ರೈತರ ಸಂಕಷ್ಟಕ್ಕೆ ಸ್ಪಂಧಿಸದಿದ್ದರೆ ಹೊರಾಟ–ಹಸಿರು ಸೇನೆ ಎಚ್ಚರಿಕೆ–
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು,ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದಾಗಿ ಹಾಗೂ ಅವೈಜ್ಞಾನಿಕ ಮಾರುಕಟ್ಟೆ ನೀತಿಯಿಂದಾಗಿ, ರೈತರು ನಿರಂತರ ಸಂಕಷ್ಟಕ್ಕೀಡಾಗಿದ್ದಾರೆಂದು ರೈತ ಸಂಘದ ಮುಖಂಡರು ಆಕ್ರೋಶ ವ್ಯೆಕ್ತಪಡಸಿದ್ದಾರೆ. ಲಾಕ್ ಡೌನ್ ರೈತರಿಗೆ ಮಾರಕವಾಗಿದ್ದು ನಿಯಮಗಳಲ್ಲಿ ರೈತರಿಗೆ ಸಂಪೂರ್ಣ ವಿನಾಯಿತಿ ನೀಡಬೇಕಿದೆ,ಬೆಳೆದ ಬೆಳೆ ಮಾರಲು ಅನುವು ಮಾಡಿ ಕೊಡಬೇಕೆಂದು ರೈತರು ಜಿಲ್ಲಾಡಳಿತಕ್ಕೆ ಈ ಮೂಲಕ ಒತ್ತಾಯಿಸಿದ್ದಾರೆ. ಕೂಡ್ಲಿಗಿ ತಾಲೂಕಿನಲ್ಲಿ ಬೆಳೆದ ತೋಟಗಾರಿಕೆ ಬೆಳೆಗಳಿಗೆ ಪೂರಕವಾದ ಮಾರುಕಟ್ಟೆ ಶೀಘ್ರವಾಗಿ ಸರ್ಕಾರ ಕಲ್ಪಿಸಬೇಕಿದೆ, ಕೂಡ್ಲಿಗಿಯಲ್ಲಿ ತೋಟಗಾರಿಕಾ ಬೆಳೆಗಳ ಮಾರುಕಟ್ಟೆ ನಿರ್ಮಾಣಕ್ಕೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಜಿಲ್ಲಾಡಳಿತ ಹಾಗೂ ಉಸ್ಥುವಾರಿ ಸಚಿವರು ಕೂಡಲೇ ಸ್ಪಂಧಿಸಬೇಕಿದೆ ಎಂದು ರೈತರು ಈ ಮೂಲಕ ಒತ್ತಾಯಿಸಿದ್ದಾರೆ. ಬೆಳೆದ ಫಲವನ್ನು ಮಾರಾಟ ಮಾಡಲು 45ಕಿಮೀ ದೂರಿದ ಮಾರುಕಟ್ಟೆಗೆ ತೆರಳಬೇಕಿದೆ,ಅಲ್ಲಿಯ ಅವೈಜ್ಞಾನಿಕ ನಿಯಮಗಳು ರೈತರಿಗೆ ಮಾರಕವಾಗಿದ್ದು, ಕಾರಣ ಭ್ರಷ್ಟ ಮಧ್ಯವರ್ತಿಗಳಿಗೆ ಅನುಕೂಲವಿದ್ದು ರೈತರು ಲುಕ್ಸಾನು ದರಕ್ಕೆ ಫಲ ಮಾರಿ ಬಂದು ಕೈಸುಟ್ಟುಕೊಳ್ಳುವಂತಾಗಿದೆ, ಕಾರಣ ಮಾರುಕಟ್ಟೆಗೆ ತೆರಳದೇ ಫಸಲು ಸಮೇತ ಹೊಲದಲ್ಲಿಯೇ ನಾಶಮಾಡಲಾಗಿದೆ,ಈ ದುಸ್ಥಿತಿಗೆ ಸರ್ಕಾರದ ನಿರ್ಲಕ್ಷ್ಯ ಕಾರಣ ಎಂದು ನೊಂದ ರೇತರು ಅಳಲು ತೋಡಿಕೊಂಡಿದ್ದಾರೆ. ಮಾರುಕಟ್ಟೆ ನಿಯಮಗಳು ಮಾರಕವಾಗಿದ್ದು ಅಗತ್ಯ ಬದಲಾವಣೆಗಳಾಗಬೇಕಿದೆ,ಮತ್ತು ಶೀಘ್ರವೇ ಕೂಡ್ಲಿಗಿ ಯಲ್ಲಿ ಮಾರುಕಟ್ಟೆ ನಿರ್ಮಿಸಬೇಕಿದೆ. ನಿರ್ಲಕ್ಷ್ಯ ತೋರಿದ್ದಲ್ಲಿ ಲಾಜ್ ಡೌನ್ ಮುಗಿದಾ ಕೂಡಲೇ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದೆಂದು, ಹಸಿರು ಸೇನೆ ಹಾಗೂ ಕರ್ನಾಟಕ ರೈತ ಸಂಘ ಉಚ್ಚವನಹಳ್ಳಿ ಮಂಜುನಾಥ ಬಣ ಸರ್ಕಾರಕ್ಕೆ ಈ ಮೂಲಕ ಒತ್ತಾಯಿಸಿದೆ. ಜಿಲ್ಲಾಧ್ಯಕ್ಷ ದೇವರ ಮನೆ ಮಹೇಶ ನೇತೃದಲ್ಲಿ ಕೂಡ್ಲಿಗಿ ತಾಲೂಕು ಘಟಕದ ಪದಾಧಿಕಾರಿಗಳು ಹೇಳಿಕೆ ನೀಡಿದ್ದಾರೆ. ತಾಲೂಕಿನ ಬೊಪ್ಪಲಾಪುರ ಗ್ರಾಮದಲ್ಲಿ ನಷ್ಟ ದಿಂದ ನೊಂದಿರುವ ರೈತ ಬನ್ನಿ ನಾಗರಾಜರ ಹೊಲದಲ್ಲಿ ಮಾಧ್ಯಮಕ್ಕೆ ರೈತ ಮುಖಂಡರುಜಂಟಿ ಹೇಳಿಕೆ ನೀಡಿದ್ದಾರೆ.ಲಾಕ್ ಡೌನ್ ನಿಂದಾಗಿ ರೈತರು ಬೆಳೆದ ತೋಟಗಾರಿಕೆ ಬೆಳೆ ಮಾರಾಟವಾಗುತ್ತಿಲ್ಲ,ಕೂಡ್ಲಿಗಿ ಯಲ್ಲಿ ತಾಲೂಕು ಸೂಕ್ತ ಮಾರುಕಟ್ಟೆ ಅವಶ್ಯಕತೆ ಇದೆ.ಶೀಘ್ರವೇ ತಾಲೂಕಿನಲ್ಲಿ ಹೂ ತರಕಾರಿ ಸೇರಿದಂತೆ ತೋಟಗಾರಿಕಾ ಬೆಳೆಗಳ ಮಾರುಕಟ್ಟೆ ನಿರ್ಮಿಸಬೇಕಿದೆ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಹೊಲದಲ್ಲಿ ಬೆಳೆದ ತರಕಾರಿ ಹಾಗೂ ಹೂ ಸೇರಿದಂತೆ ತೋಟಗಾರಿಕಾ ಬೆಳೆಗಳು ಸಕಾಲಕ್ಕೆ ಮಾರುಕಟ್ಟೆ ಒದಗದಿರೋ ಕಾರಣ, ಫಲದೊಂದಿಗೆ ಹಾಗೇ ಗಿಡ ಸಮೇತ ನಾಶ ಮಾಡುವಂತಾಗಿದೆ ಇದು ಕೇವಲ ಒಬ್ಬ ರೈತನ ಗೋಳಲ್ಲ.ತಾಲೂಕಿನ ಜಿಲ್ಲೆಯಲ್ಲಿರುವ ಅಸಂಖ್ಯಾತ ರೈತರ ನೋವಾಗಿದೆ ಎಂದು ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ರೈತರು ಆಕ್ರೋಶ ವ್ಯೆಕ್ತಪಡಿಸಿದ್ದಾರೆ. ಅವೈಜ್ಞನಿಕ ಮಾರುಕಟ್ಟೆ ಹಾಗೂ ನಿರ್ಲಕ್ಷ್ಯ ದಿಂದಾಗಿ ರೈತರ ಬೆವರಿಗೆ ಬೆಲೆ ಸಿಗುತ್ತಿಲ್ಲ, ಬೆಳೆದ ಬೆಳೆ ಮಣ್ಣು ಪಾಲಾಗುತ್ತಿದೆ ಮತ್ತು ತಮ್ಮ ಸಾಲದ ಹೊರೆ ಏರುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಬಿತ್ತನೆ ಕಾರ್ಯ ಪ್ರಾರಂಭವಾಗಿದ್ದು ಗೊಬ್ಬರ ಬೀಜ ಕೃಷಿ ಪರಿಕರ ಸಾಮಾಗ್ರಿಗಳ ಖರೀದಿಗೆ ಮತ್ತು ಮಾರುಕಟ್ಟೆ ಸಂರ್ಪಕಕ್ಕೆ, ರೈತರು ಮಾರುಕಟ್ಟೆಗೆ ಸಂಚರಿಸುವುದು ಅನಿವಾರ್ಯವಿರುತ್ತದೆ. ಲಾಕ್ ಡೌನ್ ಜಾರಿ ಸಂದರ್ಭದಲ್ಲಿ ಪೊಲೀಸರು ರೈತರೊಂದಿಗೆ ಸ್ಪಂಧಿಸಬೇಕಿದೆ ಮತ್ತು ವಿನಾಯಿತಿ ನೀಡಬೇಕಿದೆ,ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಪೊಲೀಸ್ ಇಲಾಖೆಗೆ ಸೂಕ್ತ ನಿರ್ಧೇಶನಗಳನ್ನು ನೀಡಬೇಕಿದೆ ಎಂದು ರೈತರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.ತೋಟಗಾಕರಿಕೆ ಇಲಾಖೆಯಿಂದ ಒದಗಬೇಕಿದ್ದ, 2019ರ ಕೋವಿಡ್ ಪರಿಹಾರ ತಮಗೆ ಈವರೆಗೂ ತಲುಪಿಲ್ಲ ರೈತರು ದೂರಿದ್ದಾರೆ,ಸರ್ಕಾರ ರೈತರ ಹೆಸರಲ್ಲಿ ರೈತರಿಗೇ ಮಹಾ ಮೋಸ ಮಾಡುತ್ತಿದೆ ವಂಚಿಸುತ್ತಿದೆ ಎಂದು ರೈತರು ದೂರಿದ್ದಾರೆ.ಬೀಜ ಗೊಬ್ಬರ ವದಗಿಸುವಲ್ಲಿ ರೈತರ ಬಗ್ಗೆ ಜಿಲ್ಲಾಡಳತ ಹಾಗೂ ಉಸ್ಥುವಾರಿ ಸಚಿವರು ಸ್ವಯಂ ಕಾಳಜಿ ವಹಿಸಬೇಕಿದೆ, ಕಾಳಸಂತೆ ಮಾರಾಟ,ಅಧಿಕ ದರದಲ್ಲಿ ಮಾರಾಟ,ಕಳಪೆ ಗುಣಮಟ್ಟದ ಬೀಜ ಮಾರಾಟ ಸೇರಿದಂತೆ ರೈತರನ್ನು ವಂಚಿಸುವ ಜಾಲ ಮಾರುಕಟ್ಟೆಯಲ್ಲಿದ್ದು.ರೈತರನ್ನು ಹೊಂಚಿಸಿವ ಹುನ್ನಾರಗಳನ್ನು ಭ್ರಷ್ಟ ಅಧಿಕಾರಿಗಳು ಹಾಗೂ ಬಂಡವಾಳ ಶಾಹಿಗಳು,ಬಲೆ ಹೆಣೆದಿದ್ದು ಇವುಗಳಿಂದ ರೈತರನ್ನು ವಂಚನೆಯಿಂದ ಕಾಪಾಡಬೇಕಿದೆ. ಕಾರಣ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೇಗೊಳ್ಳಬೈಕಿದೆ,ರೈತರಿಗೆ ಉತ್ತಮ ಗುಣಮಟ್ಟದ ಬೀಜ ಗೊಬ್ಬರ ಸಕಾಲಕ್ಕೆ ಒದಗಿಸುವಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕಿದೆ ಎಂದು ಈ ಮೂಲಕ ಉಸ್ಥುವಾರಿ ಸಚಿವರಿಗೆ ಅವರು ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ರೈತ ಸಂಘದ ಕೂಡ್ಲಿಗಿ ತಾಲೂಕು ಅಧ್ಯಕ್ಷ ಬಣಕಾರ ಚನ್ನಬಸಪ್ಪ,ಉಪಾಧ್ಯಕ್ಷ ಬನ್ನಿ ಭೀಮಪ್ಪ,ಕುರುಬರ ಸಂಘದ ಮುಖಂಡ ಬಸವರಾಜ,ಬನ್ನಿ ನಾಗರಾಜ, ಚಂದ್ರಪ್ಪ ಸೇರಿದಂತೆ ಗ್ರಾಮದ ರೈತರು ಇದ್ದರು.
ವರದಿ – ಚಲುವಾದಿ ಅಣ್ಣಪ್ಪ.