ಧೂಮ್ ಧಾಮ್ ಬಂಜಾರ ಹಾಡು ಅದ್ದೂರಿ ಚಿತ್ರೀಕರಣ.
ಶ್ರೀ ಸುನೀಲ್ ಪವ್ಹಾರ್ ಮತ್ತು ಶ್ರೀಮತಿ ಭಾಗ್ಯಶ್ರೀ ಸುನೀಲ್ ಗಾಯನದ ಈ ಹಾಡು ಶಿವಮೊಗ್ಗದ ಮಲವಗೊಪ್ಪ ತಾಂಡಾದಲ್ಲಿ ಸೋಮವಾರ ಚಿತ್ರೀಕರಣ ನಡೆಯಿತು. ಸುನೀಲ್ ಪವ್ಹಾರ್ ಮತ್ತು ಶಶಿಕಲಾ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಿರ್ದೇಶ ಮತ್ತು ನೃತ್ಯ ಸಂಯೋಜನೆಯನ್ನು ರೀಷಿತ್ ಸಾಮ್ರಾಟ್ ಮಾಡಿದ್ದಾರೆ. ರಮೇಶ ಮತ್ತು ಭರತ ಅವರ ಛಾಯಾಗ್ರಹಣವಿದೆ. ಡಾ. ವೆಂಕಟೇಶ ಚವ್ಹಾಣ್, ರಾಮು ಎನ್ ರಾಠೋಡ್ ಮಸ್ಕಿ ಸಹಾಯವಿದೆ. ಈ ಹಾಡು ಆರ್‌ಜಿ ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ.