ತಾವರಗೇರಾ ಪಟ್ಟಣದ ಹಜರತ್ ಖ್ವಾಜಾ ಗರೀಬ್ ನವಾಜ್ ಟ್ರಸ್ಟ್ (ರಿ)ವತಿಯಿಂದ 14ನೇ ವರ್ಷದ ಉಚಿತ ಖತ್ನಾ ಕಾರ್ಯಕ್ರಮವು ಯಶಸ್ವಿ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿಂದು ಉಚಿತ ಖತ್ನ ಕಾರ್ಯಾಕ್ರಮವು ಅದ್ದೂರಿಯಾಗಿ ಜರುಗಿತು. ಭಗವಂತನ ಆದೇಶದ ಮೇರೆಗೆ ಸುಮಾರು 5500 ವರ್ಷಗಳ ಹಿಂದೆ ಹಜರತ್ ಇಬ್ರಾಹಿಂ ಖಲೀಲುಲ್ಲಾರವರು ಇಸ್ಲಾಂ ಧರ್ಮದ ಪ್ರಕಾರ ಪ್ರತಿಯೊಬ್ಬ ಮುಸ್ಲಿಂ ವ್ಯಕ್ತಿಯು ಖತ್ನಾ (ಸುನ್ನತಿ) (ಮುಂಜಿ) ಮಾಡಿಸಿಕೊಳ್ಳುವುದು ಕಡ್ಡಾಯ ಆಚರಣೆಯಾಗಿದೆ ಎಂದಿದ್ದಾರು. ಹಾಗೂ ಇತ್ತೀಚೆಗೆ ವೈಜ್ಞಾನಿಕವಾಗಿಯೂ ಸಾಬೀತು ಮಾಡಲಾಗಿರುತ್ತದೆ. ಈ ಆಚರಣೆಯನ್ನು ನಡೆಸಲು ಅರ್ಥಿಕವಾಗಿ ಹಿಂದುಳಿದ ಬಡ ಮುಸ್ಲಿಂ ಬಾಂಧವರಿಗೆ ಬಹಳ ಕಷ್ಟ ಸಾಧ್ಯವಾಗಿರುತ್ತದೆ. ಇಂತಹವರಿಗೆ ನೆರವಾಗಲು ಉಚಿತವಾದ ಖತ್ನಾ (ಮುಂಜಿ) ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಹಜರತ್ ಖ್ವಾಜಾ ಗರೀಬ್ ನವಾಜ ಟ್ರಸ್ಟ್(ರಿ)ವತಿಯಿಂದ ಸತತವಾಗಿ ಯಶಸ್ವಿಯಾಗಿ ನಡೆಯುವ 14ನೇ ವರ್ಷದ ಉಚಿತ ಖತ್ನಾ ಕಾರ್ಯಕ್ರಮವು ಇಂದು ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಜರುಗಿತು. ತಾವರಗೇರಾ ಪಟ್ಟಣದ ಹಜರತ್ ಖಾಜಾ ಗರಿಬ್ ನವಾಜ್ ಧಾರ್ಮಿಕ ಮತ್ತು ಸಮಾಜೋದ್ಧಾರಕ ಸಂಘದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಕೂಡ ಶ್ಯಾಮಿದಲ್ಲಿ ದರ್ಗಾದ ಹತ್ತಿರ ಉಚಿತ ಖತ್ನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಮುಸ್ಲಿಂ ಬಾಂಧವರು 100ಕ್ಕೂ ಅಧಿಕ ಮಕ್ಕಳಿಗೆ ಉಚಿತ ಖತ್ನಾ ಮಾಡಲಾಯಿತು. ಸ್ಥಳೀಯ ಕಮಿಟಿ ವತಿಯಿಂದ ಆಯೋಜಿಸಿದ್ದ ಖತ್ನಾ ಕಾರ್ಯಕ್ರಮದಲ್ಲಿ ರಾಯಚೂರಿನ ಖ್ಯಾತ ವೈದ್ಯರಾದ ಡಾ:ಮಹ್ಮದ್ ಸಲೀಮ್. ಡಾ:ಜಾಫರ್ ಮತ್ತು ಡಾ//ಮಹೆಬೂಬ್ ಪಾಷ್ ರವರು ಆಗಮಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷರು ಮತ್ತು ಪಟ್ಟಣದ ಮುಸ್ಲಿಂ ಸಮಾಜದ ಮುಖಂಡರು ಹಾಗೂ ಪಟ್ಟಣದ ಹಿರಿಯ ಮುಖಂಡರು, ಸಮಾಜ ಚಿಂತಕರು,ಸಮಾಜ ಸೇವಕರು, ಹಾಗೂ ಯುವಕರು ಮತ್ತು ಸಂಘದ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಪಾಲುಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.