ಎಂಟೆದೆ ಬಂಟ ಮಹೇಶ್ ಶೆಟ್ಟಿ ತಿಮರೋಡಿ…!
ತಿಮರೋಡಿ… ಮಹೇಶ್ ಶೆಟ್ಟಿ ತಿಮರೋಡಿ, ಈ ಹೆಸರು ಅತ್ಯಾಚಾರಿಗಳು ಯಾರೆಲ್ಲ ಇದ್ದಾರೆ ಅವರು ಕನಸಲ್ಲೂ ಭಯ ಹುಟ್ಟಿಸೋ ಹೆಸರು.. ಈ 13 ವರ್ಷದಲ್ಲಿ ಆ ಧರ್ಮಕ್ಷೇತ್ರದಲ್ಲಿ ನಡೆಯಲು ಸಾಧ್ಯವಿದ್ದ ಅದೆಷ್ಟೋ ಅತ್ಯಾಚಾರ, ಕೊಲೆಗಳನ್ನು ನೇರವಾಗಿ ತನ್ನ ನಿಷ್ಟುರ ನಡೆಯಿಂದಲೇ ತಡೆದಂತಹ ನಿಜವಾದ ಶಕ್ತಿಶಾಲಿ.
ಒಪ್ಪುತ್ತಿರೋ ಬಿಡುತ್ತಿರೋ ಒಂದು ವೇಳೆ ಸೌಜನ್ಯ ಪ್ರಕರಣದ ವಿಚಾರದಲ್ಲಿ ಮಹೇಶ್ ಶೆಟ್ಟಿ ಇತರ ಹಿಂದೂ ನಾಯಕರಂತೆ ಮೌನವಾಗಿ ಕುಳಿತಿದ್ದರೆ, ಈ 13 ವರ್ಷದಲ್ಲಿ ಅದೆಷ್ಟೋ ಅಪ್ರಾಪ್ತ ಹುಡುಗಿಯರ, ಮಹಿಳೆಯರ ಹೆಣಗಳು ಅಲ್ಲೆ ಸಿಗುತ್ತಿದ್ದವು. ಇದನ್ನು ಯಾರೂ ಒಪ್ಪದಿದ್ದರೂ ಬೆಳ್ತಂಗಡಿ ತಾಲ್ಲೂಕಿನ ಪ್ರತಿಯೊಂದು ಮನೆಯ ವ್ಯಕ್ತಿಯೂ ಒಪ್ಪುತ್ತಾನೆ. ಅಷ್ಟೆ ಅಲ್ಲ ಧರ್ಮಕ್ಷೇತ್ರದ ಹಲವು ಸಿಬ್ಬಂದಿಗಳು ಒಪ್ಪುತ್ತಾರೆ. ಮಹೇಶ್ ಶೆಟ್ಟಿ ಹಿಂದಿನಿಂದ ಗೇಲಿ ಮಾಡುವವರು, ರಾಜಕೀಯವಾಗಿ ಶತ್ರುಗಳು ಎನಿಸಿ ಕೊಂಡವರು ಕೂಡ ತಮ್ಮ ಮನೆಯಲ್ಲಿ ಹೇಳೋ ಮಾತು ಇದೆಯಾಗಿರುತ್ತೆ. ಮಹೇಶ್ ಶೆಟ್ಟಿಯಂತಹ ಒಂದು ವ್ಯಕ್ತಿತ್ವ ಇಲ್ಲದೆ ಇರುತ್ತಿದ್ದರೆ ಅತ್ಯಾಚಾರಿಗಳ ಪರವಾಗಿ ಬ್ಯಾಟ್ ಬೀಸುವವರ ಮನೆಯಲ್ಲಿನ ಹೆಣ್ಣುಮಕ್ಕಳ ಶವವೂ ಅಲ್ಲೆ ಸಿಗುತ್ತಿತ್ತು ಅಂದರೂ ಅಚ್ಚರಿಯಿಲ್ಲ..
ಸುಮಾರು 11 ರಿಂದ 12 ವರ್ಷ ಮಹೇಶ್ ಶೆಟ್ಟಿಯವರದ್ದು ಏಕಾಂಗಿ ಹೋರಾಟ ಅಂದ್ರು ತಪ್ಪಾಗಲಾರದು. ಕೋಟಿ ಕೋಟಿ ಯ ಆಫರ್ ಗಳನ್ನು ಎಡಗಾಲಿನಿಂದ ಒದ್ದಂತಹ ಹೋರಾಟಗಾರ. ಮೇಲಿಂದ ಮೇಲೆ ಅತ್ಯಾಚಾರಿಗಳ ಪರ ನಿಂತವರ ಕೇಸ್ ಗಳು ಎಂಟೆದೆ ಬಂಟನನ್ನು ಅಲು ಗಾಡಿಸಲು ಸಾಧ್ಯವಾಗಿಲ್ಲ. ಕೃಷಿಯಲ್ಲಿ ತೊಡಗಿಸಿಕೊಂಡಿರೋ ತಿಮರೋಡಿಗೆ ಕೇಸ್, ತಿರುಗಾಟದ ವಿಚಾರದಲ್ಲಿ ಆರ್ಥಿಕ ಸಂಕಷ್ಟವೂ ಎದುರಾಗಿತ್ತು. ಇದಕ್ಕಾಗಿಯೇ ತನ್ನ ಕೃಷಿ ಭೂಮಿಯನ್ನು ಮಾರಾಟ ಮಾಡಿದ್ರು. ಅದೇ ಹಣವನ್ನು ನೋಡಿ ಪವರ್ ಟಿವಿ ರಾಕೇಶ್ ಶೆಟ್ಟಿ ಎಂಬ ಸೋಕಾಲ್ಡ್ ಪತ್ರಕರ್ತ ಅಲ್ಲಿ ಇಲ್ಲಿ ಲೆಕ್ಕ ಕೊಡುತ್ತಿದ್ದದ್ದು…….