ಆಕೆ,
ಸೆರಗ ಮರೆಯಲಿ
ಅಮೃತ ಉಣಿಸಿದವಳಾಕೆ
ಅಂಬರದ ಚಂದಿರನ ತೋರಿ
ತುತ್ತ ನಿಟ್ಟವಳಾಕೆ (ಅಮ್ಮ )
ಅಕ್ಕರೆಯ ಅಣ್ಣನ
ಬೆನ್ನಿಗೆ ಬಿದ್ದವಳಾಕೆ
ಹುಡುಗಾಟಕೆಯಲ್ಲಿ ಕಾಡಿದರೂ ಕಾಳಜಿ ನೀಡುವಳಾಕೆ (ಸಹೋದರಿ )
ಭಾವಯಾನದಲಿ ಕರುಳ ಬಂದವಿಲ್ಲದೆ
ಎದೆಯ ಬಂಧಕ್ಕೆ ಬೆಸೆದವಳಾಕೆ (ಸ್ನೇಹಿತೆ )
ಬಿಸಿ ಚುಂಬನದೊಂದಿಗೆ
ಅಪ್ಪಿದವಳಾಕೆ
ಸುಖ ಗೀತೆ ಹಾಡಿ
ವಂಶ ಬೆಳೆಸಿದವಳಾಕೆ (ಪತ್ನಿ )
ಪುಟ್ಟ ಬೆರಳಲಿ ನನ್ನ ಕೈಹಿಡಿದವಳಾಕೆ
ಎದೆಯ ಮೇಲೆ ಪುಟ್ಟ ಪಾದದಿಂದ ನಡೆದಾಡುವಳಾಕೆ
ನನ್ನ ಕರುಳ ಕುಡಿ ಆಕೆ (ಮಗಳು )
ಅವಳಿಲ್ಲದೆ ನಾವುಂಟೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?
ನಿನಗೆ ಬೇರೆ ಹೆಸರು ಬೇಕೆ?
ಸುಮಾಶಿವಕುಮಾರ್ (ದಾವಣಗೆರೆ )
ಸಹಶಿಕ್ಷಕರು