ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿದ ಕುಷ್ಟಗಿ ಸಿಪಿಐ ಯವರು.
ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಗಜೇಂದ್ರಗಡ ರಸ್ತೆಯಲ್ಲಿರುವ ಕೋವಿಡ್ ಕೇರ್ ಸೆಂಟರ್ ಗೆ ಮಾನ್ಯ ಕುಷ್ಟಗಿ ಪಟ್ಟಣದ ಸಿಪಿಐ ನಿಂಗಪ್ಪ.ಎನ್. ಆರ್. ಅವರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಇದೇ ಸಂದರ್ಭದಲ್ಲಿ ಕೋವಿಡ್ ಪಾಸಿಟಿವ್ ಆಗಿದ್ದ ಮಹಿಳೆಯೊಬ್ಬರು ತಮಗೆ ಹೃದಯ ಸಂಬಂಧಿ ಕಾಯಿಲೆ ಇದ್ದು ಕುಷ್ಟಗಿ ಸರಕಾರಿ ಆಸ್ಪತ್ರೆಗೆ ದಾಖಲಾಗಲು ಬಯಸುತ್ತೇನೆ ನನ್ನನ್ನು ಸರಕಾರಿ ಆಸ್ಪತ್ರೆಗೆ ಸೇರಿಸಿ ಎಂದು ಸಿಪಿಐ ಅವರ ಬಳಿ ತಮ್ಮ ಅಳಲು ತೋಡಿಕೊಂಡಳು. ಆಗ ಮಾನ್ಯ ಸಿ.ಪಿ.ಐ.ಸಾಹೇಬರಾದ ಸಿಪಿಐ ನಿಂಗಪ್ಪ ಎನ್. ಆರ್ ಕೂಡಲೇ ಸ್ಪಂದಿಸಿ. ಸರಕಾರಿ ಆಸ್ಪತ್ರೆಯ ವೈದ್ಯರಾದ ಡಾ ಕೆ. ಎಸ್. ರೆಡ್ಡಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸದರಿ ಮಹಿಳೆಗೂ ಅವರೊಂದಿಗೆ ಮಾತನಾಡಿಸಿ ಮಹಿಳೆಗೆ ಧೈರ್ಯ ತುಂಬಿಸುವ ಕೆಲಸ ಮಾಡಿ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುವಂತೆ ವೈದ್ಯರಲ್ಲಿ ಮನವಿ ಮಾಡಿದರು. ನಂತರ ಅಲ್ಲಿ ಆರೈಕೆ ಮಾಡುತ್ತಿದ್ದ ಆರೋಗ್ಯ ಇಲಾಖೆ ಸಿಬ್ಬಂದಿಯವರಿಗೆ ಮಾತನಾಡಿ ಅಲ್ಲಿ ಎಷ್ಟು ಜನರು ಇದ್ದಾರೆ ಅವರೆಲ್ಲರ ಆರೋಗ್ಯದ ಬಗ್ಗೆ ಹಾಗೂ ವಸತಿ ನಿಲಯದಲ್ಲಿನ ಎಲ್ಲ ವ್ಯವಸ್ಥೆಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಿದ್ದರು. ಈ ಸಂದರ್ಭದಲ್ಲಿ ಪಿಎಸ್ಐ ತಿಮ್ಮಣ್ಣನಾಯಕ ಸಿಪಿಐ ವಾಹನ ಚಾಲಕರಾದ ರಂಗಪ್ಪ ಚೂರಿ ಇದ್ದರು.
ವರದಿ – ಮಂಜುನಾಥ ಎಸ್.ಕೆ