“ಅಕ್ಕ ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನರಾದ – ದಾವಣಗೆರೆ ಅನುಭವಮಂಟಪದ ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್ ಶಿಕ್ಷಕ ಶಿವಮೂರ್ತಿ.ಹೆಚ್.”
ಬೆಂಗಳೂರು:ಮಾ3. ಬೆಂಗಳೂರಿನ “ಅಕ್ಕನ ಮನೆ ಪ್ರತಿಷ್ಠಾನ” ವತಿಯಿಂದ ನೀಡಲಾಗುವ “ಅಕ್ಕ ರಾಜ್ಯ ಮಟ್ಟದ ಪ್ರಶಸ್ತಿಗೆ” ದಾವಣಗೆರೆ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಅನುಭವಮಂಟಪದ “ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್” ನ ಕನ್ನಡ ಶಿಕ್ಷಕರಾದ “ಶ್ರೀ ಶಿವಮೂರ್ತಿ.ಹೆಚ್.” ಅವರು ಭಾಜನರಾಗಿರುತ್ತಾರೆ.
ಬಹುಮುಖ ಪ್ರತಿಭೆ, ಉದಯೋನ್ಮುಖ ಬರಹಗಾರರು, ಕವಿ ಕಾವ್ಯ ದೀವಿಗೆ ರಾಜ್ಯ ಘಟಕದ ಸಂಘಟಕರು ಆಗಿರುವ ಶ್ರೀ ಶಿವಮೂರ್ತಿ.ಹೆಚ್. ಅವರ “ಶಿಕ್ಷಕ ವೃತ್ತಿಯ ಸೇವಾ ಮನೋಭಾವ, ಸಾಹಿತ್ಯ ಕ್ಷೇತ್ರದಲ್ಲಿನ ಸಾಹಿತ್ಯ ಸಂಘಟನಾ ಸಾಧನೆ ಹಾಗೂ ಸಾಮಾಜಿಕ ಸೇವಾ ಕಾರ್ಯಗಳನ್ನು” ಪರಿಗಣಿಸಿ ಅವರಿಗೆ ಈ ಪ್ರಶಸ್ತಿಯನ್ನು ದಿ/07/03/25ರ ಶುಕ್ರವಾರದಂದು ಬೆಂಗಳೂರಿನ ಜಯಚಾಮರಾಜೇಂದ್ರ ರಸ್ತೆಯಲ್ಲಿರುವ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯುವ “ಸಂಸ್ಕೃತಿ ಸಂಗಮ – 2025ರ” ಸಮಾರಂಭದಲ್ಲಿ ನೀಡಲಾಗುವುದೆಂದು “ಅಕ್ಕನ ಮನೆ ಪ್ರತಿಷ್ಠಾನದ ಅಧ್ಯಕ್ಷರಾದ ಸಿ ಸಿ ಹೇಮಲತ” ಅವರು ಪತ್ತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.