ಮುಸ್ಲಿಂ ಒಕ್ಕೂಟದಿಂದ ಕೋವಿಡ್-೧೯ ಸಹಾಯವಾಣಿ ಕೇಂದ್ರ ಪ್ರಾರಂಭ ಕೊಪ್ಪಳದಲ್ಲಿ.

Spread the love

ಮುಸ್ಲಿಂ ಒಕ್ಕೂಟದಿಂದ ಕೋವಿಡ್೧೯ ಸಹಾಯವಾಣಿ ಕೇಂದ್ರ ಪ್ರಾರಂಭ ಕೊಪ್ಪಳದಲ್ಲಿ.

ಕೊಪ್ಪಳ : ಕೋವಿಡ್-೧೯ನಂತಹ ಮಹಾಮಾರಿ ವಿರುದ್ಧ ಪ್ರತಿಯೊಬ್ಬರು ಹಾಗೂ ಎಲ್ಲಾ ವರ್ಗದವರು ಜಾತಿ ಮತ ಬೇಧ ಇಲ್ಲದೆ ಹೋರಾಡುವ ಮತ್ತು ಒಬ್ಬರಿಗೊಬ್ಬರು ಸಹಾಯ ಮಾಡುವಂತಹ ಪರಿಸ್ಥಿತಿ ಉಂಟಾಗಿದೆ. ಸಮೂದಯಗಳ ನಡುವೆ ಉಂಟಾಗಿದ್ದ ಅಂತರವನ್ನು ದೂರಮಾಡಿ ಒಂದಾಗಿ ಸೇರುವ ಅವಕಾಶ ದೊರೆತಿದೆ. ನಗರದ ಎಲ್ಲಾ ಮುಸ್ಲಿಂ ಒಕ್ಕೂಟ ಕೋವಿಡ್-೧೯ ಸಹಾಯವಾಣಿ ಕೆಂದ್ರ ಆರಂಭಿಸಿರುವುದು ಬಹಳ ಸಂತೋಷದ ವಿಷಯವಾಗಿದೆ ಎಂದು ನಗರದ ಯೂಸೂಫೀಯ ಮಸ್ಜಿದ್‌ನ ಇಮಾಮ್‌ರಾಗಿರು ಮೌಲಾನ ಮುಪ್ತಿ ನಜೀರ್ ಅಹ್ಮದ್ ಸಾಬ್ ಅವರು ತಿಳಿಸಿದರು.
ಅವರು ನಗರದ ಮುಸ್ಲಿಂ ಒಕ್ಕೂಟದಿಂದ ಕೋವಿಡ್-೧೯ ಸಹಾಯವಾಣಿ ಕೆಂದ್ರವು ಅಲ್ ಅಮೀನ್ ಬೈತುಲ್ ಮಾಲ್ ಸೇವಾ ಟ್ರಸ್ಟ್, ಯೂಸೂಫೀಯ ಮಸ್ಜಿದ್ ಹತ್ತಿರ ಜವಹಾರ ರಸ್ತೆಯಲ್ಲಿರುವ ಕಛೇರಿಯಲ್ಲಿ ಆರಂಭಿಸಿ ಮಾತನಾಡುತ್ತಿದ್ದರು.
ಈ ಸಹಾಯವಾಣಿ ಕೇಂದ್ರವು ಯಾವುದೇ ಒಂದು ಜಾತಿ, ವರ್ಗ, ಸಮೂದಾಯಕ್ಕೆ ಸೀಮಿತವಾಗಿರದೆ ಎಲ್ಲಾ ಸಮೂದಯದವರಿಗೊಸ್ಕರ ಪ್ರಾರಂಭಿಸಲಾಗಿದೆ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು. ಜಮೀರ ಖಾದ್ರಿ ಮಾತನಾಡಿ ಈ ಸಹಾಯವಾಣಿ ಕೇಂದ್ರದಲ್ಲಿ ಒಂದು ತಂಡವು ಕೆಲಸ ಮಾಡಿದರೆ, ಒಂದು ತಂಡ ಕೊಪ್ಪಳ ನಗರದಲ್ಲಿರುವ ಅಸ್ಪತ್ರೆಗಳಲ್ಲಿ ಹಾಸಿಗೆ, ಅಕ್ಸಿಜನ್, ವೆಂಟಿಲೇಟರ್‌ನ ಲಭ್ಯತೆಯ ಮಾಹಿತಿಯನ್ನು ಸಂಭಂಧಪಟ್ಟ ಅಧಿಕಾರಿಗಳಿಂದ ಪಡೆದುಕೊಳ್ಳುತ್ತದೆ. ಸಹಾಯವಾಣಿಗೆ ಬರುವ ರೋಗಿಗಳ ಕರೆಯನ್ನು ಸ್ವೀಕರಿಸಿ ಇದರಲ್ಲಿ ನುರಿತ ವೈಧ್ಯರ ತಂಡವು ರಚಿಸಲಾಗುತಿದೆ ವೈಧ್ಯರು ಅವರ ಸ್ಥಿತಿಯ ಆಧಾರದ ಮೇಲೆ ಅವರಿಗೆ ಸಲಹೆಗಳನ್ನು ನೀಡುತ್ತಾರೆ. ಒಂದು ತಂಡ ಕೋವಿಡ್-೧೯ ನಿಂದ ಮೃತಹೊಂದಿದ ಮೃತದೇಹಗಳನ್ನು ಅಂತ್ಯಕ್ರೀಯೆ ಮಾಡಲು ರಚಿಸಲಾಗಿದೆ. ಮೃತ ದೇಹಗಳನ್ನು ಸಾಗಿಸಲು ವಾಹನಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು. ಸಹಾಯವಾಣಿಯ ದೂರವಾಣಿ ಸಂಖ್ಯೆಗಳು ರಿಯಾಜ್ ಅಹ್ಮದ್. ೯೮೮೦೯೦೫೭೨೪, ಖಲೀಲ್ ಉಡೇವು.೯೬೨೦೮೫೨೮೨೨, ಮಾನ್ವಿಪಾಷ.೯೯೦೦೫೭೬೫೮೬, ಕಲೀಮುಲ್ಲಾ. ೯೮೪೫೫೭೯೬೦೧, ಗೌಸ್ ಪಟೇಲ್.೯೩೮೦೬೫೩೦೩೭. ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜ ಹಿರಿಯ ಮುಖಂಡರು ಉಪಸ್ಥಿತರಿದ್ದರು.

ವರದಿ – ಮಂಜುನಾಥ ಎಸ್.ಕೆ.

Leave a Reply

Your email address will not be published. Required fields are marked *