ಕೂಡ್ಲಿಗಿ ತಾಲೂಕಿನ ಹಾರಕಬಾವಿ ನ್ಯಾಯಬೆಲೆ ಅಂಗಡಿಯಲ್ಲಿ ಅನ್ಯಾಯ–ಕಣ್ಣು ಮುಚ್ಚಿ ಕುಳಿತ ಅಧಿಕಾರಿ–
ಹಾರಕಬಾವಿ:ನ್ಯಾಯಬೆಲೆ ಅಂಗಡಿಯಲ್ಲಿ ಅನ್ಯಾಯ-ಕಣ್ಣು ಮುಚ್ಚಿ ಕುಳಿತ ಅಧಿಕಾರಿ-
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿದಡೆಗಳಲ್ಲಿ,ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಯಲ್ಲಿ ಭಾರೀ ಅನ್ಯಾಯ ಜರುಗುತ್ತಿರುವುದಾಗಿ ನೂರಾರು ದೂರುಗಳಿವೆ. ಆದ್ರೆ ಅದಕ್ಕೆ ಸಾಕಷ್ಟು ಸಾಕ್ಷಿಧಾರ ಅತ್ಯವಿದೆ ಅಗತ್ಯ ಸಾಕ್ಷಾಧಾರಗಳ ಸಮೇತ ಅಗತ್ಯ ವೀಡಿಯೋ ಫೋಟೋ ದಾಖಲುಗಳ ಸಮೇತ,ದೂರು ನೀಡಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ಕಣ್ಣು ತೆರೆಸುವ ಪ್ರಾಮಾಣಿಕ ಪ್ರಯತ್ನ ಮಾಡಬಹುದಾಗಿದೆ. ಇಂತಹದೊಂದು ಪ್ರಯತ್ನ ಇದಾಗಿದ್ದ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹಾರಕಬಾವಿ ಗ್ರಾಮದಲ್ಲಿನ, ನ್ಯಾಯ ಬೆಲೆ ಆಂಗಡಿಯಲ್ಲಾಗುವ ಅನ್ಯಾಯದ ವಿರುದ್ದ ಗ್ರಾಮಸ್ಥರಿಂದ ಕೇಳಿಬಂದ ದೂರು ಇದಾಗಿದೆ. ಕೂಡ್ಲಿಗಿ ತಾಲೂಕು ಹಾರಕಬಾವಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಿಸುವಲ್ಲಿ ಅನ್ಯಾಯ ಜರುಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ, ಲಾಕ್ಡೌನ್ ಹಿನ್ನೆಲೆ ಸರ್ಕಾರ ಉಚಿತ ಪಡಿತರ ವಿತರಣೆಗೆ ಆದೇಶಿಸಿದೆ ಆದ್ರೆ ಇಲ್ಲಿ ಎಬ್ಬೆಟ್ಟು ಕೊಟ್ಟು ರಸೀತಿ ಕೊಡೋಕೆ ಹಣ ಪಡೆಯುತ್ತಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಕೆಲವು ಬಾರಿ ಅಕ್ಕಿಯನ್ನ ಖಾಸಗೀ ಯ ಅಂಗಡಿಗೆ ಕಾಳಸಂತೆಯಲ್ಲಿ ಮಾರಿಕೊಳ್ಳುತ್ತಾರೆ. ಎಲ್ಲೆಡೆ ಕೊರೊನಾ ವೈರಸ್ ಆವರಿಸಿಕೊಂಡಿದ್ದು ಲಾಕಾ ಡೌನ್ ನಿಂದಾಗಿ ಜನ ಸಂಕಷ್ಟದಲ್ಲಿದ್ದಾರೆ.ಇಂತಹ ಸಂಕಷ್ಟದಲ್ಲಿ ಬಡವರ ಅಕ್ಕಿಗೆ ನ್ಯಾಯಬೆಲೆ ಅಂಗಡಿಯವರು ಕನ್ನ ಹಾಕುತ್ತಿರುವುದು ನಾಚಿಗೇಡು ಸಂಗತಿಯಾಗಿದೆ.