ಕೂಡ್ಲಿಗಿ ತಾಲೂಕಿನ ತಿಪ್ಪೇಹಳ್ಳಿ:ಶ್ರೀಕೊರೋನದೇವಿಯನ್ನ ಗ್ರಾಮದ ಗಡಿ ದಾಟಿಸಿದ ಗ್ರಾಮಸ್ಥರು-
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿ ಹೋಬಳಿ ವ್ಯಾಪ್ತಿಯ ತಿಪ್ಪೇಹಳ್ಳಿ ಗ್ರಾಮದಲ್ಲಿ, ಗ್ರಾಮಸ್ಥರು ಮಹಾ ಮಾರಿ ಶ್ರೀಕೊರೊನವ್ವಳನ್ನು ಓಡಿಸಿದ ಬಗೆ ಇದು. ಲೇ….ಕೊರೊನವ್ವ,ನೀನು ಊರು ಕಡೆ ತಲೆ ಹಾಕಿದ್ರೆ ಸರಿ ಕಾಣಲ್ಲ ನೋಡು. ತಿರುಗಿ ನೋಡ್ದಂಗೆ ಸುಮ್ನೆ ಹೊಂಟೋಗ್ತಿರಬೇಕು…ನೀನು,ಎಂದು ಕೊರೋನಮ್ಮಳಿಗೆ ಗ್ರಾಮಸ್ಥರು ಬೊಬ್ಬೆಹೊಡೆದು ಹಚಾಹ್ ಹಾಕಿದ್ದಾರೆ. ಬಹುತೇಕರು ಭಯ ಭಕ್ತಿ ಶ್ರದ್ಧೆಯಿಂದ ಪೂಜಿಸಿ ಪೂಜಿಸಿದ್ದಾರೆ, ಗ್ರಾಮದ ಹಿರಿಯರ ಕೈಯಲ್ಲಿ ಪುಟ್ಟದೊಂದು ಮಣ್ಣಿನ ಕುಡಿಕೆ ಇಟ್ಟುಕೊಂಡು,ಅದರಲ್ಲಿ ಬೇವಿನ ಸೊಪ್ಪು ತುಂಬಿ ಊರ ಮುಂದಿನ ಮಾರಮ್ಮನ ದೇವಸ್ಥಾನ ಮುಂಬಾಗ ಬಳಿ ಸಾಮೂಹಿಕ ಪೂಜೆ ನೆರವೇರಿಸಿದರು. ನಂತರ ಅದನ್ನು ಹೊತ್ತೊಯ್ದು ಗ್ರಾಮದ ಗಡಿ ದಾಟಿಸಿದರು. ಮರಳಿ ಬರುವಾಗ ಕೊರೊನವ್ವ ಊರು ಕಡೆ ತಲೆ ಹಾಕಿದ್ರೆ ಸರಿ ಕಾಣಲ್ಲ ಅಂತ ಬೈದಿದ್ದಾರೆ, ಅಲ್ಲಿಗೆ ಮಾರಿಯೊಂದನ್ನು ಓಡಿಸಿದ ಸಂತೃಪ್ತ ಬಾವ ಅವರದ್ದು. ಇಂದಿಗೂ ಕೂಡ ಗಾಳಿ(ಸೋಂಕು) ಮಾರವ್ವ, ದುರುಗವ್ವ ಅಂದೆಲ್ಲ ದೇವರುಗಳು ಹಳ್ಳಿಗಳಲ್ಲಿವೆ. ಪ್ರತಿ ವರ್ಷ ಊರು ಅಮ್ಮ ಎಂಬ ಜಾನಪದಬಹಬ್ಬ ಮಾಡಿಕೊಂಡು ಎಲ್ಲರೂ ಊಟ ಮಾಡುತ್ತಾರೆ, ಗ್ರಾಮೀಣ ಭಾಗದ ತಿಪ್ಪೇಹಳ್ಳಿಯಲ್ಲಿ ಇಂತಹದ್ದೊಂದು ಆಚರಣೆ ಮಾಡಲಾಯಿತು. ಮೊರಗಳಲ್ಲಿ ಸಾವಿರಾರು ಹೋಳಿಗೆಗಳ ನೀಟಾಗಿ ಜೋಡಿಸಿ, ಕುಡಿಕೆ, ಬೇವಿನಸೊಪ್ಪು ಸಿಹಿ ಖಾಧ್ಯ ಪದಾರ್ಥಗಳನ್ನು,ಇಟ್ಟು ಪೂಜೆ ಮಾಡಿ ಊರ ಗಡಿ ದಾಟಿಸಿ ಬರುತ್ತಾರೆ,ಊರಿಗೆ ಅಂಟಿದ ಪೀಡೆ ನಿವಾರಣೆ ಆಯಿತೆಂಬ ನಂಬಿಕೆ ಅವರದ್ದಾಗಿದ್ದು ಗ್ರಾಮಸ್ಥರೆಲ್ಲರೂ ಉಪಸ್ಥಿತರು.
ವರದಿ – ಚಲುವಾದಿ ಅಣ್ಣಪ್ಪ