ಕೂಡ್ಲಿಗಿ ಪಟ್ಟಣದ ಮುಸ್ಲಿಂ ಯುವಕರಿಂದ ಬಡವರಿಗೆ ತರಕಾರಿ ಕಿಟ್ ವಿತರಣೆ”

Spread the love

ಕೂಡ್ಲಿಗಿ ಪಟ್ಟಣದ ಮುಸ್ಲಿಂ ಯುವಕರಿಂದ ಬಡವರಿಗೆ ತರಕಾರಿ ಕಿಟ್ ವಿತರಣೆ

ಕೂಡ್ಲಿಗಿ ತಾಲ್ಲೂಕು ಮೌಲಾನಾ ಅಬುಲ್ ಕಲಾಂ ಆಜಾದ್ ಮುಸ್ಲಿಂ ಯುವಕರ ತಂಡ ಅಜಾದ್ ನಗರ ಕೂಡ್ಲಿಗಿ ಇವರಿಂದ  ಜಿಲ್ಲೆಯ ಕೊರೋನಾ ಪೀಡಿತರ ಸಂಖ್ಯೆ ದಿನೇದಿನೇ  ಹೆಚ್ಚಾಗುತ್ತಿರುವುದರಿಂದ  ವೈರಸ್ಸನ್ನು  ಜನರಿಗೆ ತಗಲದಂತೆ ತಡೆಗಟ್ಟಲು  ಜಿಲ್ಲಾಡಳಿತ  ಕಠಿಣ ಕ್ರಮಗಳನ್ನು  ಕೈಗೊಂಡಿದೆ  ವಾರದಲ್ಲಿ  ಎರಡು ದಿನ ಮಾತ್ರ  ಬೆಳಿಗ್ಗೆ ಆರರಿಂದ  12ರವರೆಗೆ  ತಮಗೆ ಬೇಕಾಗುವ  ಅಗತ್ಯ ವಸ್ತುಗಳನ್ನು ಪಡೆಯಬಹುದು  ಆದರೆ  ಅವುಗಳನ್ನು ಪಡೆಯಲು ಬಡವರಿಗೆ  ಹಣ ಬೇಕಾಗಿದೆ  ಹಣ ಬೇಕು ಎಂದರೆ  ವೃತ್ತಿಪರ ಬದುಕುಗಳನ್ನು  ಕೂಲಿ ಕೆಲಸಗಳನ್ನು  ಮಾಡಬೇಕಾಗಿದೆ  ಆದರೆ ಅದೆಷ್ಟು ಜನ  ಕೆಲಸಗಳಿಲ್ಲದೆ  ಇಲ್ಲದೆ  ಕುಟುಂಬ ಸಾಗಿಸಲು ಹರಸಾಹಸ ಪಡುತ್ತಿದ್ದು  ದುಡ್ಡಿಲ್ಲದೆ  ಬೇಕಾಗುವ ವಸ್ತುಗಳನ್ನು  ಪಡೆಯಲು  ಪರಿತಪಿಸುತ್ತಿದ್ದಾರೆ  ಇಂಥ ಸಂದರ್ಭದಲ್ಲಿ  ಕೂಡ್ಲಿಗಿ ಪಟ್ಟಣದ  ಮುಸ್ಲಿಂ ಯುವಕರ ತಂಡವೊಂದು ತರಕಾರಿ ವಿತರಣೆ 200 ಕಿಟ್ ಗಳನ್ನು ಕೊರೋನಾ ಮಹಾಮಾರಿ ಆರ್ಭಟಿಸುವ ಸಂದರ್ಭದಲ್ಲಿ ಕೂಲಿ ಕಾರ್ಮಿಕರಿಗೆ  ಬಡ ಬಗ್ಗರಿಗೆ   ಕಡು ಬಡವರಿಗೆ ಕುಟುಂಬ ನಿರ್ವಹಣೆಗೆ ಅನುಕೂಲವಾಗಲೆಂದು. ಸಾಂಗ್  ನಿಸ್ವಾರ್ಥ ಭಾವನೆಯಿಂದ ಪ್ರವಾದಿ ಮೊಹಮ್ಮದ್ ಸಲ್ಲಲ್ಲಾಹು ಅಲೈಹಿವ ಸಲ್ಲಮ್ ರವರ ಅನುಕರಣೆಯಲ್ಲಿ ಈ ಕಾರ್ಯವನ್ನು ಮಾಡಲಾಯಿತು. ತರಕಾರಿ:ಈರುಳ್ಳಿ, ಟೊಮಾಟೋ,ಹಸಿಮೆಣಸಿನಕಾಯಿ ,ಬದನೆಕಾಯಿ ,ಕ್ಯಾಬೇಜ್ ,ಬೆಳ್ಳುಳ್ಳಿ, ಶುಂಠಿ,  ದೊಣ್ಣೆ ಮೆಣಸಿನಕಾಯಿ ,ಬೆಳ್ಳುಳ್ಳಿ ,ಹಾಲುಗುಂಬಳಕಾಯಿ ,ವಿತರಣೆ ಮಾಡಿದರು. ಈ ಕಾರ್ಯದಲ್ಲಿ ಯುವಕರು  ಸ್ವಇಚ್ಛೆಯಿಂದ ಸ್ವಂತ ಖರ್ಚಿನಲ್ಲಿ ಎಲ್ಲಾ ಸಾಮಗ್ರಿಗಳನ್ನು ಖರೀದಿಸಿ ಸಂಗ್ರಹಿಸಿ ಕಿಟ್ಟು ಗಳನ್ನು ಮಾಡಿ ವಿತರಣೆ ಮಾಡಿದರು . ಫಲಾನುಭವಿಗಳು ಸಂತೋಷವಾಗಿ ಈ ಯುವಕರಿಗೆ ಕೃತಜ್ಞತೆ ಸಲ್ಲಿಸಿದರು. ಇಂತಹ ಮಹಾ ಮಾರಿಯ ಸಂದರ್ಭದಲ್ಲಿ ಯಾವುದೇ ಪ್ರಚಾರವಿಲ್ಲದೆ ಆ ದೇವನ ಕೃಪೆಗಾಗಿ ತಮ್ಮ ಪ್ರಾಣಗಳನ್ನು ಲೆಕ್ಕಿಸದೆ ಜನರ ಮನೆ ಮನೆಗೆ ತಲುಪಿ ತರಕಾರಿ ಕಿಟ್ ಗಳನ್ನು ವಿತರಿಸಿ ,ಜನರ ಶ್ಲಾಘನೆಗೆ ಪಾತ್ರರಾದರು ಹಾಗೂ ಫಲಾನುಭವಿಗಳು ತಮ್ಮ ಮನಸ್ಸಿನಿಂದ ಈ ಯುವಕರಿಗಾಗಿ ಆ ದೇವರಲ್ಲಿ ಪ್ರಾರ್ಥಿಸಿದರು . ತರಕಾರಿ ಕೀಟಗಳನ್ನು ಅಜಾದ್ ನಗರ. ಮುಜಿಯಾದ್ ನಗರ. ಹೌಸಿಂಗ್ ಬೋರ್ಡ್ ರಾಜೀವ್ ಗಾಂಧಿನಗರ ಹುಡಿಸಲಮ್ಮ ನ ಕಟ್ಟೆ  ಹಿಂಭಾಗ ಬಾಪೂಜಿನಗರ ವಿದ್ಯಾನಗರ ಇನ್ನು ಕೆಲವು ಸ್ಥಳಗಳ ಬಡವರಿಗೆ ವಿತರಿಸಲಾಯಿತ.

  ವರದಿ – ಚಲುವಾದಿ ಅಣ್ಣಪ್ಪ.

 

Leave a Reply

Your email address will not be published. Required fields are marked *