ತಿಳಿದು ಬಾಳು ಮಂಕುತ್ತಿಮ್ಮ,,,,,,,,,,,,,,,,,,
ಇರುವುದು ಮೂರು ದಿನ, ತಿಳಿದು ಬಾಳು, ಬಡವರ ಮೇಲೆ, ಅಮಾಯಕರ ಮೇಲೆ, ನಿಶಕ್ತಿ ಇರುವಂತವರ ಮೇಲೆ, ಅನ್ಯಾಯ, ಧೌರ್ಜನ್ಯ ನಿನ್ನ ಕಣ್ಣ ಮುಂದೆ ಕಂಡ್ರೆ ಅದರ ವಿರುದ್ದ ಹೋರಾಡು, ಇರುವುದು ಮೂರು ದಿನ, ಅನ್ಯಾಯದ ವಿರುದ್ದ ನಿನ್ನ ಧ್ವನಿ, ದಬ್ಬಾಳಿಕೆ ಮಾಡುವವರ ವಿರುದ್ದ ನಿನ್ನ ಧ್ವನಿ ಸದಾ ಇರಲಿ, ನ್ಯಾಯದ ಫರ ಮಾತನಾಡುವಾಗ ನೂರು ಜನ ಅಲ್ಲಾ ಸಾವಿರ ಜನ ನಿನ್ನ ವಿರುದ್ದ ಬಂದರು, ಅಪಪ್ರಚಾರ ಮಾಡಿದರು ತಲೆಗೆ ಹಾಕಿಕೊಳ್ಳಬೇಡ (ಡೌಂಟ್ ಕೇರ್) ಯಾಕಂದರೆ ನೀನು ನಡೆಯೋ ದಾರಿ ನ್ಯಾಯದ ಪರ ಇರಲಿ, ಅನ್ಯಾಯಕ್ಕೆ ಒಳಗಾದವರ ಫರ ಇರಲಿ, ಬ್ರಷ್ಠಚಾರದ ವಿರುದ್ದವಿರಲಿ, ಇರುವುದು ಮೂರು ದಿನ ನ್ಯಾಯದ ಫರ ಬದುಕು, ಬಡ, ಬಗ್ಗರ ಫರ ಬದುಕು, ಯಾಕೆಂದ್ರೆ ನೀನು ಇರುವುದು ಮೂರು ದಿನ, ಅದಕ್ಕೆ ಹಿರಿಯರು ಹೇಳುವ ಈ ಒಂದು ಮಾತು ಸದಾ ನೆನಪಲ್ಲಿ ಇರಲಿ (ಇಲಿಯಾಗಿ ನೂರು ವರ್ಷ ಬಾಳುವುದುಕ್ಕಿಂತ, ಹುಲಿಯಾಗಿ ಮೂರು ವರ್ಷ ಬಾಳಿ ನೋಡು ಅದರ ಮಜಾನೆ ಬೇರೆ) ಅದರ ಜೊತೆ ಜೊತೆಗೆ ತಿಳಿದು ಬಾಳು ನೀನು ಇರುವುದು ಮೂರು ದಿನ,
ಸದ್ಯದ ದಿನಮಾನದಲ್ಲಿ ದಿನಕ್ಕೊಂದು ಬಣ್ಣ, ಕ್ಷಣಕ್ಕೊಂದು ಬಣ್ಣ ಹಚ್ಚಿಕೊಳ್ಳೊರಿಗೆ ಬೆಲೆ ಜಾಸ್ತಿ ಅಂತ ಅವರ ಸಂಘದ ಸವಾಸ ಮಾಡಬೇಡ, ಯಾವುದನ್ನು ಮುಚ್ಚುಮರಿ ಇಲ್ಲದೆ ಮಾತನಾಡುವ ಹೃದಯವಂತನ ಸಹವಾಸ ಮಾಡು, ಯಾಕೇಂದ್ರೆ ಣೀನು ಇರುವುದು ಈ ಭೂಮಿ ಮೇ;ಲೆ ಮೂರು ದಿನ, ಸತ್ಯದ ಫರ, ನ್ಯಾಯದ ಫರ ಬದುಕು, ಈ ಭೂಮಿ ಮೇಲೆ ಒಂದು ನ್ಯಾಯಿ ಸಹ ಬದುಕುತ್ತೆ ಆದರೆ ಆ ನಾಯಿಗಳಿಗೆ ಇರುವ ನಿಯತ್ತು ಕೆಲವರಲ್ಲಿ ಇಲ್ಲ, ಹಾಗಾಗಿ ಯಾರು ಎನೆ ಏಳಲಿ ನಿನ್ನ ಗುರಿ ಬಿಡದಿರು, ಈ ಭೂಮಿ ಮೇಲೆ ಸಾವಿರಾರು ಜನ ಹಣ ಮಾಡೋಕೆ ತುದಿಗಾಲಲ್ಲಿ ಇದ್ದಾರೆ, ಆದರೆ ಸಾವಿರಕ್ಕೆ ಒಬ್ಬ ಮಾತ್ರ ಹೆಸರು ಮಾಡುವಲ್ಲಿ ಪ್ರಯತ್ನಿಸುತ್ತಾನೆ, ಯಾಕೆಂದ್ರೆ ಹಣ ಮಾಡೋಕೆ ಸಾವಿರ ದಾರಿಗಳು ಇದ್ದಾವೆ, ಆದರೆ ಹೆಸರು ಮಾಡೋಕೆ ನಿನ್ನ ತಾಳ್ಮಿ, ನಿನ್ನ ಧೈರ್ಯ, ಜೊತೆಗೆ ನಿನ್ನ ಆತ್ಮ ವಿಶ್ವಾಸ ಯಾವತ್ತು ಕೈಬಿಡಬೇಡ, ಹಣದಿಂದ ಕೇವಲ ಆಸ್ತಿ ಅಂತಾಸ್ತು ಮಾಡಬಹುದು, ಅಷ್ಟೆ ಆದರೆ ಹೆಸರಿನಿಂದ ನಿನ್ನ ಕುಟುಂಬದ ಹಿರಿಮೆಯನ್ನ ಎತ್ತಿ ಹಿಡಿಯುತ್ತೆ ನೆನಪಿರಲಿ, ಹಣ ಮಾಡಿದರೆ ಸಮಾಜದಲ್ಲಿ ಕೆಲವೊಂದು ಕೆಲಸ ಕಾರ್ಯಾಗಳಾಗಬಹುದು, ಆದರೆ ಹೆಸರು ಮಾಡಿದ್ರೆ ನೀನು ಹೋಗುವುದು ಬೇಡ, ನಿನ್ನ ಹೆಸರು ಹೇಳಿದರೆ ಸಾಕು ಕೆಲಸ ಕಾರ್ಯಾಗಳು ಸಲಿಸಾಗಿ ಸಾಗಬೇಕು, ಬದುಕು ಹಾಗ್ ಬದುಕು, ಹೆಸರು ಮಾಡುವಂತೆ ಬದುಕು, ಬ್ರಷ್ಠ ಅಧಿಕಾರಿಗಳ ಗುಂಡಿಗೆ ನಡುಗಬೇಕು ಹಾಗ್ ಬದುಕು, ಧೌರ್ಜನ್ಯ ಮಾಡುವವರ ಗುಂಡಿಗೆ ಹದರಿ ಹೋಗಬೇಕು ಹಾಗ್ ಬದುಕು, ಆದರೆ ಇನ್ನೊಬ್ಬರ ಬದುಕಿಗೆ ದಾರಿ ದೀಪ ಆಗುವಂತೆ ಬದುಕು, ಕಳ್ಳರಿಗೆ, ಸುಳ್ಳರಿಗೆ, ನಾಟಕ ಮಾಡುವ ಸೂತ್ರದಾರಿಗಳ ಬದುಕು ಮುಖಕ್ಕೆ ಬಣ್ಣ ಹಚ್ಚಿದಂತೆ ಅದು ಇಂದಿಲ್ಲ ನಾಳೆ ಮಾಸಿ ಹೋಗುತ್ತೆ. ಆದರೆ ನಿನ್ನ ಬದುಕು ಸಾವಿರ ವರ್ಷ ಕಳೆದರು ಅಜರಾಮರವಾಗಿ ಉಳಿ ಬೇಕು, ಹಾಗ್ ಬದುಕು, ಜೊತೆಗೆ ನೀನು ಬೆಳೆಯುವಾಗ ನಿನ್ನ ನಂಬಿದವರನ್ನು ಯಾವತ್ತು ಕೈ ಬಿಡಬೇಡ, ಅವರನ್ನು ಮುಂದೆ ಹಾಕಿಕೊಂಡು ಬದುಕು, ಆ ಬದುಕಿಗೊಂದು ಅರ್ಥ ಸಿಗುತ್ತೆ, ಹಾಗ್ ಬದುಕು. “”ಧರ್ಮಕ್ಕೆ ತಲೆಬಾಗಬೇಕೇ ಹೊರತು ದುಷ್ಟರಿಗಲ್ಲ, ಮಾನವೀಯತೆಗೆ ತಲೆಬಾಗಬೇಕೇ ಹೊರತು ಅವಿವೇಕಿಗಳಿಗಲ್ಲ””
ವಿಶೇಷ ಲೇಖನ :- ಆರ್.ಬಿ.ಅಲಿ ಆದಿಲ್ ಸಂಪಾದಕೀಯ.