*‘ಕರಾಸ್ತ್ರ’ ಚಲನಚಿತ್ರ ಶೀಘ್ರವೇ ಬಿಡುಗಡೆ *
ಗದಗ : ಶ್ರೀ ಶಿವಶಕ್ತಿ ಸಿನಿ ಕಂಬೈನ್ಸ್ ಮೂಲಕ ಪ್ರಥಮ ಕಾಣಿಕೆಯಾಗಿ ‘ಕರಾಸ್ತ್ರ ’ ಕನ್ನಡ ಚಲನಚಿತ್ರ ಉತ್ತರ ಕರ್ನಾಟಕದ ಕಲಾವಿದರನ್ನು ಸೇರಿಸಿಕೊಂಡು ನಿರ್ಮಿಸಲಾಗಿದೆ .ಇದೀಗ ಈ ಚಿತ್ರದ ಟ್ರೈಲರ್ ಮತ್ತು ಲಿರಿಕಲ್ ವಿಡಿಯೋ ಸಾಂಗ್ ನಗರದ ವಿದ್ಯಾದಾನ ಶಿಕ್ಷಣ ಸಮಿತಿ ಮೈದಾನದಲ್ಲಿ ನಡೆಯುತ್ತಿರುವ ಕರಾಟೆ ಬೆಲ್ಟ್ ವಿತರಣಾ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ನಿರ್ದೇಶಕ ನಾರಾಯಣ ಪೂಜಾರ ಹೇಳಿದರು.
ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದ್ವಾಪರ ಯುಗದಲ್ಲಿ ನಡೆದ ಘಟನೆಯ ಬಗೆಗಿನ ಪ್ರಶ್ನಾರ್ಥಕ ವಿಷಯಗಳ ಬೆನ್ನತ್ತಿ ಕಥೆ ಸಾಗುತ್ತದೆ. ಮತ್ತು ಹೆಣ್ಣು ಮನಸ್ಸು ಮಾಡಿದರೆ ಏನದ್ರೂ ಸಾಧಿಸಬಲ್ಲಳು ಎಂಬುದನ್ನು ತೋರಿಸಲಾಗಿದೆ . ಪಾತ್ರದಲ್ಲಿ ರಿಯಲ್ ಕರಾಟೆ ಪಟುಗಳು ಮತ್ತು ನಾಲ್ವರು ರಂಗಭೂಮಿ ಕಲಾವಿದರು ಅಭಿನಯಿಸಿದ್ದಾರೆ. ಹುಬ್ಬಳ್ಳಿ, ಬ್ಯಾಡಗಿ, ಗದಗ, ಹಾವೇರಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು ಕತೆ, ಚಿತ್ರಕತೆ, ಸಾಹಿತ್ಯ ಮತ್ತು ನಿರ್ಮಾಣದ ಜವಾಬ್ದಾರಿಯನ್ನು ನಾನೇ ನಿರ್ವಹಿಸಿದ್ದೇನೆ .ಚಿತ್ರವನ್ನು ಶೀಘ್ರದಲ್ಲೇ ರಾಜ್ಯಾದ್ಯಂತ ಬಿಡುಗಡೆ ಮಾಡುತ್ತೇವೆ ಎಂದರು.
ಉತ್ತರ ಕರ್ನಾಟಕದ ಕಲಾವಿದರು ಬೆಳೆಯಬೇಕು ಎನ್ನುವ ಉದ್ದೇಶ ಇಟ್ಟುಕೊಂಡಿರುವ ಚಿತ್ರತಂಡವನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿ ಚಲನಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕು ಎಂದು ಶ್ರೀನಿವಾಸ ಹುಯಿಲಗೋಳ ಹೇಳಿದರು.
ತಾರಾಗಣದಲ್ಲಿ ನಾರಾಯಣ ಪೂಜಾರ, ಕ್ಷಿತಿ ವೀರಣ್ಣ, ಬೇಬಿ ಸಾಕ್ಷಿ, ಕಾರ್ತಿಕ ಪೂಜಾರ, ಮನಿಷಾ ಕಬ್ಬೂರ, ಬೇಬಿ ಕೃಷ್ಣವೇಣಿ, ಹನುಮಂತ, ಮಾಲತೇಶ ಸುಂಕದ, ಅಬ್ದುಲ್ಲ ಮುನ್ನಾ ಎರೇಸೀಮೆ , ಬಸವರಾಜ ಹೊಂಬಾಳೆ, ಭುವನಾ, ವಿದ್ಯಾ ಬೆಳಗಾಂವ, ಹೀತೇಶ, ವಿಜಯಕುಮಾರ ನಾಗರತ್ನ ಮೊದಲಾದವರು ಅಭಿನಯಿಸಿದ್ದಾರೆ , ತಾಂತ್ರಿಕ ವರ್ಗದಲ್ಲಿ ಸಹಾಯಕ ನಿರ್ದೇಶಕರಾಗಿ ಸತೀಶ ಕ್ಯಾತನಘಟ್ಟ, ಕಣಿವೆಪ್ಪ, ಬಿ.ಪವನ ಕುಲಕರ್ಣಿ, ಛಾಯಾಗ್ರಹಣ ಶರಣು ಸುಗ್ನಳ್ಳಿ, ಲಕ್ಷ್ಮಣ, ಮೈಲಾರಿ, ಗಗನ, ಸ್ಥಿರಚಿತ್ರಣ ವಿನ್ಸೆಂಟ್ ಪರೇರಾ, ಸಂಕಲನ ಶರಣು ಸುಗ್ನಳ್ಳಿ, ಅಮಿತ್ ಬಳ್ಳಾರಿ, ಸಂಗೀತ ಮಹಾರಾಜ್, ರಾಜ್ ಭಾಸ್ಕರ್, ಕರಾಟೆ ಮಂಜು , ಶಂಕರ ಶಾಸ್ತ್ರಿ ಸಾಹಸ, ನೃತ್ಯ ವಿನಾಯಕ, ಕಲಾ ನಿರ್ದೇಶನ ಶಾಂತಯ್ಯ ಪರಡಿಮಠ, ವಸ್ತಾಲಂಕಾರ ಹಾಗೂ ಪ್ರಸಾಧನ ಬಿ.ಎಚ್.ನಯನಾ, ಪತ್ರಿಕಾ ಸಂಪರ್ಕ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ್ ಹಂಡಿಗಿ ಅವರದಿದೆ .
ಈ ಸಂದರ್ಭದಲ್ಲಿ ಚಲನಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸುದ್ದಿಗೋಷ್ಠಿಯಲ್ಲಿ ಗದಗ ನಗರದ ನಾಯಕ ನಟಿ ಮನಿಷಾ ಕಬ್ಬೂರ, ಬಸವರಾಜ್ ಹೊಂಬಾಳಿ, ಶ್ರೀನಿವಾಸ ಹುಯಿಲಗೋಳ, ಮಂಜುನಾಥ ಕರಾಟೆ ಶಿಕ್ಷಕರು, ಡಾ.ಪ್ರಭು ಗಂಜಿಹಾಳ ಮತ್ತು ಚಿತ್ರತಂಡದವರು ಉಪಸ್ಥಿತರಿದ್ದರು.
** -ಡಾ.ಪ್ರಭು ಗಂಜಿಹಾಳ ಮೊ:೯೪೪೮೭೭೫೩೪೬