ತಾವರಗೇರಾ ಪಟ್ಟಣದಲ್ಲಿಂದು ರೈತರ ಫರ ಧ್ವನಿ ಎತ್ತಿದ ಸಿಐಟಿಯು.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಇಂದು ದೇಶವ್ಯಾಪ್ತಿ ರೈತ ಮತ್ತು ಕಾರ್ಮಿಕರು ಕರಾಳದಿನ ಎಂದು ಕಪ್ಪುಬಾವುಟ ಹಿಡಿದು ಸರ್ಕಾರಕ್ಕೆ ಎಚ್ಚರಿಕೆ ಕೊಡ್ತಾ ಇದ್ದೇವೆ ತಾವರಗೇರಾ ಪಟ್ಟಣದಲ್ಲಿಕೂಡಾ ರೈತ ಕಾರ್ಮಿಕರ ಹೋರಾಟ ಮಾಡಲಾಯಿತು. ಭೂಸ್ವಾಧೀನ ಕಾಯ್ದೆ ಎಪಿಎಂಸಿ ತಿದ್ದುಪಡಿ ಕಾಯಿದೆ ಕಾರ್ಮಿಕರ ಕಾನೂನುಗಳನ್ನು ಮೊಟಕುಗೊಳಿಸುವದು ಇದನ್ನು ಕೈಬಿಡಬೇಕು, ಕಾರ್ಮಿಕರ ವಿರೋಧಿ ನೀತಿಗಳನ್ನು ಜಾರಿ ಮಾಡ್ತಾ ಇದೆ. ಸಾಮಾನ್ಯ ಜನರ ರಕ್ಷಣೆಗೆ ಬರ್ತಾ ಇಲ್ಲ. ನಮ್ಮ ಸಾವಿನ ಜೊತೆ ಚೆಲ್ಲಾಟವಾಡುತ್ತಿದೆ, ಲಸಿಕೆ ನೀಡುವಲ್ಲಿ, ರಕ್ಷಣೆ ಕೊಡುವಲ್ಲಿ, ಸರ್ಕಾರ ವಿಫಲವಾಗಿದೆ. ರೈತ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಅವರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು. ಶಿವು ಆನೆ ಮೋತಿ ಲಕ್ಷ್ಮಣ ಗಂಜಿ ಅಂಬರೀಶ್ ತೆಗ್ಗಿನಮನಿ ಕಾರ್ಮಿಕ ರಫೀ ಸಾಬ್ ಕಾರ್ಮಿಕ ಮುಖಂಡ ರಮೇಶ್ ತಿಮ್ಮಪುರ್ ಖಾಜಾ ಹುಸೇನ್ ಪೇಂಟರ್ ಈ ಹೋರಾಟದಲ್ಲಿ ಭಾಗವಹಿಸಿದ್ದರು ಕಲಾವತಿ ಸಿಐಟಿಯು ತಾಲೂಕ ಅಧ್ಯಕ್ಷರು. ತಹಸಿಲ್ದಾರ್ ಮತ್ತು ಡಿಸಿ ಅವರಿಗೆ ಆನ್ಲೈನ್ ಮುಖಾಂತರ ಮನವಿ ಪತ್ರ ಕಳಿಸಲಾಯಿತು.
ವರದಿ – ಅಮಾಜಪ್ಪ ಹೆಚ್.ಜುಮಾಲಾಪೂರ.