ಕೋವಿಡ್ ನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ 3ಲಕ್ಷ ರೂ ಪರಿಹಾರ. ಉಚಿತ ಶಿಕ್ಷಣ.
ತಿರುವನಂತಪುರಂ : ರಾಜ್ಯದಲ್ಲಿ ಕೊವಿಡ್ 19 ಸೋಂಕಿನಿಂದ ಪಾಲಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಒಂದು ಬಾರಿಗೆ 3 ಲಕ್ಷ ರೂ.ಪರಿಹಾರ ನೀಡಲಾಗುವುದು. ಹಾಗೇ 18ವರ್ಷ ತುಂಬುವವರೆಗೆ ಪ್ರತಿ ತಿಂಗಳೂ 2000 ರೂ. ಕೊಡಲಾಗುವುದು. ಹಾಗೇ ಅವರ ಪದವಿಯವರೆಗಿನ ಶಿಕ್ಷಣದ ವೆಚ್ಚವನ್ನೂ ಸರ್ಕಾರವೇ ಭರಿಸಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಕೊವಿಡ್ 19 ಎರಡನೇ ಅಲೆಯಲ್ಲಿ ಅದೆಷ್ಟೋ ಮಕ್ಕಳ ಪಾಲಕರು ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ ಆ ಮಕ್ಕಳೆಲ್ಲ ತಮ್ಮ ಕುಟುಂಬದವರೊಂದಿಗೆ ವಾಸವಾಗಿದ್ದಾರೆ. ಹೀಗೆ ಅನಾಥರಾದ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಅವರ ಶಿಕ್ಷಣದ ಖರ್ಚು ವೆಚ್ಚಗಳು ರಾಜ್ಯ ಸರಕಾರ ಭರಿಸಲಿದೆ. ಸದ್ಯ ಕೇರಳದಲ್ಲಿ 10 ಕ್ಕೂ ಹೆಚ್ವು ಮಕ್ಕಳು ತಂದೆ – ತಾಯಿಗಳನ್ನು ಕಳೆದುಕೊಂಡಿದ್ದಾರೆ ಎಂದು ವಿವರಿಸಿದರು. ಪ್ರತಿಯೊಂದು ರಾಜ್ಯದಲ್ಲಿ ಹಲವಾರು ಯೋಜನೆಗಳು ಹಮ್ಮಿಕೊಂಡಿದ್ದ ಸರ್ಕಾರ, ನಮ್ಮ ಕರ್ನಾಟಕ ಸರ್ಕಾರ ಯಾಕೆ ಹೀಗೆ ಸುಮ್ನೇ ಕುಳಿತಿದೆ ಎಂಬುಹುದು ಪ್ರಜ್ಞವಂತರ ಪ್ರಶ್ನೆಯಾಗಿದೆ.
ವರದಿ – ಸಂಪಾದಕೀಯ