ಸಿಐಟಿಯುನ ಸಂಸ್ಥಾಪನಾ ದಿನದ ಅಂಗವಾಗಿ ತಾವರಗೇರಾ ಪಟ್ಟಣದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಇಂದು ಸಿಐಟಿಯುನ ತಾಲೂಕ ಸಮಿತಿ ವತಿಯಿಂದ ತಾವರಗೇರಾ ಪಟ್ಟಣದಲ್ಲಿ ಸಿಐಟಿಯುನ ಸಂಸ್ಥಾಪನಾ ದಿನದ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಈ ಕಾರ್ಯಕ್ರಮಕ್ಕೆ ಉದ್ದೇಶಿಸಿ ದೇಶ ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿಹೊಂದಿದ್ದರೂ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಭಗತ್‌ಸಿಂಗ್, ನೇತಾಜಿ ಸುಭಾಷ್‌ಚಂದ್ರಬೋಸ್, ಮಾಸ್ಟರ್ ಸೂರ್ಯಸೇನ್, ಪ್ರೀತಿಲತಾ ವದ್ದೇದಾರ್, ರಾಮ್‌ಪ್ರಸಾದ್ ಬಿಸ್ಮಿಲ್ಲಾರಂತಹ ಅಸಾಧಾರಣ ವ್ಯಕ್ತಿಗಳ ಸ್ವತಂತ್ರ ಭಾರತದ ಕನಸು ಇನ್ನೂ ಸಾಕಾರವಾಗಿಲ್ಲ ಎಂದು ವಿಷಾದಿಸಿದರು. ಸ್ವಾತಂತ್ರ್ಯ ಹೋರಾಟಗಾರರು ಪ್ರತಿಯೊಬ್ಬ ಪ್ರಜೆಗೂ ಶಿಕ್ಷಣ, ಆರೋಗ್ಯ, ವಸತಿ ಹಾಗೂ ಉದ್ಯೋಗಗಳಲ್ಲಿ ಸಮಾನ ಅವಕಾಶ ದೊರೆಯುವಂತಹ ದೇಶ ಕಟ್ಟುವ ಕನಸನ್ನು ಕಂಡಿದ್ದರು ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಪೇಂಟರ್ ಕರಕುಶಲ ಕಟ್ಟಡ ಕಾರ್ಮಿಕ ಮುಖಂಡರುಗಳು ಭಾಗವಹಿಸಿದ್ದರು ಕಲಾವತಿ ಸಿಐಟಿಯುನಿಂದ ತಾಲೂಕ ಘಟಕದ ಅಧ್ಯಕ್ಷರು ಪಾಲುಗೊಂಡಿದ್ದರು.
ವರದಿ – ಅಮಾಜಪ್ಪ ಹೆಚ್.ಜುಮಾಲಾಪೂರ