W.P.I. ತಾವರಗೇರಾ ಹೋಬಳಿ ಘಟಕದವತಿಯಿಂದ ನಾಡ ತಹಶೀಲ್ದಾರ ಮುಖಾಂತರ ತಹಶೀಲ್ದಾರಗೆ ತಾವರಗೇರಾದಲ್ಲಿ ಕೋವಿಡ್ ಆಸ್ಪತ್ರೆ ಪ್ರಾರಂಬಗೊಳಿಸಲು ಆಗ್ರಹ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಸರ್ಕಾರಿ ಆರೋಗ್ಯ ಸಮೂಧಾಯ ಕೇಂದ್ರದಲ್ಲಿ ಕೋವಿಡ್ ಆಸ್ಪತ್ರೆ ಪ್ರಾರಂಬಗೊಳಿಸಲು ಇಂದು ತಾವರಗೇರಾ ಹೋಬಳಿಯ ಘಟಕದವತಿಯಿಂದ ಪಟ್ಟಣದ ನಾಡ ತಹಶೀಲ್ದಾರ ಮುಖಾಂತರ ಮಾನ್ಯ ತಹಶೀಲ್ದರ ಸಹೇಬರು ಹಾಗೂ ಶ್ರೀ ಅಮಾರೇಗೌಡ ಎಲ್.ಪಾಟೀಲ್ ಶಾಸಕರು ಕುಷ್ಟಗಿ ಜೊತೆಗೆ ಮಾಜಿ ಶಾಸಕರಾದಂತಹ ಶಶ್ರೀ ದೊಡ್ಡನಗೌಡ ಪಾಟೀಲ್ ಇವರಗಿಗೆ ಮನವಿ ಪತ್ರ ಸಲ್ಲಿಸಲಾಯಿತು. ತಾವರಗೇರಾಹೋಬಳಿಗೆ ಸಂಬಂದಿಸಿದ ಒಟ್ಟು 50 ಹಳ್ಳಿಗಳು ಬರುತ್ತಿದ್ದು. ಸದ್ಯ ಈ ಕೊರೊನಾವು ಸಿಟಿಯಿಂದ ಹಳ್ಳಿಗಳಿಗೆ ವಕ್ಕರಿಸಿದ್ದು, ಕಾರಣ ಸುತ್ತ/ಮುತ್ತಲಿನ ಹಳ್ಳಿ ಜನರು ತಾವರಗೇರಾ ಪಟ್ಟಣಕ್ಕೆ ವ್ಯವಹಾರ ಹಾಗೂ ಆಸ್ಪತ್ರೆಗೆ ಜನರು ಆಗಮಿಸುತ್ತಿದ್ದು. ತಾವರಗೇರಾ ಪಟ್ಟಣದ ಸರ್ಕಾರಿ ಆರೋಗ್ಯ ಸಮೂಧಾಯ ಕೇಂದ್ರವು ನೇರವಾಗಿದ್ದು. ಸದ್ಯ ಸರ್ಕಾರಿ ಆರೋಗ್ಯ ಸಮೂಧಾಯ ಕೇಂದ್ರದಲ್ಲಿ ಈ ಕೋವಿಡ್ ಗೆ ಸಂಬಂಧಿಸಿದ ಉಪ-ಸಲಕರಣೆಗಳು ಇದ್ದು, ಇಲ್ಲಿ ಜಿಲ್ಲಾ ಆಥವಾ ತಾಲೂಕು ಮಟ್ಟದ ಮೇಲಿನ ಆರೋಗ್ಯ ಆದಿಕಾರಿಗಳು ಅವಶ್ಯವಿದೆ, ಆದ್ದರಿಂದ ತಾವರಗರಾ ಪಟ್ಟಣವು ದಿನದಿಂದ ದಿನಕ್ಕೆ ಅಭಿವೃದ್ದಿಯತ್ತ ಸಾಗುತ್ತಿದ್ದು, ಇಲ್ಲಿ ಕೋವಿಡ್ ಆಸ್ಪತ್ರೆ ಅವಶ್ಯವಿದ್ದು, ಈ ಕೊರೊನಾದ ವಿರುದ್ದ ನಮ್ಮ ತಾವರಗೇರಾ ಹೋಬಳಿಯು ಜನರು ಹರ ಸಹಾಸ ಪಡುತ್ತಿದ್ದಾರ, ಆದ್ದರಿಂದ ತಾವರಗೇರಾ ಪಟ್ಟಣಕ್ಕೆ ಕೋವಿಡ್ ಆಸ್ಪತ್ರೆ ವಾರದೊಳಗೆ ಪ್ರಾರಂಭಗೋಳಿಸಬೇಕು, ಇಲ್ಲವಾದಲ್ಲಿ ಮುಂದಿನ ವಾರದಲ್ಲಿ ತಾಹಶೀಲ್ದಾರ ಕಾರ್ಯಲಯದ ಮುಂದೆ ಉಪವಾಸ ಸತ್ಯಗ್ರಹ ಹಮ್ಮಿಕೋಳ್ಳಲಾಗುವುದೆಂದು ಸರಕಾರಕ್ಕೆ W.P.I. ತಾವರಗೇರಾ ಹೋಬಳಿ ಘಟಕದವತಿಯಿಂದ ಇಂದು ತಾವರಗೇರಾ ಪಟ್ಟಣದ ನಾಡ ಕಾರ್ಯಲಯದ (ತಲಾಟಿ) ಸೂರ್ಯಕಾಂತ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು. W.P.I. ತಾವರಗೇರಾ ಹೋಬಳಿ ಘಟಕದ ಆಧ್ಯಕ್ಷರಾದ ಯಮನೂರಪ್ಪ ಬಿಳೆಗುಡ್ಡ ಹಾಗೂ W.P.I. ರಾಜ್ಯ ಸಂಚಾಲಕರಾದ ರಾಜಾನಾಯಕ ಇತರರು ಭಾಗಿಯಾಗಿದ್ದು.
ವರದಿ – ಅಮಾಜಪ್ಪ ಹೆಚ್.ಜುಮಾಲಾಪೂರ.