600 ಕ್ಕೂ ಹೆಚ್ಚು ಸೋಂಕಿತರಿಗೆ ಬೆಡ್ ವ್ಯವಸ್ಥೆ ಕಲ್ಪಿಸಿದ ಅಮ್ಮನ ಮಡಿಲು ವಿಜಯಪೂರ.

Spread the love

600 ಕ್ಕೂ ಹೆಚ್ಚು ಸೋಂಕಿತರಿಗೆ ಬೆಡ್ ವ್ಯವಸ್ಥೆ ಕಲ್ಪಿಸಿದ ಅಮ್ಮನ ಮಡಿಲು ವಿಜಯಪೂರ.

ಕೊವಿಡ್ ಎರಡನೇ ಅಲೆ ತೀವ್ರವಾಗಿ ಹರಡಿದ್ದರ ಪರಿಣಾಮ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಪರದಾಡಿದವರೆಷ್ಟೋ ಜನ. ಎಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತದೆ? ಎಲ್ಲಿ ಬೆಡ್ ಖಾಲಿ ಇವೆ ? ಆಕ್ಸಿಜನ್ ಬೆಡ್ ಹಾಗೂ ವೆಂಟಿಲೇಟರ್ ಗಳ ವ್ಯವಸ್ಥೆ ಎಲ್ಲಿ ಇದೆ? ಅನ್ನೋದು ಗೊತ್ತಾಗದೇ ಸಾವಿರಾರು ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ವಿಜಯಪುರದ ಟ್ರಸ್ಟ್ ಒಂದು ಸಹಾಯವಾಣಿ ತೆಗೆದು ಕೊರೊನಾ ಸೋಂಕಿತರಿಗೆ ಬೆಡ್, ಆಕ್ಸಿಜನ್ ಕೊಡಿಸುವಲ್ಲಿ ಮಹತ್ತರ ಪಾತ್ರ ವಹಿಸಿತು. ಜಿಲ್ಲೆಯ ಕೊರೊನಾ ಸೋಂಕಿತರ ಉಚಿತ ಸೇವೆಗೆ ನಿಂತು ಕೊರೊನಾ ಸಮರದಲ್ಲಿ ಸಾಮಾಜಿಕ ಕಾರ್ಯ ಮಾಡೋ ಮೂಲಕ ಶ್ಲಾಘನೀಯ ಕಾರ್ಯ ಮಾಡುತ್ತಿದೆ. ಹಾಗಾದರೆ ಆ ಟ್ರಸ್ಟ್ ಯಾವುದು? ಟ್ರಸ್ಟ್ ನ ಸೇವೆ ಎಂತಹುದು ಅನ್ನೋ ಕುರಿತು ಇಲ್ಲಿದೆ ಡಿಟೇಲ್ಸ್….ಕಳೆದ ತಿಂಗಳು ಕೊರೊನಾ ಅಟ್ಟಹಾಸ ಮೆರೆದು ದೇಶದಲ್ಲೇ ಅರಾಜಕತೆ ಸೃಷ್ಟಿಸಿ ಮೆಡಿಕಲ್ ಎಮರ್ಜೆನ್ಸಿ ಉಂಟಾಯಿತು. ಒಂದು ಕಡೆ ಕೊರೊನಾ ಸೋಂಕು ಎಲ್ಲಡೆ ತೀವ್ರವಾಗಿ ಹರಡತೊಡಗಿದರೆ ಇತ್ತ ಕೊರೊನಾ ಸೋಂಕಿತರಿಗೆ ಬೆಡ್ ಹಾಗೂ ಸೂಕ್ತ ಚಿಕಿತ್ಸೆ ಸಿಗದೇ ಪರದಾಡಬೇಕಾಗಿದ್ದು ಎಲ್ಲರಿಗೂ ತಿಳಿದಿದ್ದೆ. ಇದನ್ನೇ ಚಾಲೆಂಜ್ ಆಗಿ ಸ್ವೀಕರಿಸಿದ ಬಸವನಾಡಿನ ಬಸವ ತತ್ವದ ಪ್ರತಿಪಾದಕ ಸಂಗಮೇಶ ಬಬಲೇಶ್ವರ ಸೋಂಕಿತರ ಸೇವೆ ನೀಡಲು ಮುಂದಾದರು. ವಿಜಯಪುರ ಜಿಲ್ಲೆಯ ಅಮ್ಮನ ಮಡಿಲು ಚಾರಿಟಬಲ್ ಟ್ರಸ್ಟ್ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಮಾಡೊ ಮೂಲಕ ಹೆಸರುವಾಸಿಯಾಗಿದೆ. ಈ ಟ್ರಸ್ಟ್ ನ ಅಧ್ಯಕ್ಷರಾಗಿರುವ ಸಂಗಮೇಶ ಬಬಲೇಶ್ವರ ಜೊತೆಗೆ ಸಾಥ್ ನೀಡಿದ್ದು ಶಿಕ್ಷಣ ತಜ್ಞರು ಹಾಗೂ ಟ್ರಸ್ಟ್ ನ ಕಾರ್ಯದರ್ಶಿ ಬಸವರಾಜ ಕೌಲಗಿ ಹಾಗೂ ವಿಧಾನ ಪರಿಷತ್ ಸದಸ್ಯರಾಗಿರುವ ಸುನೀಲಗೌಡ ಪಾಟೀಲರ ಎಂ.ಬಿ.ಪಾಟೀಲ ಫೌಂಡೇಶನ್. ಎರಡು ಸಂಸ್ಥೆಗಳ ಸಹಯೋಗದಲ್ಲಿ ನಗರದ ಗ್ಯಾಂಗ್ ಬೌಡಿಯ ಸಂಗಮೇಶ್ವರ ಕಾಲೋನಿಯಲ್ಲಿ ಸುಸಜ್ಜಿತ ಕಟ್ಟಡದಲ್ಲಿ ಸಹಾಯವಾಣಿ ಪ್ರಾರಂಭಿಸಲಾಯಿತು. ಈ ಸಹಾಯವಾಣಿಯಲ್ಲಿ ಕೊರೊನಾ ಸೋಂಕಿತರಿಗೆ ಬೆಡ್, ಆಕ್ಸಿಜನ್, ಔಷಧಿ ಹೀಗೆ ಹಲವಾರು ಸೌಕರ್ಯಗಳನ್ನು ಒದಗಿಸುವಲ್ಲಿ ಸಕ್ರಿಯವಾಯಿತು. ರೋಗಿಗಳು ಕೇಳುವ ಮಾಹಿತಿ ಸಂಗ್ರಹಿಸಿ ಅವರಿಗೆ ಬೇಕಾದ ಸಕಲ ವ್ಯವಸ್ಥೆ ಮಾಡಲು ಮುಂದಾದವು. ಸಹಾಯವಾಣಿ 24×7 ಸೇವೆ ನೀಡಲು ನಾಲ್ಕು ಜನ ಸುಶಿಕ್ಷಿತ ಯುವಕರನ್ನು ಬಳಸಿಕೊಂಡು ಹಗಲು ರಾತ್ರಿ ಕೊರೊನಾ ಸೋಂಕಿತರಿಗೆ ಸಹಾಯ ಒದಗಿಸುತ್ತಿವೆ. ಇಲ್ಲಿಯವರೆಗೆ 1200 ಪೊನ್ ಕರೆಗಳು ಬಂದಿದ್ದು ಅದರಲ್ಲಿ 650 ಕ್ಕೂ ಸೋಂಕಿತರಿಗೆ ಬೆಡ್ ಒದಗಿಸಲಾಗಿದೆ. ಹಲವರಿಗೆ ಮಾರ್ಗದರ್ಶನ ಜೊತೆಗೆ ಮಾನಸಿಕ ಸ್ಥೈರ್ಯ ತುಂಬಲಾಗಿದೆ‌‌ ಎನ್ನುತ್ತಾರೆ ಸಹಾಯವಾಣಿ ಹಾಗೂ ಅಮ್ಮನ ಮಡಿಲು ಚಾರಿಟಬಲ್ ಟ್ರಸ್ಟ್ ಸಂಚಾಲಕ ಸಂತೋಷ ಇಂಡಿ ಇನ್ನೂ ಅಮ್ಮನ ಮಡಿಲು ಚಾರಿಟಬಲ್ ಟ್ರಸ್ಟ್ ನಲ್ಲಿ ಕಳೆದ ಬಾರಿ ಕೊವಿಡ್ ಸಂದರ್ಭದಲ್ಲಿ ತಮ್ಮ ಶಾಲೆಯಲ್ಲಿ ಮಕ್ಕಳ ಫೀಯನ್ನು ಅರ್ಧ ತೆಗೆದುಕೊಂಡು ರಾಜ್ಯಕ್ಕೆ ಮಾದರಿಯಾಗಿತ್ತು. ಈಗ ಮತ್ತೆ ಸಂಕಷ್ಟದ ಸಮಯದಲ್ಲಿ ಸಹಾಯವಾಣಿ ತೆರೆದು ಮತ್ತೆ ಸಾಮಾಜಿಕ ಕಾಳಜಿ ತೋರಿರೋದು ಗುಮ್ಮಟನಗರಿ ಜನತೆಯ ಮೆಚ್ಚುಗೆ ಗೆ ಪಾತ್ರವಾಗಿದೆ‌. ಇನ್ನೂ ಈ ಸಹಾಯವಾಣಿಯಲ್ಲಿ 24×7 ಸರತಿ ಪ್ರಕಾರವಾಗಿ ಸಂತೋಷ ಇಂಡಿ, ಅಮೀತಕುಮಾರ ಬಿರಾದಾರ, ಸತೀಶ ನಡಗಡ್ಡಿ ಹಾಗೂ ಪ್ರದೀಪ ಲಿಂಗದಳ್ಳಿ ಕೊರೊನಾ ಸೋಂಕಿತರ ಅಥವಾ ಅವರ ಪರಿಚಾರಕರ ಪೋನ್ ಗಳಿಗೆ ಸ್ಪಂದಿಸುತ್ತಾರೆ. ನಾನಾ ಆಸ್ಪತ್ರೆಗಳಲ್ಲಿ ಬೆಡ್ ಸೇರಿದಂತೆ ವಿವಿಧ ಸಹಾಯಗಳನ್ನು ಮಾಡುತ್ತಾರೆ. ಫೋನ್ ಮೂಲಕ ಅಲ್ಲದೇ ಕೆಲವರು ನೇರವಾಗಿ ಕಚೇರಿಗೆ ಬರ್ತಾರೆ. ಅವರಿಗೂ ಸಹಾಯ ಮಾಡಲಾಗುತ್ತಿದೆ. ಈ ಸಹಾಯವಾಣಿ ಸಂಪೂರ್ಣ ಉಚಿತವಾಗಿದೆ. ಈ ಸಹಾಯವಾಣಿ ಮೂಲಕ ಕೊರೊನಾ ಸೋಂಕಿತರಿಗೆ ಸಹಾಯ ಮಾಡುತ್ತಿರುವದು ಹೆಮ್ಮೆಯ ಸಂಗತಿ ಎನ್ನುತ್ತಾರೆ ಸಹಾಯವಾಣಿಯ ಇನ್ನೊಬ್ಬ ಸದಸ್ಯ ಅಮೀತಕುಮಾರ ಬಿರಾದಾರ ಒಟ್ನಲ್ಲಿ ಸರಕಾರಗಳೇ ಎಲ್ಲವನ್ನೂ ಮಾಡಲು ಸಾಧ್ಯವಾಗದೇ ಇರುವಾಗ ಅಮ್ಮನ ಮಡಿಲು ಚಾರಿಟಬಲ್ ಟ್ರಸ್ಟ್ ನಂತಹ ಸಂಘ ಸಂಸ್ಥೆಗಳು ಸಾಮಾಜಿಕ ಕಾರ್ಯಕ್ಕೆ ಮುಂದಾಗುತ್ತಾರೆ. ಈ ಸಹಾಯದಿಂದ ಅಮ್ಮನ ಮಡಿಲು ಚಾರಿಟಬಲ್ ಟ್ರಸ್ಟ್ ಹೆಸರಿನ ಹಾಗೆಯೇ ಅಮ್ಮನ ಮಡಿಲಿನ ಪ್ರೀತಿಯನ್ನು ಕೊವಿಡ್ ಸೋಂಕಿತರಿಗೆ ನೀಡುತ್ತಿರುವದು ಶ್ಲಾಘನೀಯ…

ವರದಿ – ಪ್ರವೀಣ ನಂಧಿ  ವಿಜಯಪೂರ.

Leave a Reply

Your email address will not be published. Required fields are marked *