ಹಾರಕಬಾವಿ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ರಮ ನಡೆಸಲಾಗುತ್ತಿದೆ,ಮತ್ತು ಗ್ರಾಹಕರಿಗೆ ಘೋರ ಅನ್ಯಾಯ ಮಾಡಲಾಗುತ್ತಿದೆ ಎಂಬ ಹಲವು ದೂರುಗಳನ್ನು ಗ್ರಾಮಸ್ಥರು ನೀಡಿದ್ದಾರೆ.ಶೀಘ್ರವೇ ಸಂಬಂಧಿಸಿದ ಆಧಿಕಾರಿಗಳು ಪರಿಶೀಲಿಸಿ ವಸ್ಥು ಸ್ಥಿತಿ ಆಧರಿಸಿ ಸೂಕ್ತ ಕ್ರಮ ಜರುಗಿಸಬೇಕಿದೆ,
ಇವರು ಅಕ್ಕಿ ವಿತರಣೆಯಲ್ಲಿ ಭಾರೀ ಮೋಸ ಮಾಡುತ್ತಿದ್ದಾರೆ ಎಂದು ಪಡಿತರ ಚೀಟಿ ಹೊಂದಿರುವ ಕೆಲ ಕುಟುಂಬದವರು ಗಂಭೀರವಾಗಿ ಆರೋಪ ಮಾಡಿದ್ದಾರೆ. ಕೆಲವೆಡೆಯ ನ್ಯಾಯ ಬೆಲೆ ಅಂಗಡಿ ಗಳಲ್ಲಿ ಪಡಿತರ ಚೀಟಿದಾರರಿಗೆ, ಸರ್ಕಾರ ನಿಗದಿಪಡಿಸಿದ ಪ್ರಮಾಣಕ್ಕಿಂತ ಕಡಿಮೆ ತೂಕದ ಧಾನ್ಯ ವಿತರಣೆಮಾಡಲಾಗುತ್ತಿದೆ ಎಂಬ ದೂರುಗಳಿವೆ.ಅಧಕಾರಿಗಳು ಮೂಕರಂತೆ ಕಿವುಡರಂತೆ ಕುರುಡೆಂತೆ ವರ್ತಿಸುತ್ತಿದ್ದಾರೆ. ಇದನ್ನು ಖಂಡಿಸುವುದಾಗಿ ವಂದೇ ಮಾತರಂ ಜಾಗೃತಿ ವೇದಿಕೆ ಪದಾಧಿಕಾರಿಗಳು ಹೇಳಿಕೆ ನೀಡಿದ್ದಾರೆ.ಸಾರ್ವಜನಿಕರಿಗೆ ಆದ ಅನ್ಯಾಯವನ್ನ ಖಂಡಿಸಿ ನ್ಯಾಯ ಬೆಲೆ ಅಂಗಡಿಯರನ್ನ ಪ್ರೆಶ್ನೆ ಮಾಡಿದರೆ,ಕೆಲವರು ಉತ್ತರಿಸದೇ ಅವರು ಮೂರ್ಖ ಕಿಡಿಗೇಡಿಗಳನ್ನ ಪ್ರೆಶ್ನಿಸುವವರ ವಿರುದ್ಧ ಛೂ ಬಿಡುತ್ತಾರೆ.ದೊಂಬೆ ಎಬ್ಬಸಿ ಎತ್ತಿ ಕಟ್ಟುವ ಪ್ರಯತ್ನ ಮಾಡುತ್ತಾರೆ ಎಂದು ಕೆಲವೆಡೆಯ ಗ್ರಾಮಸ್ಥರು ತಮ್ಮಲ್ಲಿ ಹೇಳಿಕೊಂಡಿರುವುದಾಗಿ ವೇದಿಕೆ ಪದಾಧಿಕಾರಿಗಳು ಆರೋಪಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಮೇರೆಗರ ಅನ್ಯಾಯದ ವಿರುದ್ಧ ಕಾನೂನಿನ ಚೌಕಟ್ಟಲ್ಲಿ ಹೋರಾಟ ನಡೆಸುತ್ತಿದ್ದು, ಕೆಲ ನ್ಯಾಯ ಬೆಲೆ ಅಂಗಡಿಯವರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸದೇ ಅನುಚಿತವಾಗಿ ನಡೆದುಕೊಳ್ಳುತ್ತಿದ್ದು, ಅಗತ್ಯ ಸಾಕ್ಷಿ ಪುರಾವೆ ಸಮೇತ ಎಸ್ಪಿ ಡಿಸಿರವರಿಗೆ ಆವರೆಲ್ಲರ ವಿರುದ್ಧ ದೂರು ನೀಡಲಾಗುವುದು ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ. ಮತ್ತು ಪಡಿತರ ವಿತರಣೆಗೆಂದು ಸರಬರಾಜು ಮಾಡಿದ ಆಹಾರಧಾನ್ಯವನ್ನು,ಕೆಲವೊಮ್ಮೆ ಬೇರೆಡೆ ಅಕ್ರಮವಾಗಿ ದಾಸ್ತಾನು ಮಾಡುವುದು ಸೇರಿದಂತೆ ಹಲವು ಗಂಭೀರ ಆರೋಪಗಳು ಹಲವು ನ್ಯಾಯಬೆಲೆ ಅಂಗಡಿ ಮಾಲಿಕರ ವಿರುದ್ಧ ದೂರು ಕೇಳಿಬಂದಿವೆ. ಈ ಸಂಬಂಧ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ ಆದರೆ ಪ್ರಯೋನವಾಗಿಲ್ಲ ಎಂದು ದೂರಿದ್ದಾರೆ. ಅಧಿಕಾರಿಗಳು ಗಂಭೀರ ಶಿಕ್ಷೆ ನೀಡುತ್ತಿಲ್ಲದ ಕಾರಣ ನ್ಯಾಯಬೆಲೆ ಅಂಗಡಿ ಮಾಲೀಕರು ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಮ್ಮ ಚಾಳಿ ಮುಂದುವರೆಸಿದ್ದಾರೆ ಎಂದು ಗ್ರಾಮಸ್ಥರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಬಡವರ ಅಕ್ಕಿ ಕದ್ದು ತಿನ್ನೋ ಇಂತಹ ಹೆಗ್ಗಣಗಳಿಗೆ ಜೈಲುವಾಸ ದೊರೆಯುವಂತಹ ಕಠಿಣ ಶಿಕ್ಷೆಯಾಗಬೇಕು,ಅವರ ವಿರುದ್ಡ ಕಠಿಣ ಕ್ರಿಮಿನಲ್ ಪ್ರಕರಣ ದಾಖಲಿಸುವಂತಾಗಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಸಿದ್ದಾರೆ. ಉಚಿತವಾಗಿ ವಿತರಿಸುವಂತೆ ಸರ್ಕಾರ ಆದೇಶಿಸಿದೆಯಾದರೂ ಪಾಲಿಸುತ್ತಿಲ್ಲ ಆದೇಶ ಉಲ್ಲಂಘಿಸಿ, ಪಡಿತರ ಕಾರ್ಡ್ದಾರರಿಂದ 10-20 ₹ಗಳನ್ನು ಕೆಲವು ನ್ಯಾಯಬೆಲೆ ಅಂಗಡಿಯವರು ವಸೂಲಿ ಮಾಡುತ್ತಿದ್ದಾರೆ.ಹಾಗೂ ತೂಕದಲ್ಲಿ ಬಹಳ ವ್ಯತ್ಯಾಸ,ನಿಗದಿತ ಸಮಯದಲ್ಲಿ ಪಡಿತರ ವಿತರಣೆ ಮಾಡದೇ ಕಾರಣ ವಿಲ್ಲದೆ ವಿಳಂಬ ಮಾಡಿ ಆಲೆದಾಡಿಸುತ್ತಾರೆ ಎಂದು ಹಲವು ಗ್ರಾಮಸ್ಥರು ವೇದಿಕೆಗೆ ದೂರಿದ್ದಾರೆ ಎಂದು ವೇದಿಕೆ ಪದಾಧಿಕಾರಿಗಳು ತಿಳಿಸಿದ್ದಾರೆ. ವಿವಿದೆಡೆಗಳಿಂದ ನೂರಾರು ದೂರು:- ಇದು ಕೇವಲ ಯಾವುದೇ ಒಂದು ಗ್ರಾಮದ ನ್ಯಾಯ ಬೆಲೆ ಅಂಗಡಿಯ ಪಡಿತರ ಪಲಾನುಭವಿಯ ಕಥೆ ವ್ಯತೆ ಮಾತ್ರವಲ್ಲ,ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ನ್ಯಾಯ ಬೆಲೆ ಅಂಗಡಿಗಳ ಪಲಾನುಭವಿಗಳ ಕಡೆಗಳಿಂದ ಕೇಳಿಬರುತ್ತಿರುವ ದೂರುಗಳಾಗಿವೆ. ಬೇಕಾ ಬಿಟ್ಟಿ ಹಣ ವಸೂಲಿ,ಅಕ್ಕಿ ಕಡಿಮೆ ತೂಕದಲ್ಲಿ ಅಕ್ಕಿ ವಿತರಣೆ,ಕಾಳಸಂತೆಯಲ್ಲಿ ಮಾರಾಟ,ಗ್ರಾಹಕರೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ದುಂಡಾವರ್ತನೆ ಅರೋಪ. ಸೇರಿದಂತೆ ಹಲವು ಗಂಭಿರ ಆರೋಪಗಳು ಕೇಳಿಬಂದಿವೆ, ತಹಶಿಲ್ದಾರರು ಈ ಸಂಬಂಧಿಸಿದಂತೆ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳಿಂದ ತಾಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳನ್ನ ಪರಿಶೀಲನೆ ನಡೆಸಬೇಕಿದೆ, ಫಲಜದಲ್ಲಿ ಮಾಹಿತಿ ಭಹಿರಂಗಪಡಿಸುವಂತೆ ಕ್ರಮ ಕೇಗೊಳ್ಳಬೇಕಿದೆ. ಪ್ರತಿ ತಿಂಗಳು ಸರ್ಕಾರ ವಿತರಿಸುವ ಪಡಿತರ ಸಾಮಾಗ್ರಿ ಪ್ರಮಾಣ ವಿವರ ಬಗ್ಗೆ ಆಯಾ ತಾಲೂಧಿಕಾರಿಗಳು ಪತ್ರಿಕೆ ಪ್ರಕಟಣೆ ನೀಡಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕಿದೆ.ಸ್ಥಳೀಯರ ಅಭಿಪ್ರಾಯ ಮಾಹಿತಿ ಪಡೆದು, ತಪ್ಪಿತಸ್ಥರ ದುರ್ನಡತೆಗೆ ಅಕ್ರಮ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ವಂದೇ ಮಾತರಂ ಜಾಗೃತಿ ವೇದಿಕೆ ಸೇರಿದಂತೆ, ವಿವಿದ ಸಂಘಟನೆಗಳ ಪದಾಧಿಕಾರಿಗಳು ಈ ಮೂಲಕ ತಾಲೂಕಾಡಳಿತಕ್ಕೆ ಒತ್ತಾಯಿಸಿದ್ದಾರೆ. ಮಾಹಿತಿ ಕೊಡಿ:-ಲಾಕ್ ಡೌನ್ ಸಂದರ್ಭದಲ್ಲಿಯೂ ಕೆಲವು ನ್ಯಾಯಬೆಲೆ ಅಂಗಡಿಯವರು, ಹೆಗ್ಗಣಗಳಂತೆ ಬಡವರ ಆಹಾರ ಪದಾರ್ಥ ಕದಿಯುತ್ತಿದ್ದಾರೆ ಎಂಬ ದೂರುಗಳಿದ್ದು.ಅಂತಹ ಕಳ್ಳ ಖದೀಮ ಹೆಗ್ಗಣಗಳನ್ನು ಹಿಡಿಯುವಂತಹ ವರದಿ ಮಾಡಲು ಸಂಕಲ್ಪ ತೊಟ್ಟಿದ್ದು.ಕಾರಣ ಅನ್ಯಾಯಕ್ಕೊಳಗಾದ ಪಡಿತರ ಪಲಾನುಭವಿಗಳು,ತಮಗೆ ಆದ ಅನ್ಯಾಯದ ಬಗ್ಗೆ ಹಾಗೂ ನ್ಯಾಯ ಬೆಲೆ ಅಂಗಡಿಯವರು ಮಾಡುತ್ತಿರು ಅನ್ಯಾಯದ ಬಗ್ಗೆ ಹಾಗೂ ಅಕ್ರಮ ಗಳ ಬಗ್ಗೆ ದೂರುಗಳಿದ್ದಲ್ಲಿ. ಅದು ನಿಜವಾಗಿದ್ದಲ್ಲಿ ಮಾತ್ರ ಸಾಕಷ್ಟು ಸಾಕ್ಷಷ್ಟು ಸಾಕ್ಷ್ಯ, ಫೋಟೋ,ವೀಡಿಯೋ, ವಿವರಗಳೊಂದಿಗೆ:-ವಂದೇ ಮಾತರಂ ಎಂದು ಮೆಸೇಜ್ ಮಾಡಿ-9008937428 ವಾಟ್ಸ್ ಪ್ ಗೆ ದೂರು ತಲುಪಿಸಬಹುದಾಗಿದೆ. ಅಗತ್ಯವಿದ್ದಲ್ಲಿ ಹೆಸರು ವಿಳಾಸವನ್ನು ಯಾವುದೇ ಕಾರಣಕ್ಕೆ ಬಹಿರಂಗ ಪಡಿಸಲಾಗುವುದಿಲ್ಲ.
ವರದಿ – ಚಲುವಾದಿ ಅಣ್ಣಪ್ಪ