ಬುದ್ದಂ ಶರಣಂ ಗಚ್ಛಾಮಿ ಸೇವಾ ಟ್ರಸ್ಟ್ (ರಿ) ವತಿಯಿಂದ ನಾಡಿನ ಸಮಸ್ತ ಜನತೆಗೆ ಡಾ: ಬಿ. ಆರ್. ಅಂಬೇಡ್ಕರ್ ರವರ ಜಯಂತಿಯ ಹಾರ್ದಿಕ ಶುಭಾಶಯಗಳು.
🌹🌹💐💐🌹🌹 ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ತಾವರಗೇರಾ ನ್ಯೂಸ್ ಪತ್ರಿಕ ಕಾರ್ಯಾಲಯದಲ್ಲಿ ಡಾ: ಬಿ. ಆರ್. ಅಂಬೇಡ್ಕರ್ ರವರ ಜಯಂತಿ ಕಾರ್ಯಕ್ರದ ನಿಮಿತ್ಯವಾಗಿ ಬುದ್ದಂ ಶರಣಂ ಗಚ್ಛಾಮಿ ಸೇವಾ ಟ್ರಸ್ಟ್ (ರಿ) ವತಿಯಿಂದ ಇಂದು ಬೆಳಿಗ್ಗೆ 9 ಗಂಟೆಗೆ ಮಕ್ಕಳಿಂದ ಹಾಗೂ ಟ್ರಸ್ಟ್ ಸದಸ್ಯರಿಂದ ಡಾ: ಬಿ. ಆರ್. ಅಂಬೇಡ್ಕರ್ ರವರ ಜಯಂತಿ ಕಾರ್ಯಕ್ರಮದ ನಿಮಿತ್ಯ ಡಾ: ಬಿ. ಆರ್. ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಹೂ ಮಾಲೆ ಹಾಕಿ ಪೂಜಿಸಲಾಯಿತು. ಇಂದಿನ ಯುವಕರೆ ನಾಳಿನ ಪ್ರಜೆಗಳು ಹಾಗಾಗಿ ಯುವಕರಲ್ಲಿ ಹೋರಾಟದ ಕಿಚ್ಚು ಮತ್ತು ಧೈರ್ಯ ತುಂಬುವ ಕಾರ್ಯ ಪ್ರತಿಯೊಂದು ಹಂತದಲ್ಲಿ ನಡೆಯಬೇಕು, ಯುವಕರು ದಾರಿ ತಪ್ಪುತ್ತಿದ್ದಾರೆ, ದಾರಿ ತಪ್ಪುವಂತಹ ಯುವಕರನ್ನ ಸನ್ಮಾರ್ಗದತ್ತ ತರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ, ಹಾಗಾಗಿ ಪ್ರತಿಯೊಬ್ಬರು ಡಾ: ಬಿ. ಆರ್. ಅಂಬೇಡ್ಕರ್ ರವರ ಮಾರ್ಗದಲ್ಲಿ ಸಾಗಬೇಕು ಆಗ ಡಾ: ಬಿ. ಆರ್. ಅಂಬೇಡ್ಕರ್ ರವರ ಜಯಂತಿಗೆ ಒಂದು ಅರ್ಥ ಪೂರ್ಣ ಮೆರೆಗೂ ಬರುತ್ತದೆ ಎನ್ನುವುದು ನಮ್ಮ ಆಶಯ. ✊✊ಜೈಭೀಮ್ ಜೈ ಜೈ ಭೀಮ್ ಜೈಭೀಮ್ ✊✊ 🌹🌹💐💐🌹🌹
ಸಂಪಾದಕೀಯ