ಕೋವಿಡ್ ಸೆಂಟರನಲ್ಲಿ ಚಿಕಿತ್ಸೆ ಪಡೆದ ಸೊಂಕಿತರಿಗೆ 2 ಸಾವಿರ ರೂ/ ಬಂಪರ್ ಆಪರ್ ನೀಡಿದ ಚಿಕ್ಕ ಮಾದಿನಾಳ ಗ್ರಾ ಪಂ ಅಧ್ಯಕ್ಷ.
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಚಿಕ್ಕ ಮಾದಿನಾಳ ಗ್ರಾ ಪಂ ಅಧ್ಯಕ್ಷ ಶ್ರೀ ತಿಪ್ಪಣ್ಣ ಗಿಡ್ಡಿ ಕೋವಿಡ್ ಕೆರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆದ ಪ್ರತಿಯೊಬ್ಬರಿಗೂ ಎರಡು ಸಾವಿರ ರೂಪಾಯಿ ನಗದು ಬಹುಮಾನ ಘೋಷಣೆ ಮಾಡಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಇಡಿ ಕೊಪ್ಪಳ ಜಿಲ್ಲೆಯ ಚಿತ್ತ ಕನಕಗಿರಿ ತಾಲ್ಲೂಕಿನ ಚಿಕ್ಕ ಮಾದಿನಾಳ ಗ್ರಾ ಪಂ ಅಧ್ಯಕ್ಷ ನತ್ತ ಎನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ. ಮೊನ್ನೆತ್ತಾನೆ ಗಂಗಾವತಿ ತಾಲ್ಲೂಕಿನ ಹೇರೂರು ಗ್ರಾ ಪಂ ಅಧ್ಯಕ್ಷ ಕೊರೊನಾ ಟೆಸ್ಟ್ ಮಾಡಿಸಿಕೊಂಡವರಿಗೆ ತಲಾ ಐದುನೂರು ರೂ/ ಕೊಡುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ. ಇತ್ತ ಕನಕಗಿರಿ ತಾಲ್ಲೂಕಿನ ಚಿಕ್ಕ ಮಾದಿನಾಳ ಗ್ರಾ ಪಂ ಅಧ್ಯಕ್ಷ ರಿಂದ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆದವರಿಗೆ ತಲಾ ಎರಡು ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಹೆಳಿದ್ದಾರೆ. ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ಕನಕಗಿರಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಪಾಸಿಟಿವ್ ಪ್ರಕರಣ ಬೆಳಕಿಗೆ ಬರುತ್ತಿದ್ದು. ಅದನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಹಗಲು / ರಾತ್ರಿ ಎನ್ನದೆ ಅದರ ವಿರುದ್ಧ ಹೋರಾಡುತ್ತ ಇದ್ದಾರೆ. ಇದನ್ನರಿತ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಪ್ಪಣ್ಣ ಗಿಡ್ಡಿಯವರು ಚಿಕ್ಕ ಮಾದಿನಾಳ ಗ್ರಾ ಪಂ ಯಲ್ಲಿ ಕೋವಿಡ್ ಕೇರ್ ಸೆಂಟರ್ ಲ್ಲಿ ಚಿಕಿತ್ಸೆ ಪಡೆದವರಿಗೆ ಎರಡು ಸಾವಿರ ರೂಪಾಯಿ ನಗದು ಬಹುಮಾನ ಘೋಷಣೆ ಮಾಡಿ ಕರುನಾಡಿಗೆ ಮಾದರಿ ಆಗಿದ್ದಾರೆ. ಎನೆ ಆಗಲಿ. ಕರುನಾಡಿನಾದ್ಯಂಥ ಪ್ರತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮನಸ್ಸು ಮಾಡಿ ಇಂತಹ ಜನಪರ ಜನ ಹಿತ ಕಾಪಾಡಲು ಇದೆ ಜನಸೇವೆ ಮಾಡಿದರೆ, ಪ್ರತಿ ಗ್ರಾಮವು ಕರೋನ ಮುಕ್ತ ಗ್ರಾಮ ಆಗುವುದರಲ್ಲಿ ಸಂದೇಹ ಇಲ್ಲ.
ವರದಿ – ಅಮಾಜಪ್ಪ ಹೆಚ್.ಜುಮಾಲಾಪೂರ