ಪರಿ ಪರಿಯಾಗಿ ವಿನಂತಿಸಿದರೂ ಲೆಕ್ಕಿಸದೆ ರಸ್ತೆಗಿಳಿದವರಿಗೆ ಬಿಸಿ ಮುಟ್ಟಿಸಿದ ಪೊಲೀಸರು.
ರಾಯಚೂರು ಜಿಲ್ಲಾಡಳಿತವು ಸರಕಾರ ಆದೇಶದಂತೆ ಕಠಿಣ ನಿರ್ಬಂಧ ಲಾಕ್ ಡೌನ ಮಾಡಿದ್ದು,ಅನಗತ್ಯವಾಗಿ ತಿರುಗಾಡುವವರಿಗೆ ಮಸ್ಕಿ ಪಿಎಸ್ಐ ಸಿದ್ದರಾಮ್ ಬಿದರಾಣಿ ಬೆತ್ತದ ರುಚಿ ತೋರಿಸಿದ್ದಾರೆ. ಲಾಠಿ ಏಟಿನ ಜತೆಗೆ ಅವರಿಗೆ ದಂಡ ಹಾಕಲಾಗುತ್ತಿದೆ. ಇನ್ನೊಮ್ಮೆ ಅನವಶ್ಯವಾಗಿ ರಸ್ತೆ ಗಿಳಿಯ ಬೇಡಿ ಎಂದು ವಾಲ್ಮೀಕಿ ಸರ್ಕಲ್ ಪೊಲೀಸರು ಹೇಳುವ ದೃಶ್ಯ ಕಂಡುಬಂತು. ಭಾನುವಾರ ರಸ್ತೆಗಿಳಿದ ಸಾರ್ವಜನಿಕರಿಗೆ ಸರಕಾರದ ಆದೇಶ ಪಾಲಿಸಿ, ನಿಮ್ಮ ಜೀವ ಉಳಿಸಿಕೊಳ್ಳಿ, ಯಾರು ಮನೆಯಿಂದ ಆಚೆ ಬರಬೇಡಿ. ನಿಮಗೆ ಅವಶ್ಯಕತೆ ಇದ್ದಾಗ ಮಾತ್ರ ಹೊರಗೆ ಬನ್ನಿ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ. ಮುಖಕ್ಕೆ ಮಾಸ್ಕ್ ಧರಿಸಿಕೊಳ್ಳಿ. ಆಗಾಗ ಸಾಬೂನಿನಿಂದ ಕೈ ತೊಳೆದುಕೊಳ್ಳಿ ಸ್ಯಾನಿಟೈಸರ್ ಬಳಸಿ. ನಿಮ್ಮ ಕುಟುಂಬ ನೀವು ರಕ್ಷಣೆಯಿಂದ ಎಂದು ಹೇಳುವುದು ಕಂಡು ಬಂತು. ಇಷ್ಟಾದರೂ ಸಾರ್ವಜನಿಕ ಅನಗತ್ಯ ತಿರುಗಾಡುವ ಕಜ್ಜಾಯ ನೀಡಿದರು. ಸಾರ್ವಜನಿಕರು ಯಾವಾಗ ಎಚ್ಚೆತ್ತುಕೊಳ್ಳುತ್ತಾರೆ ಕಾದುನೋಡಬೇಕು.
ವರದಿ – ಆನಂದ್ ಸಿಂಗ್ ಕವಿತಾಳ