ಭತ್ತದ ಖರೀದಿ ಕೇಂದ್ರ ತೆರೆಯದೆ,ಮೊಸಳೆ ಕಣ್ಣೀರು ಸುರಿಸುವ ಸರ್ಕಾರದ ಹೂರಣವನ್ನು ಬಿಚ್ಚಿಟ್ಟ ಜಿಲ್ಲೆಯ ಅಧಿಕಾರಿಗಳು.
ಕರ್ನಾಟಕ ರೈತ ಸಂಘ (AIKKS) ಮತ್ತು ಕರ್ನಾಟಕ ರಾಜ್ಯ ರೈತ ಸಂಘ (KRRS) ಜಂಟಿ ಸಂಘಟನೆಗಳಿಂದ ದಿನಾಂಕ 26-05-2021 ರಂದು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಕಳಿಸಲಾಯಿತು. ರಾಯಚೂರು ಜಿಲ್ಲಾಧಿಕಾರಿಗಳ ಮುಖಾಂತರ ಜಿಲ್ಲಾ ಮಟ್ಟದ ಮೂರು ಜನ ಅಧಿಕಾರಿಗಳನ್ನು ಬೇಟಿಯಾಗಿ ಸರ್ಕಾರದ ಮಟ್ಟದಲ್ಲಿ ನಡೆದ ಖರೀದಿ ವ್ಯವಹಾರದ ಕುರಿತು ಚರ್ಚೆ ನಡೆಸಲಾಯಿತು. ಅಪಾರ ಜಿಲ್ಲಾಧಿಕಾರಗಳು,ಆಹಾರ ನಾಗರಿಕ ಸರಬರಾಜು ಇಲಾಖೆ ಅಧಿಕಾರಿ ಮತ್ತು ಕೃಷಿ ಉಪ ನಿರ್ದೇಶಕರು, ಸರ್ಕಾರದ ಆಡಳಿತಾತ್ಮಕ ಸಮಸ್ಯೆಯನ್ನು ನಮೊಂದಿಗೆ ಹಂಚಿಕೊಂಡರು. ಸರ್ಕಾರ ಕೋರೋನ ನಿಯಂತ್ರಣ ಕಾರ್ಯದಲ್ಲಿ ಬಿಜಿಯಾಗಿದೆ. ಜೀವ ಉಳಿಸುವ ಕಾರ್ಯ ಮುಖ್ಯವಾಗಿದೆ ಹೊರತು ಭತ್ತದ ಖರೀದಿ ಕೇಂದ್ರ ಇತರೆ ವ್ಯಾವಹಾರ ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯವೆಂದರು. ರಾಯಚೂರ ಜಿಲ್ಲೆಯಲ್ಲಿ 5 ಲಕ್ಷ ಕ್ವಿಂಟಲ್ ಜೋಳ ಖರೀದಿ ಮಾಡಲಾಗಿದೆ ಆ ಹಣ ಕೊಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಇದಲ್ಲದೆ ಕಳೆದ ವರ್ಷ ರಾಜ್ಯದ ಲಕ್ಷಾಂತರ ರೈತರ 1066 ಕೋಟಿ ಬಾಕಿ ಉಳಿದುಕೊಂಡಿದೆ. ಈ ಎಲ್ಲಾ ಕಾರಣಗಳಿಂದ ಮುಖ್ಯವಾಗಿ ಹಣಕಾಸಿನ ತೊಂದರೆಯಿಂದ ಮೇ 5 ರಿಂದ ಭತ್ತದ ಖರೀದಿ ನೋಂದಣಿ ನಿಲ್ಲಿಸಲು ಸರ್ಕಾರ ಸೂಚನೆ ನೀಡಿದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ, ಸರ್ಕಾರದಿಂದ ಆದೇಶ ಬಂದರೆ ಮಾತ್ರ ಖರೀದಿ ಕೇಂದ್ರ ತೆರೆಯಲಾಗುತ್ತದೆ ಎಂದು ತಮ್ಮ ಅಸಾಯಕತೆಯನ್ನು ಹೇಳಿಕೊಂಡರು. ಮೂರು ಜಿಲ್ಲೆಯ ಶಾಸಕರು ಸಂಸದರು ಸರ್ಕಾರ ದ ಮೇಲೆ ಒತ್ತಡ ಹಾಕಿದರೆ ಮಾತ್ರ ಖರೀದಿ ತೆರೆಯುವುದು ಮತ್ತು ಮುಕ್ತ ಮಾರುಕಟ್ಟಗೆ ಸಂಬಂಧಿಸಿದಂತೆ ಸ್ಪಷ್ಟವಾದ ತೀರ್ಮಾನವಾಗಬಹುದು. ರೈತರು ಒಂದು ತಿಂಗಳು ಗೋಡಾನಗಳಲ್ಲಿ ಸ್ಟಾಕ್ ಇಟ್ಟು ಆಡಮಾನ ಸಾಲ ಪಡೆಯಬಹುದೆಂದು ಕೆಲವು ಅಧಿಕಾರಿಗಳು ಸಲಹೆ ನೀಡಿದರು. ರೈತರಿಗೆ ವಿಷಯ ತಿಳಿಸಿ ವ್ಯಾಪಕವಾದ ಪ್ರಚಾರ ಮಾಡಿರೆಂದು ನಮಗೆ ತಿಳಿಸಿದರು. ಆದರೆ ಕಳೆದ ಅಂಗಾಮಿನ ಬೆಳೆಯ ಬಾಕಿ ಹಣವನ್ನು ಉಳಿಸಿಕೊಂಡ ಸರ್ಕಾರ ಬಳಿ ಆಡಮಾನ ಸಾಲ ಕೊಡಲು ಹಣ ಎಲ್ಲಿದೆ ಎನ್ನುವ ಪ್ರಶ್ನೆ ಕಾಡುತ್ತಿದೇ. ಈ ಹಿನ್ನೆಲೆಯಲ್ಲಿ ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಭತ್ತ ಬೆಳೆದ ರೈತರು ಆಯಾ ಭಾಗದ ಶಾಸಕರಿಗೆ ಮತ್ತು ವಿರೋಧ ಪಕ್ಷದ ರಾಜಕಾರಣಿಗಳಿಗೆ ಒತ್ತಡ ಹಾಕಬೇಕು. ಈಗಾಗಲೇ ಬಹುತೇಕ ಸಣ್ಣ ರೈತರು ಚೀಲ ಒಂದಕ್ಕೆ (75 ಕೇಜಿ ಚೀಲ) 1000 ರೂ ಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿ ನಷ್ಟಗೊಂಡಿದ್ದಾರೆ. ಶೀಘ್ರವಾಗಿ ಖರೀದಿ ಕೇಂದ್ರ ಕೇಂದ್ರ ತೆರೆದರೆ ಇನ್ನುಳಿದ ಕೆಲವು ರೈತರಿಗಾದರೂ ಅನುಕೂಲವಾಗುತ್ತದೆ. ರೈತರು ಆಡಮಾನ ಸಾಲಕ್ಕೆ ಒತ್ತಾಯಸಿ ಹೋರಾಡಬೇಕೆಂದು ಕರೆ ಕೊಡಲಾಗಿದೆ.
ಹಕ್ಕೊತ್ತಾಯಗಳು
1) ಅತಿ ಶೀಘ್ರವಾಗಿ ಗ್ರಾಮ ಪಂಚಾಯತಿಗೊಂದು ಸರ್ಕಾರಿ ಖರೀದಿ ಕೇಂದ್ರ ತರೆಯಬೇಕು.
2) ಖಾಸಗಿ ಖರೀದಿದಾರರು ಸರಕಾರ ನಿಗದಿ ಮಾಡಿದ ಬೆಂಬಲ (1860 ರೂ) ಬೆಲೆಯಲ್ಲೇ ಭತ್ತ ಖರೀದಿ ಮಾಡಲು ಕಟ್ಟುನಿಟ್ಟಿನ ಆದೇಶ ಮಾಡಬೇಕು.
3) ಎಪಿಎಂಸಿ ಆವರಣದಲ್ಲಿನ ಖರೀದಿ ವ್ಯಾವಹಾರದ ಸಮಯವನ್ನು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಿಗದಿ ಮಾಡಬೇಕು.
4) 10 ಎಕರೆಗಿಂತ ಕಡಿಮೆ ಭೂಮಿಯುಳ್ಳ ರೈತರು ಬೆಳೆದ ಭತ್ತಕ್ಕೆ ಸರ್ಕಾರ ಆಡಮಾನ ಸಾಲ ಒದಗಿಸಬೇಕು.
4) ಅಕಾಲಿಕ ಮಳೆಯಿಂದ ಭತ್ತದ ಬೆಳೆ ನಷ್ಟವಾಗಿರುವ ರೈತರ ಪ್ರತಿ ಎಕರೆಗೆ 25 ಸಾವಿರ ಪರಿಹಾರ ಕೊಡಬೇಕು.
6) ಕೃಷಿ, ಕಂದಾಯ, ಎಪಿಎಂಸಿ, ಆಹಾರ ಇಲಾಖೆ ಮತ್ತು ಚುನಾಯಿತ ಪ್ರತಿನಿಧಿಗಳು, ರೈತ ಸಂಘಟಕರ ನೇತೃತ್ವದ ಸಮಿತಿ ರಚನೆ ಮಾಡಿ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಲು ಅನುಕೂಲ ಕಲ್ಪಿಸಬೇಕು ಎಂದರು ಚಾಮರಸ ಮಾಲಿಪಾಟಿಲ್ ರಾಜ್ಯ ಗೌರವ ಅಧ್ಯಕ್ಷರು (KRRS) ಡಿ.ಹೆಚ್. ಪೂಜಾರ ರಾಜ್ಯಾಧ್ಯಕ್ಷರು (KRS) ಚಿಟ್ಟೆ ಬಾಬು ಬಸವರಾಜ ಬೆಳಗುರ್ಕಿ ಬಿ.ಎನ್.ಯರದಿಹಾಳ ಕರ್ನಾಟಕ ರೈತ ಸಂಘ ಸಂಘ (AIKKS) ಜಿಲ್ಲಾ ಸಮಿತಿ ರಾಯಚೂರು.
ವರದಿ – ಸಂಪಾದಕೀಯ