ನಾಡಿಗೆ ಹೆಸರಾಂತ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಅಂಕಲಿಮಠದ ಶ್ರೀ ಸದ್ಗುರು ನಿರುಪಾಧೀಶ್ವರ ರಥೋತ್ಸವ ರದ್ದು.

Spread the love

ನಾಡಿಗೆ ಹೆಸರಾಂತ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಅಂಕಲಿಮಠದ ಶ್ರೀ ಸದ್ಗುರು ನಿರುಪಾಧೀಶ್ವರ ರಥೋತ್ಸವ ರದ್ದು.

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಸುಕ್ಷೇತ್ರ ಶ್ರೀ ಅಂಕಲಿಮಠ (ತಲೆಕಟ್ಟು)ದಲ್ಲಿ ಜೂನ್ 2 ರಂದು ನಡೆಯಬೇಕಾಗಿದ್ದ ಶ್ರೀ ಸದ್ಗುರು ನಿರುಪಾಧೀಶ್ವರ ಮಹಾ ರಥೋತ್ಸವವನ್ನು, ಕೊರೋನಾ ಹೆಚ್ಚಾದ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ ಎಂದು ಶ್ರೀ ಮಠದ ಪೂಜ್ಯರಾದ ಶ್ರೀ ವೀರಭದ್ರ ಮಹಾ ಸ್ವಾಮಿಗಳು ಸುಕ್ಷೇತ್ರ ಅಂಕಲಿಮಠರವರು,  ಶ್ರೀ ಮಠದ ಭಕ್ತರಿಗೆ ತಿಳಿಸಿದ್ದಾರೆ. ಜೂನ್ 1 ಮತ್ತು 2 ರಂದು ಸಾಂಕೇತಿಕವಾಗಿ ಶ್ರೀ ಮಠದ ಅರ್ಚಕರು ಸದ್ಗುರು ನಿರುಪಾಧೀಶ್ವರ ಕತೃ ಗದ್ದುಗೆ ಪೂಜೆ ಸಲ್ಲಿಸುವರು ಎಂದು ತಿಳಿಸಿದ್ದಾರೆ. ಕೊರೋನಾ ಹೆಚ್ಚಾದ ಹಿನ್ನೆಲೆಯಲ್ಲಿ ಜಾತ್ರೆಯ ನ್ನು ರದ್ದು ಮಾಡಿದ ಕಾರಣ  ಶ್ರೀ ಮಠದ ಭಕ್ತರು ತಮ್ಮ ತಮ್ಮ ಮನೆಯಲ್ಲಿ ಪೂಜೆ ಸಲ್ಲಿಸುವದರ ಮೂಲಕ ಸದ್ಗರುವಿನ ಆಶೀರ್ವಾದ ಪಡೆದುಕೊಳ್ಳಬೇಕು. ಎಂದು ಪೂಜ್ಯರು ತಿಳಿಸಿದ್ದಾರೆ. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ, ಹಾಗೂ ಕಡ್ಡಾಯವಾಗಿ ಲಸಿಕೆಯನ್ನು ಹಾಕಿಸಿಕೊಳ್ಳುವುದರ ಮೂಲಕ ಕೊರೋನಾದಿಂದ ಮುಕ್ತ ರಾಗಬೇಕು ಎಂದು ಪೂಜ್ಯರು ಸಂದೇಶ ನೀಡಿದ್ದಾರೆ. ಆದ ಕಾರಣ ತಾವೆಲ್ಲರೂ ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ನಾವು ನೀವೆಲ್ಲರೂ ಪಾಲಿಸೋಣ ಎಂದು ಹೇಳಿದರು.  ಸರ್ವೇ ಜನ ಸುಖಿನೋ ಭವಂತು.

ವರದಿ – ಶರಣು ಗುಮಗೇರಿ.

Leave a Reply

Your email address will not be published. Required fields are marked *