ತಾವರಗೇರಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕರಾದ ಶ್ರೀ ಅಮಾರೇಗೌಡ ಎಲ್. ಪಾಟೀಲ್ ಬಯ್ಯಾಪೂರ ಭೇಟೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇಮನ್ನಾಪೂರ ಗ್ರಾಮದ ಸರ್ಕಾರಿ ಆಸ್ಪತ್ರೆ ಹಾಗೂ ತಾವರಗೇರಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟೆ ನೀಡಿ ಪರಿಶೀಲನೆ ಮಾಡಿದರು. ಅಲ್ಲಿ ಆರೈಕೆ ಮಾಡುತ್ತಿದ್ದ ಆರೋಗ್ಯ ಇಲಾಖೆ ಸಿಬ್ಬಂದಿಯವರಿಗೆ ಮಾತನಾಡಿ ಅಲ್ಲಿ ಎಷ್ಟು ಜನರು ಇದ್ದಾರೆ ಅವರೆಲ್ಲರ ಆರೋಗ್ಯದ ಬಗ್ಗೆ ಹಾಗೂ ವಸತಿ ನಿಲಯದಲ್ಲಿನ ಎಲ್ಲ ವ್ಯವಸ್ಥೆಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಿದ್ದರ. ಕೊರೋನ ಕೋವಿಡ್-೧೯ ನಿಯಂತ್ರಣಕ್ಕೆ ಪಣತೊಟ್ಟು ಜನರಿಗೆ ಜಾಗೃತಿ ಮೂಡಿಸುವ ಮೂಲಕ ಮಾನವಿತೆಗೆ ಮೆರೆದರು. ಕರ್ನಾಟಕ ರಾಜ್ಯಾದಂತ ಈಗಾಗಲೇ ಮನೆ ಮಾಡಿಕೊಂಡಿರುವ ಕರೋನ ರೋಗದ ವಿರುದ್ಧ ಸರ್ಕಾರ ಮುಂಜಾಗ್ರತೆ ನಿಯಮದಂತೆ ಸದ್ಯ ನಾವು ನೋಡಿದಾಗೆ ಈ ಕರುಣೆವಿಲ್ಲದ ಕರೋನಾಗೆ ನಾವು ನೀವೆಲ್ಲರು ಜಾಗೃತಿ ವಹಿಸೋಣ, ಸಮಾಜದ ಆರೋಗ್ಯದ ಏಳಿಗೆಗೆ ಸದಾ ಸಿದ್ದವಿರೋಣ, ಅನಾವಶ್ಯಕವಾಗಿ ಬಿದಿ ಬಿದಿಗೆ ಅಲೆದಾಡದಿರಿ, ಕಾರಣವಿಲ್ಲದೆ ರಸ್ತೆಗೆ ಇಳಿಯಬೇಡಿ ನಿಮ್ಮೇಲ್ಲರ ಆರೋಗ್ಯವೆ ನಮಗೆ ಅಂತೀಮ ರಕ್ಷೆ ಎನ್ನುತ್ತ ಹೋರಟರು. ದಕ್ಷ ಕರ್ತವ್ಯ, ಪ್ರಾಮಾಣಿಕತೆ, ಸರಳತನದಿಂದ ಮಾನವಿಯ ಗುಣಗಳನ್ನು ಅಳವಡಿಸಿಕೊಂಡ ಕುಷ್ಟಗಿ ಕ್ಷೇತ್ರದ ಅಭಿವೃದ್ದಿಗೆ ಹಾಗೂ ಕೊರೊನಾ ಮುಕ್ತ ಮಾಡುವಲ್ಲಿ ಪಣ ತೊಟ್ಟು ಕುಷ್ಟಗಿ ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೆ ಬೇಟೆ ನೀಡಿ ಪರಿಶೀಲನೆ ಮಾಡುತ್ತಿರುವುದು ಹೇಮ್ಮೆಯ ವಿಷಯ. ಒಟ್ಟಿನಲ್ಲಿ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಖುದ್ದು ತಾವೇ ಪ್ರತಿಯೊಂದು ಆಸ್ಪತ್ರೆಗಳಿಗೆ ಬೇಟೆ ನೀಡಿ ಪರಿಶೀಲಿಸುವುದು ಸದ್ಯ ಇವರ ಕಾಯಕವಾಗಿದೆ. ಇದರಿಂದ ಮತ್ತಷ್ಟು ಜನರಿಗೆ ಹತ್ತಿರವಾಗಿರುವುದಂತ್ತು ಸತ್ಯವಾಗಿದೆ. ಜನತೆಗೆ ತಮ್ಮ ಸರಳತೆಯಿಂಸ ಜನ ಮನ ಗೆದ್ದು ಸಾರ್ವಜನಿಕರ ಪ್ರೀತಿಗೆ. ಸರಳ ವ್ಯಕ್ತಿತ್ವ ಮತ್ತು ಮಾನವಿಯ ಗುಣಗಳನ್ನು ಹೊಂದಿರುವ ಪ್ರಭಾರಿ ನಾಯಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರದ ಮೂಖ್ಯ ವೈದ್ಯಾಧಿಕಾರಿಗಳಾದ ಡಾ.ಕಾವೇರಿ ಎ.ಎಂ.ಓ. ಹಾಗೂ ಪ್ರಶಾಂತ ತಾಳಿಕೋಟಿ ಇತರ ಸಿಬ್ಬಂದಿಗಳು ಪಾಲುಗೊಂಡಿದ್ದರು.
ವರದಿ – ಅಮಾಜಪ್ಪ ಹೆಚ್.ಜುಮಾಲಾಪೂರ