ಚಿಕ್ಕೋಡಿ : ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ..

Spread the love

ಚಿಕ್ಕೋಡಿ : ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ..

ಕರವೇ ಸದಸ್ಯತ್ವ ಅಭಿಯಾನಕ್ಕೆ ಚಿಕ್ಕೋಡಿ ಪಟ್ಟಣದ ಸಂಪಾದನಾ ಚರಮೂರ್ತಿ ಮಠದ ಶ್ರೀ ಗಳು ಚಾಲನೆ ನೀಡಿದರು, ಚಿಕ್ಕೋಡಿ ತಾಲೂಕಿನ ಕರವೇ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಶ್ರೀ ಮಠದಲ್ಲಿ ತಾಲೂಕಾ ಅಧ್ಯಕ್ಷರಾದ ಸಂಜು ಬಡಿಗೇರ ಮತ್ತು ಉಪಾಧ್ಯಕ್ಷರಾದ ಸಂತೋಷ ಪೂಜಾರಿ ಇವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಕೈ ಜೋಡಿಸಿದರು, ಶ್ರಿಗಳ ಅಮೃತ ಹಸ್ತದಿಂದ ಮೊದಲನೆಯ ಸದಸ್ಯತ್ವವನ್ನು ಪಡೆಯುವ ಮೂಲಕ ಚಾಲನೆ ನೀಡಿದರು.

ನಂತರ ಶ್ರೀ ಗಳು ಮಾತನಾಡಿ ಚಿಕ್ಕೋಡಿ ಗಡಿ ಭಾಗದಲ್ಲಿ ಕನ್ನಡ ಇನ್ನೂ ಬೆಳೆಯಬೇಕು, ಕನ್ನಡಿಗರಲ್ಲಿ ಒಕ್ಕಟ್ಟು ಪ್ರದರ್ಶನೆಯಾಗಬೇಕು, ಈ ಭಾಗದ ಎಲ್ಲರೂ ಕರವೇ ಸದಸ್ಯತ್ವ ಪಡೆದು ಕನ್ನಡ ಉಳಿಸುವ ಕಾರ್ಯವಾಗಬೇಕು ಎಂದು ಹೇಳಿದರು..

ಕರವೇ ತಾಲೂಕಾ ಅಧ್ಯಕ್ಷ ಸಂಜು ಬಡಿಗೇರ ಮಾತನಾಡಿ ಮಾರ್ಚ ಒಂದರಿಂದ ಮಾರ್ಚ ಕೊನೆಯ ದಿನಾಂಕದ ವರೆಗೆ ಉಚಿತ ಕರವೇ ಸದಸ್ಯತ್ವ ಅಭಿಯಾನ ಚಾಲನೆಯಲ್ಲಿ ಇರುತ್ತದೆ, ದಯಮಾಡಿ ಕನ್ನಡ ಮನಸ್ಸಿನ ತಾವುಗಳು ಕರೆ ಮಾಡಿ ಸದಸ್ಯತ್ವವನ್ನು ಪಡೆದು ನಾಡು,ನುಡಿ,ನೆಲ,ಜಲ ರಕ್ಷಣೆಗೆ ಕೈ ಜೋಡಿಸಬೇಕೆಂದು ವಿನಂತಿಸಿದರು.

ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ ನಾವು ಕಳೆದ ೨೫ ವರ್ಷಗಳಿಂದ ಸಂಜು ಬಡಿಗೇರ ಇವರ ನಾಯಕತ್ವದಲ್ಲಿ ಕರವೇ ಸಂಘಟನೆಯಲ್ಲಿ ಒಬ್ಬ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ, ಇತ್ತೀಚೆಗೆ ಕನ್ನಡ ಕನ್ನಡಿಗರಿಗೆ ತುಂಬಾ ಅನ್ಯಾಯವಾಗುತ್ತಲಿದೆ, ಯಾವಾಗಲೂ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತ ಬಂದಿದ್ದೇವೆ, ಮುಂದೆಯೂ ಸಹ ಹೋರಾಟ ನಿಲ್ಲದು, ತಾವೆಲ್ಲರೂ ಸದಸ್ಯತ್ವ ಪಡೆಯುವ ಮೂಲಕ ನಮಗೆ ಕೈಜೋಡಿಸಿ, ನ್ಯಾಯಕ್ಕಾಗಿ ಸದಾ ಕಾಲ ತಮ್ಮೊಂದಿಗೆ ನಮ್ಮ ಕರವೇ ಕಾರ್ಯ ಮಾಡಲಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಪ್ರತಾಪ ಪಾಟೀಲ, ಅಮೂಲ ನಾವಿ, ಅನೀಲ ನಾವಿ, ಸಚಿನ ದೊಡ್ಡಮನಿ, ಶಿವು ಮದಾಳೆ, ಖಾನಪ್ಪಾ ಬಾಡಕರ, ಸತ್ಯಪ್ಪಾ ಕಾಂಬಳೆ, ಸುನೀಲ ಇಂಗಳಿ, ಚನ್ನಪ್ಪಾ ಕುಂಬಾರ, ಸೌರಭ ಹಿರೇಮಠ, ರಾಖೇಶ ಮಗದುಮ್ಮ, ರುದ್ರಯ್ಯಾ ಹಿರೇಮಠ, ದುಂಡಪ್ಪಾ ಬಡಿಗೇರ, ರಫೀಕ ಪಠಾಣ, ರಮೇಶ ಡಂಗೇರ ಹಾಗೂ ನೂರಾರು ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *