸಲಹೆಗಾರರಾದ ಜೆ.ರಾಯಪ್ಪ ವಕೀಲರ ನೇತೃತ್ವದಲ್ಲಿ ಮನವಿ ಪತ್ರವನ್ನು ನೀಡಲಾಯಿತು. ನಂತರ ಸಚಿವರಾದ ಸತೀಶ ಜಾರಕಿಹೊಳಿ ಮಾತನಾಡಿ ನಮ್ಮ ನಾಡಿನ ಕರುಣಾಮಯಿ ಸಂಸ್ಕೃತಿಯನ್ನು ಕಾಪಾಡುವ ನಿಟ್ಟಿನಲ್ಲಿ ಕಾರುಣ್ಯ ಆಶ್ರಮದ ಕರ್ತವ್ಯ ಅಪಾರವಾಗಿದೆ. ನೆಲೆ ಇಲ್ಲದ ಜೀವಿಗಳಿಗೆ ಬದುಕು ಕಟ್ಟಿ ಕೊಟ್ಟಿರುವ ಕಾರುಣ್ಯಾಶ್ರಮದ ಸೇವೆ ಅಮೋಘ. ಇಂತಹ ಸೇವೆಯನ್ನು ಈಗಾಗಲೇ ಗುರುತಿಸಿ ಎರಡು ವರ್ಷಗಳ ಹಿಂದೆ ಸರ್ಕಾರದಿಂದ ನೀಡಿರುವ ಪ್ರಶಸ್ತಿಗೆ ಶೋಭೆ ತಂದಂತಾಗಿದೆ. ಕಾರುಣ್ಯ ಆಶ್ರಮಕ್ಕೆ ಸ್ವಂತ ಜಾಗ ಕಲ್ಪಿಸಿ ಕೊಡುವಲ್ಲಿ ಪ್ರಾಮಾಣಿಕವಾದ ಪ್ರಯತ್ನ ಮಾಡುತ್ತೇನೆ. ಮುಂದಿನ ದಿನಮಾನಗಳಲ್ಲಿ ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಆಶ್ರಮಕ್ಕೆ ಬೇಕಾಗಿರುವ ಸ್ವಂತ ಜಾಗ ಹಾಗೂ ಅನುದಾನದ ಬಗ್ಗೆ ಪ್ರಸ್ತಾಪಿಸುತ್ತೇನೆ. ಸಮಾಜದಲ್ಲಿ ಬಹುದೊಡ್ಡ ಜವಾಬ್ದಾರಿಯನ್ನು ನಿಭಾಯಿಸುತ್ತಿರುವ ಕಾರುಣ್ಯಾಶ್ರಮದ ಕಾರ್ಯ ಅದ್ಭುತವಾಗಿದೆ. ಇಂತಹ ಪ್ರಾಮಾಣಿಕ ಸೇವೆಗೆ ಸಹಾಯ ಸಹಕಾರ ಮಾಡಿರುವ ಎಲ್ಲಾ ದಾನಿಗಳಿಗೆ ಮತ್ತು ಮುಂದೆ ಮಾಡುವಂತಹ ಎಲ್ಲಾ ದಾನಿಗಳಿಗೆ ನಮ್ಮ ಹಾಗೂ ನಮ್ಮ ಫೌಂಡೇಶನ್ ವತಿಯಿಂದ ಅಭಿನಂದನೆಗಳು. ಈ ಆಶ್ರಮದಲ್ಲಿರುವ ಪ್ರತಿಯೊಬ್ಬರು ಕೂಡ ದೇವರ ಮಕ್ಕಳು ಈ ಮಕ್ಕಳಿಗೆ ಸೇವೆ ಮಾಡಲು ನಮಗೆ ಅವಕಾಶ ದೊರಕಿರುವುದು ನಮ್ಮ ಪೂರ್ವಜನ್ಮದ ಪುಣ್ಯ. ಮುಂದಿನ ದಿನಮಾನಗಳಲ್ಲಿ ನಮ್ಮ ಕಡೆಯಿಂದ ಆಶ್ರಮಕ್ಕೆ ನಿರಂತರ ಸಹಾಯ ಸಹಕಾರ ದೊರೆಯುತ್ತದೆ ಎಂದು ಭಾವನಾತ್ಮಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಶ್ರೀಮಠ ಸೇವಾ ಟ್ರಸ್ಟ್ ನ ಸಂಸ್ಥಾಪಕರಾದ ಅಮರಯ್ಯ ಸ್ವಾಮಿ ಹಿರೇಮಠ ಹರೇಟನೂರು. ಉಪಾಧ್ಯಕ್ಷರಾದ ಕರಿಬಸಯ್ಯ ಸ್ವಾಮಿ ಹರೇಟನೂರು. ಕಾರ್ಯದರ್ಶಿಗಳಾದ ಕೆ. ಚಿದಾನಂದಪ್ಪ ಗೌಡ. ಸದಸ್ಯರುಗಳಾದ ಮಲ್ಲಿಕಾರ್ಜುನ ಸ್ವಾಮಿ ಕರಡಕಲ್. ಮಂಜುನಾಥಗೌಡ ಮಾಲಿ ಪಾಟೀಲ್. ಸುಜಾತ ಹಿರೇಮಠ. ಹಾಗೂ ಕಾನೂನು ಸಲಹೆಗಾರರಾದ ಜೆ.ರಾಯಪ್ಪ ವಕೀಲರು ಮತ್ತು ಡಾ.ನಾಗವೇಣಿ.ಎಸ್.ಪಾಟೀಲ್ ಜಿಲ್ಲಾಧ್ಯಕ್ಷರು ಮಹಿಳಾ ಕಾಂಗ್ರೆಸ್ ರಾಯಚೂರು. ರವಿ ಪಾಟೀಲ್ ರಾಯಚೂರು. ಆದೇಶ ನಾಯಕ ಕಾಂಗ್ರೆಸ್ ಮುಖಂಡರು ಮಸ್ಕಿ ವಿಧಾನಸಭಾ ಕ್ಷೇತ್ರ.ಹನುಮೇಶ ನಾಯಕ ಅಧ್ಯಕ್ಷರು ಶ್ರೀ ದ್ಯಾವಮ್ಮ ದೇವಿ ದೇವಸ್ಥಾನ ಸಮಿತಿ ಹರೇಟನೂರು. ಹಾಗೂ ಕರಿಯಪ್ಪ ವಕೀಲರು ಮುಖಂಡರು ಹರೇಟನೂರು.ಕೆ.ಚಂದ್ರೇಗೌಡ ಮುಖಂಡರು ಗೊಣ್ಣಿಗನೂರು. ಕೆ ವಾಮದೇವ ಮುಖಂಡರು ಹರೇಟನೂರು. ಪ್ರದೀಪ್ ಪೂಜಾರಿ ಸಂಸ್ಥಾಪಕರು ಸೇವಾ ಸಿರಿ ಚಾರಿಟೇಬಲ್ ಟ್ರಸ್ಟ್ ಸಿಂಧನೂರು. ಮಂಜುನಾಥ ಗಾಂಧಿನಗರ ಗುತ್ತೇದಾರರು.ಧನ್ ಪತ್ ಸಿಂಗ್ ಕೆಂಚನಗುಡ್ಡ.ನಾಗರಾಜ ಸಾಗರ್ ಕ್ಯಾಂಪ್. ಕುಮಾರ ಶೆಟ್ಟಿಸಾಗರ್ ಕ್ಯಾಂಪ್. ರಸೂಲ್ ಸಾಬ್ ಸಿಂಧನೂರು. ಶರಣಬಸವ ಹೊಸಳ್ಳಿ (ಇ. ಜೆ ) ವೀರಭದ್ರಗೌಡ ಗಿಣಿವಾರ ಮಕ್ಬಲ್ ಸಾಬ್ ಗೋಮರ್ಸಿ.ಹಾಗೂ ಆಶ್ರಮದ ಆಡಳಿತಾಧಿಕಾರಿಗಳಾದ ಅವಿನಾಶ ದೇಶಪಾಂಡೆ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ ಸಿಬ್ಬಂದಿಗಳಾದ ಸಿದ್ದಯ್ಯ ಸ್ವಾಮಿ. ಶರಣಮ್ಮ. ಮರಿಯಪ್ಪ ಬಸವ ಸ್ವಾಮಿ ಹಿರೇಮಠ.ಹಾಗೂ ಅನೇಕ ಸತೀಶ್ ಜಾರಕಿಹೊಳಿ ಅಭಿಮಾನಿಗಳು ಉಪಸ್ಥಿತರಿದ್ದರು.