ಜಲ್ ಜೀವನ ಮಿಷನಡಿಯಲ್ಲಿ ಕುಡಿಯುವ ನೀರು ಪೂರೈಕೆಗೆ 1988 ಕೋಟಿ ರೂ. ಬಿಡುಗಡೆ ಶಾಸಕ ಬಸವನಗೌಡ ತುರ್ವಿಹಾಳ ಸ್ಪಷ್ಟನೆ.

Spread the love

ಜಲ್ ಜೀವನ ಮಿಷನಡಿಯಲ್ಲಿ ಕುಡಿಯುವ ನೀರು ಪೂರೈಕೆಗೆ 1988 ಕೋಟಿ ರೂ. ಬಿಡುಗಡೆ ಶಾಸಕ ಬಸವನಗೌಡ ತುರ್ವಿಹಾಳ ಸ್ಪಷ್ಟನೆ.

ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದ ಚುನಾವಣೆಯಲ್ಲಿ ಜಿಂದಾಜಿದ್ದಿನ ಕಾಳಗದಲಲ್ಇ ಜಯ ಬೇರಿ ಸಾಧಿಸಿದ ನೂತನ ಶಾಸಕರಾದ ಬಸವನಗೌಡ ತುರ್ವಿಹಾಳರವರು ಮಸ್ಕಿ ಕ್ಷೇತ್ರಕ್ಕೆ ಒಳಗೊಂಡಂತೆ ಜೊತೆಗೆ ಜಿಲ್ಲೆಯ ಇತರೆ ಕ್ಷೇತ್ರಗಳಿಗೆ ಕುಡಿಯುವ ನೀರಿನ ಯೋಜನೆಗೆ 1988 ಕೋಟಿ ರೂಪಾಯಿ ಹಣವನ್ನು ಸರ್ಕಾರ ಬಿಡುಗಡೆ ಮಾಡಿದ್ದು. ಜನರ ಪರವಾಗಿ ಕೃತಜ್ಞತೆಗಳು ಹೇಳುವೆ ಎಂದು ಶಾಸಕ ಆರ್ ಬಸನಗೌಡ ತುರುವಿಹಾಳ ಹೇಳಿದರು., ಮಸ್ಕಿ ಪಟ್ಟಣದ ಶಾಸಕರ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಲ ಜೀವನ ಮಿಷನ್ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಈ ಅನುದಾನ ಬಿಡುಗಡೆ ಮಾಡಲಾಗಿದ್ದು, ತಾಲೂಕಿನ ಹಲವು ಗ್ರಾಮಗಳಿಗೆ ಯೋಜನೆ ಅಡಿಯಲ್ಲಿ ಶುದ್ಧ ಕುಡಿಯುವ ನೀರಿನ ಭಾಗ್ಯ ದೊರೆತಿದೆ.  ಹಲವು ವರ್ಷಗಳಿಂದ ಮಸ್ಕಿ ತಾಲೂಕು ಸುತ್ತಮುತ್ತಲಿನ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ಸೌಕರ್ಯಗಳು ಇರಲಿಲ್ಲ ಆದರೆ ಈಗ ಬಹುಕೋಟಿ ಮೋತ್ತ ಬಿಡುಗಡೆಯಿಂದ ಇನ್ನೂ ಮೂರು ವರ್ಷದಲ್ಲಿಯೇ ಈ ಭಾಗದಲ್ಲಿ ಎಲ್ಲಾ ಹಳ್ಳಿಗಳಿಗೆ ಶುದ್ದ ಕುಡಿಯುವ ನೀರು ದೊರೆಯಲಿದೆ ಎಂದು ಹೇಳಿದರು. ಅಗತ್ಯ ಕ್ರಮ ಮಸ್ಕಿಯಲ್ಲಿ ಕೋವಿಡ್- 19 ನಿಯಂತ್ರಣಕ್ಕಾಗಿ ಅಧಿಕಾರಿಗಳ ಸಭೆ ಮಾಡಲಾಗಿದ್ದು ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳಲು ಸೋಂಕಿತರು ಆಯ್ಕೆ ಆರೈಕೆ ಸೂಕ್ತ ಚಿಕಿತ್ಸೆಗಾಗಿ ನಿರ್ದೇಶನ ನೀಡಲಾಗಿದೆ.  ಗ್ರಾಮಮಟ್ಟದಲ್ಲಿ ಕೊರೊನಾ ಹಬ್ಬಾದಂತೆ ಗ್ರಾಮ ಮೊದಲು ಫೋರ್ಸ್ರಚನೆ ಮಾಡಲಾಗಿದ್ದು. ಸ್ವಚ್ಛತೆ ಕಾಪಾಡಿಕೊಳ್ಳುವುದು,ಎಲ್ಲಾ ಕಡೆ ಸ್ಯಾನಿಟೈಸರ್ ಮಾಡುವುದು ಸೇರಿ ಎಲ್ಲಾ ರೀತಿಯಿಂದಲೂ ಬಿಗಿ ಕ್ರಮ ಕೈಗೊಳ್ಳಲಾಗಿದೆ ಎಂದರು. ಪ್ರಮಾಣವಚನ ಸ್ವೀಕರಿಸಲು ಕಾರಣಾಂತರದಿಂದ ಸಮಸ್ಯೆಯಾಗಿದ್ದು ಸ್ಪೀಕರ್ ಅವರಿಗೆ ಕೋವಿಡ್- 19 ಪಾಸಿಟಿವ್ ಹಿನ್ನೆಲೆ ಶಾಸಕ ಸ್ಥಾನಕ್ಕೆ ಪ್ರಮಾಣ ವಚನ ಸ್ವೀಕಾರಕ್ಕೆ ವಿಳಂಬವಾಗಿದೆ. ಇನ್ನು ಕೆಲವು ದಿನಗಳಲ್ಲಿ ಪ್ರಮಾಣವಚನ ಸ್ವೀಕಾರಕ್ಕೆ ಅನುಮತಿ ಸಿಗಲಿದೆ. ಆದರೆ ಪ್ರಮಾಣ ವಚನ ಸ್ವೀಕಾರ ದವರಿಗೂ ಕಾಯದೆ ಈಗಾಗಲೇ ಕ್ಷೇತ್ರದಲ್ಲಿ ಹಲವು ರೀತಿ ಕೆಲಸ ಮಾಡಲಾಗುತ್ತದೆ.. ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಯದ್ದಲದಿನ್ನಿ , ಗ್ರಾಮೀಣ ಘಟಕ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ್ , ಶ್ರೀಶೈಲಪ್ಪ ಬ್ಯಾಳಿ , ಬಸವಂತರಾಯ ಮಟ್ಟುರ್, ಸಿದ್ದಣ್ಣ ಹೊವಿನಭಾವಿ ,ಆನಂದ್ ವೀರಾಪುರ್, ಸಿದ್ದನಗೌಡ ತುರ್ವಿಹಾಳ್, ಶಿವಣ್ಣ ನಾಯಕ್, ಇತರರು ಭಾಗಿಯಾಗಿದ್ದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *