ವಾಲಂಟಿಯರ್ ತೀರ್ಪುಗಾರರಾಗಿ ಪ್ರಶಂಸೆಗೆ ಪಾತ್ರರಾದ ಡಾ.ಅಂಬಿಕಾ ಹಂಚಾಟೆ.

Spread the love

ಏಷ್ಯಾ ಪೆಸಿಫೆಕ್ ಸ್ಟೀವ್ ಅವಾರ್ಡ್ ನ ವಿವಿಧ ಹಂತಗಳಲ್ಲಿ ತಮ್ಮದೇ ಆದ ಪ್ರತಿಭೆ ತೋರಿಸಿ ಪ್ರಶಂಸೆಗೆ ಪಾತ್ರರಾದ ಡಾ.ಅಂಬಿಕಾ ಹಂಚಾಟೆಯವರು 2018 ರಲ್ಲಿ ನಡೆದ ಕಂಪನಿ ಆರ್ಗನೈಜೇಶನ್ ಮತ್ತು ಆಚೀವಮೆಂಟ್ ವಿಭಾಗದಲ್ಲಿ ಜ್ಯುರಿ ಆಗಿ ಪ್ರಮಾಣ ಪತ್ರ ಪಡೆದಿರುವುದು. ಮತ್ತೆ ಅದೇ ವರುಷ ಮಾನವ ಸಂಪನ್ಮೂಲ ವಿಭಾಗದಲ್ಲೂ ತಮ್ಮ ಕಾರ್ಯ ಶ್ಲಾಘನೆ ತೋರಿ ಅರ್ಹತಾ ಪ್ರಮಾಣಪತ್ರ ಪಡೆದಿರುತ್ತಾರೆ.

ಇನ್ನು 2019 ರಲ್ಲಿ ಕ್ರಿಯೇಟಿವ್ ವಿಭಾಗದಲ್ಲಿ ವೆಬ್ಸೈಟ್, ಯಾಪ್,ಇವೆಂಟ್ ಇನ್ನಿತರ ಉಪ ವಿಭಾಗಗಳಲ್ಲಿ ತೀರ್ಪುಗಾರರಾಗಿ ಕಾರ್ಯ ಸಾಧಿಸಿ ಪ್ರಶಂಸಾ ಪತ್ರ ಮತ್ತು 2021 ರಲ್ಲಿ ಕಂಪನಿ ಆರ್ಗನೈಜೇಶನ್ ಮತ್ತು ಆಚೀವಮೆಂಟ್ ನಲ್ಲಿ ಉತ್ತಮ್ ಕಾರ್ಯವನ್ನು ಮಾಡಿರುತ್ತಾರೆ .ಜಾಗತಿಕ ಮಟ್ಟದಲ್ಲಿ ಮಡೆಯುವ ವಿವಿಧ ಕಂಪನಿ/ ಆರ್ಗನೈಜೈಸೆಷನ ಗಳ ವಿಶೇಷ ವಿಷಯ ವಸ್ತು, ಇನ್ನೊವೆಟಿವ್ ಹಾಗೂ ನವೀನ ಕಾರ್ಯ ಸಾಧನೆಗಾಗಿ ನಡೆಯುವ ವಿಶ್ವಮಟ್ಟದ ಸ್ಪರ್ಧೆಯಲ್ಲಿ ನೂರಾರು ಸಂಸ್ಥೆಯ CEO, ನಿರ್ದೇಶಕರು ಭಾಗವಹಿಸಿದ್ದು ಈ ಫಲಕದ ತೀರ್ಪಿನ ಕಾರ್ಯಕ್ಕೆ ಜಾಗತಿಕ ಮಟ್ಟದಲ್ಲಿ ಆಯಾ ಪ್ರತಿಭೆಗಳನ್ನು ತೀರ್ಪುಗಾರರಾಗಿ ಆಹ್ವಾನಿಸಲಾಗಿರುತ್ತಾರೆ

ಇಂತಹ ಕಾರ್ಯದಲ್ಲಿ ಸತತ 2014 ರಿಂದ ತಮ್ಮ ಕಾರ್ಯಪ್ರವೃತ್ತಿಯನ್ನು ,ಅನಿಸಿಕೆ ಅಭಿಪ್ರಾಯಗಳನ್ನು ,ನೀಡುವದರೊಂದಿಗೆ ,ಉತ್ತಮ ಪ್ರತಿಕ್ರಿಯೆಯೊಂದಿಗೆ ಮುನ್ನಡೆಯುತ್ತಿರುವ ಡಾ.ಅಂಬಿಕಾ ಹಂಚಾಟೆಯವರಿಗೆ ಶುಭವಾಗಲಿ ಎಂದು ಸಮಸ್ತ ಜನ ಮನ ಸಂಸ್ಥೆಯ ಬಳಗ ಅಭಿನಂದಿಸುತ್ತದೆ. ಹಾಗೂ 2021 ರ ಗ್ಲೋಬಿ @ ಬ್ಯುಸಿನೆಸ್ ಅವಾರ್ಡ್ ಗೆ ಡಿಸ್ರಪ್ಟ್ರ್ ವಿಭಾಗದಲ್ಲಿ ತೀರ್ಪುಗಾರರಾಗಿ ತೊಡಗಿಕೊಂಡಿದ್ದು ತಮ್ಮ ಅನುಭವವನ್ನು ಹಂಚಿಕೊಂಡಿರುತ್ತಾರೆ .

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಗೆ ಹೋಗಿ :

https://m.facebook.com/story.php?story_fbid=1186130755165845&id=100013067958137

ಧನ್ಯವಾದಗಳು.

 

 

Leave a Reply

Your email address will not be published. Required fields are marked *