ನೀರಿಗಾಗಿ ಬೀದಿಗಿಳಿದ ಅನ್ನದಾತರು,

Spread the love

ನೀರಿಗಾಗಿ ಬೀದಿಗಿಳಿದ ಅನ್ನದಾತರು,

ತಮ್ಮ ತಲೆ ಮೇಲೆ ಕಲ್ಲು ಹೊತ್ತಿ ವಿನುತನವಾಗಿ ಪ್ರತಿಭಟಿಸಿ ಆಕ್ರೋಶ ಹೊರಹಾಕಿದ ರೈತರು

ಕೆ.ಆರ್.ಪೇಟೆ: ಜಮೀನಿನಲ್ಲಿ ಬೆಳೆದು ನಿಂತಿರುವ ಬೆಳೆಯನ್ನು ಉಳಿಸಿಕೊಳ್ಳಲು ಹೇಮಾವತಿಯ ಬಲ ಮತ್ತು ಎಡದಂಡೆ ನಾಲೆಗಳಲ್ಲಿ  ನೀರು ಹರಿಸಬೇಕೆಂದು ಒತ್ತಾಯಿಸಿ ಸರ್ಕಾರ,ನೀರಾವರಿ ಸಚಿವ ಸ್ಥಳೀಯ ಶಾಸಕರ ವಿರುದ್ಧ ಘೋಷಣೆ ಕೂಗಿ ತಮ್ಮ ತಲೆಯ ಮೇಲೆ ಕಲ್ಲು ಹೊತ್ತಿಕೊಂಡು ಕೆ.ಆರ್. ಪೇಟೆ ತಾಲೂಕು ಮಿನಿ ವಿಧಾನಸೌಧದ ಮುಂದೆ  ವಿನೂತನವಾಗಿ ತಾಲೂಕು ರೈತ ಸಂಘದ ನೇತೃತ್ವದಲ್ಲಿ ನೂರಾರು ರೈತರು ತಮ್ಮ ಆಕ್ರೋಶ ಹೊರಹಾಕಿ ಪ್ರತಿಭಟನೆ ನಡೆಸಿದರು.

ಹಿರಿಯ ಹೋರಾಟಗಾರ ಮುದುಗೆರೆ ರಾಜೇಗೌಡ ಮಾತನಾಡಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಂತಹ ಬೇಸಿಗೆ ಸಂದರ್ಭದಲ್ಲಿ ಅಣೆಕಟ್ಟುಗಳು ತುಂಬಿ ತುಳುಕುತ್ತೇವೆ ಆದರೆ ರೈತರ ಬೆಳೆಗೆ ನೀರರಿಸದೆ ನೀರಾವರಿ ಅಧಿಕಾರಿಗಳು ಸರ್ಕಾರ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಅದಕ್ಕೆ ರೈತ ಸಂಘ ಅವಕಾಶ ನೀಡುವುದಿಲ್ಲ ನಾಲೆಗಳಿಗೆ ತುರ್ತಾಗಿ ನೀರು ಬಿಡುಗಡೆ ಮಾಡಿದರೆ ಬೆಳೆಗಳ ರಕ್ಷಣೆ ಸಾಧ್ಯವಾಗಲಿದೆ. ಸರ್ಕಾರ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ವಾಸ್ತವ ಮನವರಿಕೆ ಮಾಡಿಕೊಂಡು ರೈತರ ಹಿತ ಕಾಯಲು ಮುಂದಾಗಬೇಕು. ಜಲಾಶಯದಿಂದ ನಾಲೆಗಳಿಗೆ ನೀರು ಬಿಡುವ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ತೋರಿದರೆ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಚ್ಚರಿಕೆ ನೀಡಿದರು ಆದ್ದರಿಂದ ಸರ್ಕಾರ ಅಧಿಕಾರಿಗಳು ಎಚ್ಚೆತ್ತು ತಕ್ಷಣ ನಾಲೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದ ಅವರು ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವಡುತ್ತಿದೆ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ  ಎಂದು ದೂರಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ ನಮ್ಮ ಕಾರ್ಯಕರ್ತರು ಹಾಗೂ ರೈತರು ಹಲವು ಬಾರಿ ಹೇಮಾವತಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಬೇಸತ್ತು ತಾಲೂಕು ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸುತ್ತಿದ್ದೇವೆ.ಸಾವಿರಾರು ಎಕರೆ ಪ್ರದೇಶದಲ್ಲಿ ಲಕ್ಷಾಂತರ ರೂ ಮೌಲ್ಯದ ಬೆಳೆ ನೀರಿಲ್ಲದೆ ಒಣಗುತ್ತಿವೆ. ಮುಂಗಾರು ಮಳೆ ಕೊರತೆಯಿಂದ ಕಬ್ಬು, ಭತ್ತ, ರಾಗಿ, ತರಕಾರಿ ಸೇರಿದಂತೆ ಇತರೆ ಬೆಳೆಗಳಿಗೆ ನೀರಿಲ್ಲದಂತಾಗಿದೆ. ಸಧ್ಯಕ್ಕೆ ಬೆಳೆಗಳ ರಕ್ಷಣೆಗೆ ತುರ್ತು ನೀರಿನ ಅವಶ್ಯಕತೆ ಇದೆ. ಒಂದು ವೇಳೆ ನೀರು ಹರಿಸದಿದ್ದರೆ ಬೆಳೆ ಸಂಪೂರ್ಣ ನಾಶವಾಗಿ ರೈತರು ಸಂಕಷ್ಟಕ್ಕೆ ಸಿಲುಕಲಿದರೆ ಅದಕ್ಕೆ ನೇರ ಹೊಣೆ ಸರ್ಕಾರ ಸಂಬಂಧಪಟ್ಟ ಅಧಿಕಾರಿಗಳು ಎಂದು ಕಿಡಿ ಕಾರಿದರು.

ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಆರ್ ಮಂದಗೆರೆ ಜಯರಾಮ್, ಹಿರಿಯ ರೈತ ಮುಖಂಡ ಎಲ್.ಬಿ ಜಗದೀಶ್,ಬೂಕನಕೆರೆ ನಾಗರಾಜು,ಕರೋಟಿ ತಮ್ಮಯ್ಯ,ಸಿಂದಘಟ್ಟ ಮುದ್ದುಕುಮಾರ್, ಚೌಡೇನಹಳ್ಳಿ ಕೃಷ್ಣೆಗೌಡ,ನಾರಾಯಣ ಸ್ವಾಮೀ,ಲಕ್ಷ್ಮಿಪುರ ನಾಗರಾಜು,ಲಿಂಗಾಪುರ ರೇವಣ್ಣ,ಹಿರಿಕಳಲೆ ಬಸವರಾಜು,ನೀತಿಮಂಗಲ ಮಹೇಶ್, ಕರೋಟಿ ದಿನೇಶ್,ನಾಗೇಂದ್ರ ಶೆಟ್ಟಿ,ಹೆಗ್ಗಡಹಳ್ಳಿ ಚೇತನ್, ಮರುವನಹಳ್ಳಿ ಮಹೇಶ್,ಕೆ.ಕೆ ಶಂಕರ್,ಹರಳಹಳ್ಳಿ ಅಕ್ಷಯ್ ಗೌಡ,ಸೇರಿದಂತೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *