ತಾವರಗೇರಾ ಪಟ್ಟಣವು ಮೋದಲಿನಂತೆ ದಿಗ್ಭಂದನ ಹಾಕಿದ ಪಿ.ಎಸ್.ಐ.ಗೀತಾಜಂಲಿ ಶೀಂಧೆಯವರು.
ಕರ್ನಾಟಕ ರಾಜ್ಯಾದಂತ ಸರ್ಕಾರ ಹೋರಡಿಸಿರುವ ಲಾಕಡೌನ್ ಆದೇಶದಂತೆ ಇಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣವು ಕೆಲವು ದಿನಗಳಿಂದ ಲಾಕಡೌನ್ ನಿಮೀತ್ಯದಲ್ಲಿ ಠಾಣೆಯ ಪಿ.ಎಸ್.ಐ.ಗಳಾದ ಗೀತಾಂಜಲಿ ಶಿಂಧೆಯವರು ತಾವರಗೇರಾ ಠಾಣೆಯಿಂದ ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣಕ್ಕೆ ವರ್ಗಾವಣೆಗೊಂಡಿದ್ದರು, ಇದರ ನಿಮೀತ್ಯವಾಗಿ ತಾವರಗೇರಾ ಪಟ್ಟಣದ ಸಾರ್ವಜನಿಕರು ಹಗಲು/ರಾತ್ರಿ ಎನ್ನದೇ ಪದೆ ಪದೇ ರಸ್ತೆಗೆ ಇಳಿಯುತ್ತಿದ್ದರು, ಕೆಲ ಪೊಲೀಸ್ ಅಧಿಕಾರಿಗಳು ರಸ್ತೆಗೆ ಬಂದ ನಂತರ ಸಾರ್ವಜನಿಕರು ಚದುರುತ್ತಿದ್ದರು. ಆದರೇ ಇಂದು ಬೆಳಗಿನ ಜಾವೆಯಿಂದ ತಾವರಗೇರಾ ಪಟ್ಟಣವು ಸ್ಥಬ್ಧವಾಗಿರುವುದು ವಿಶೇಷವಾಗಿದೆ. ಕಾರಣ ಇವತ್ತು ಬೆಳಗಿನ ಜಾವದಿಂದ ಠಾಣೆಯ ಪಿ.ಎಸ್.ಐ.ಗಳಾದ ಗೀತಾಂಜಲಿ ಶಿಂಧೆಯವರು ಸಿವೀಲ್ ಉಡುಪುಗಳಲ್ಲಿ ಬೈಕ ಮೇಲೆ ಬಂದು ರಸ್ತೆಗೆ ಇಳಿದ ಸಾರ್ವಜನಿಕರನ್ನ ಚದುರಿಸಿದರು. ಒಟ್ಟಿನಲ್ಲಿ ತಾವರಗೇರಾ ಪಟ್ಟಣ ಹಾಗೂ ಹೋಬಳಿಯ ಜನತೆ ಪಿ.ಎಸ್.ಐ. ಗೀತಾಂಜಲಿ ಶಿಂಧೆಯವರು ರೋಡಿಗೆ ಇಳಿದರೆ ಸಾಕು ಸಾರ್ವಜನಿಕರ ಮನದಲ್ಲಿ ನಡುಕ ಉಂಟಾಗುತ್ತೆ. ರಸ್ತೆಗೆ ಇಳಿದ ಸಾರ್ವಜನಿಕರಿಗೆ ಪೋಲೀಸರು ಕಾನೂನಿನ ಮನವರಿಕೆ ಪ್ರಜ್ಞೆ ಮಾಡಿ ಸರ್ಕಾರ ನಿಡಿರುವ ಈ ಲಾಕಡೌನ್ ನಮಗಾಗಿ ಅಲ್ಲಾ ನಮ್ಮೆಲ್ಲರ ಓಳಿತುಗಾಗಿ ಹಾಗಾಗಿ ಈ ಪಾಲನೆ ಪ್ರತಿಯೊಬ್ಬರು ಪಾಲಿಸಬೇಕು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ ಕಳಿಸುತ್ತಿದ್ದರು. ಆದರೇ ಇಂದು ಬೆಳಂ ಬೆಳಗ್ಗೆ ತಾವರಗೇರಾ ಪಟ್ಟಣದ ಠಾಣೆಯ ಪಿ.ಎಸ್.ಐ. ಗೀತಾಂಜಲಿ ಶಿಂಧೆಯವರು ತಾವರಗೇರಾ ಪಟ್ಟಣದ ಮುಖ್ಯ ರಸ್ತೆಯಾದ ಶ್ರೀ ಬಸವೇಶ್ವರ ಸರ್ಕಲ್ ನಲ್ಲಿ ಬಂದು ತಮ್ಮ ಪೊಲೀಸ್ ಸಿಬ್ಬಂದಿಗಳು ಹಾಗೂ ಗ್ರಹ ರಕ್ಷಕ ಧಳದ ಜೊತೆಗೆ ಇಂದು ಕಾರ್ಯನಿರ್ವಹಿಸಿದರು. ಒಟ್ಟಿನಲ್ಲಿ ತಾವರಗೇರಾ ಪಟ್ಟಣದ ಪ್ರಮುಖ ರಸ್ತೆಗಳು ಬಸ್ ನಿಲ್ದಾಣ, ಡಾ..ಅಂಬೇಡ್ಕರ್ ನಗರ, ಶ್ರೀ ಬಸವೇಶ್ವರ ನಗರ, ಶ್ರೀ ಶ್ಯಾಮೀದಲಿ ಸರ್ಕಲ್, ಹಾಗೂ ಗಾಂಧಿ ಚೌಕ್, ಐ.ಬಿ. ಸರ್ಕಲ್ ಈ ಮೊದಲಾದ ಜನಜಂಗುಳ್ಳಿಯ ನಗರ ಹಾಗೂ ಸರ್ಕಲ್ ನಲ್ಲಿ ರಣ ರಣ (ಬೀಕೊ) ಎನ್ನುವ ದೃಶ್ಯ ಕಂಡು ಬಂತ್ತು, ತಾವರಗೇರಾ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಚ್ಚುಕಟ್ಟಾಗಿ ಪೊಲೀಸ್ ಇಲಾಖೆ ಹಾಗೂ ಗ್ರಹ ರಕ್ಷಕ ಧಳದವರು ಕಟ್ಟು ನಿಟ್ಟಿನ ಕ್ರಮದಿಂದ ಇಂದು ತಾವರಗೇರಾ ಪಟ್ಟಣ ಮೋದಲನೆ ಹಾಗೇ ತಲ್ಲಣ ವಾತಾವರಣದಲ್ಲಿದಿದ್ದು ಕಂಡು ಬಂತು.
ವರದಿ – ಮಂಜುನಾಠ ಎಸ್.ಕೆ.